ಕೋಲಾರ : ಜಿಲ್ಲೆಯ ಬಂಗಾರಪೇಟೆಗೆ ಇಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆಗಮಿಸಿದ್ದರು. ಕೆಜಿಎಫ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗಿಯಾಗುವ ಸಲುವಾಗಿ ಕೋಲಾರಕ್ಕೆ ಬಂದಿದ್ದರು. ಮೊದಲಿಗೆ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಬೃಹತ್ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಅಣ್ಣಾಮಲೈ, ಮೇಕೆದಾಟು ವಿಚಾರವಾಗಿಯೂ ಮಾತನಾಡಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕಕ್ಕೆ ಹಲವು ಬಾಂಧವ್ಯಗಳ ವಿಚಾರಗಳಿವೆ. ತಮಿಳುನಾಡಿನ ಎಷ್ಟೋ ಮಂದಿ ಬೆಂಗಳೂರಿನ ಐಟಿಯಲ್ಲಿದ್ದಾರೆ. ಮೇಕೆದಾಟು ವಿಚಾರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆಗಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ಇದನ್ನೇ ಹೇಳಿದ್ದಾರೆ. ನಾನು ಯೋಜನೆ ಪರವೋ ವಿರುದ್ಧವೋ ಎಂಬುದು ಮುಖ್ಯವಲ್ಲ ಎಂದಿದ್ದಾರೆ. ಇನ್ನು ಮೇಕೆದಾಟು ಯೋಜನೆಗಾಗಿ ಇತ್ತೀಚೆಗೆ ಕಾಂಗ್ರೆಸ್ ನಾಯಕರು ಕೂಡ ದೊಡ್ಡ ಹೋರಾಟವನ್ನೇ ನಡೆಸಿದ್ದರು.
ಇನ್ನು ಇದೇ ವೇಳೆ ಮುಂದಿನ ಚುನಾವಣೆ ಬಗ್ಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕೋಲಾರದಲ್ಲಿ ಬಿಜೆಪಿ ಜಯಗಳಿಸಲಿದೆ. ನಮ್ಮ ಸಂಸದರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೋಲಾರದಲ್ಲಿ ತಮಿಳು ಮಾತನಾಡುವ ಜನ ಹೆಚ್ಚು ಇದ್ದಾರೆ. ಅವರೆಲ್ಲಾ ಒಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಕೋಲಾರದಲ್ಲಿ ಸಭೆ ನಡೆಸಲು ಒಳ್ಳೆಯ ಅವಕಾಶ ಸಿಕ್ಕಿದೆ ಎಂದಿದ್ದಾರೆ.






GIPHY App Key not set. Please check settings