in ,

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಜನತಂತ್ರ ವ್ಯವಸ್ಥೆ ಉಳಿದಿದೆಯೋ ಅಥವಾ ಇಲ್ಲವೋ ? ಮಾಜಿ ಸಚಿವ ಎಚ್.ಆಂಜನೇಯ

suddione whatsapp group join

 

ಚಿತ್ರದುರ್ಗ,(ಅ.06) : ದೇಶದಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆ, ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ, ಜನತಂತ್ರ ವ್ಯವಸ್ಥೆ ಉಳಿದಿದೆಯೋ ಅಥವಾ ಇಲ್ಲವೋ ಎಂಬುದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಯೊಬ್ಬರೂ ಪ್ರಶ್ನೆ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರ ಡಿಸಿ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉತ್ತರ ಪ್ರದೇಶದ ಲಕ್ಕಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಬಂಧಿಸುಸಿರುವುದನ್ನು ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

70ರ ದಶಕದಲ್ಲಿ  ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನ ಸಲುವಾಗಿ ಇಡೀ ಜಗತ್ತಿಗೆ ಗೊತ್ತಾಗುವ ರೀತಿಯಲ್ಲಿ ಹಾಗೂ ದೇಶದ ಏಕತೆ, ಸಮಗ್ರತೆ ಕಾಪಾಡುವ ಸಲುವಾಗಿ ತುತುಈಪರಿಸ್ಥಿತಿ ಘೋಷಣೆ ಮಾಡಿದ್ದರು. ದೇಶದ ಸಾಮರಸ್ಯಕ್ಕೆ, ಶಾಂತಿಗೆ ಭಂಗ ತುರುವ, ಸಮಾಜದಲ್ಲಿ  ಒಡಕನ್ನು ಉಂಟು ಮಾಡುವ, ಪ್ರಚೋಧನೆ ಮಾಡುವ ಹಿಂಸಾತ್ಮಕ ಚಳವಳಿಗಳನ್ನ ನಿಯಂತ್ರಿಸುವ ಸಲುವಾಗಿ ಆಗಿನ ತುರ್ತು ಪರಿಸ್ಥಿತಿಯನ್ನ ಆರೋಗ್ಯಕರವಾಗಿ ಬಳಸಿಕೊಳ್ಳಲಾಗಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ದೇಶದೆಲ್ಲೆಡೆ ಕೃತಕವಾದ ಅಶಾಂತಿ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ದಲಿತರು, ಅಲ್ಪಸಂಖ್ಯಾತರು, ರೈತರು, ಜನಪರ ಹೋರಾಟಗಾರರ ಹತ್ಯೆಗಳನ್ನು ನಡೆಸಲಾಗುತ್ತಿದೆ. ಜನವಿರೋಧಿ, ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲಾಗಿದೆ. ಮೋದಿಯವರು ತನ್ನ ಕಾರ್ಪೋರೇಟ್ ಶಾಹಿ ಗೆಳೆಯರ ಸಂಪತ್ತನ್ನ ಹೆಚ್ಚು ಮಾಡಲು ಇಡೀ ದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆ.
ಸರ್ಕಾರದ ಇಂತಹ ಜನವಿರೋಧಿ ನಡೆಯನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಜರುಗುತ್ತಿವೆ ಎಂದರು.

ದೆಹಲಿ ಸುತ್ತ ಲಕ್ಷಾಂತರ ರೈತರು ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯಿದೆಗಳನ್ನು ವಿರೋಧಿಸಿ ಕಳೆದ 10 ತಿಂಗಳಿನಿಂದ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಈ ಕಾರಣಕ್ಕೆ ಮೋದಿ ಸರ್ಕಾರದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಇಂತಹ ವಿಷಮ ಸಂಧರ್ಭದಲ್ಲಿ ಉತ್ತರಪ್ರದೇಶದ ಲಖೀಂಪುರದಲ್ಲಿ ರೈತರು ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನಾ ರ್ಯಾಲಿಯ ಮೇಲೆ ವಾಹನ ಚಲಾಯಿಸಿ 8 ಜನ ರೈತರನ್ನು ಹತ್ಯೆ ಮಾಡಿದ್ದಾರೆ.

ಈ ಘಟನೆಯನ್ನು ಖಂಡಿಸಿ ರೈತರಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ಪಕ್ಷದ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕ ಗಾಂಧಿ ವಾದ್ರಾರನ್ನ ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರ ತನ್ನ ಫ್ಯಾಸಿಸ್ಟ್ ಮುಖವನ್ನ ಜಗತ್ತಿಗೆ ಮತ್ತೆ ಮತ್ತೆ ತೋರಿಸುತ್ತಿದೆ.ದೇಶದಲ್ಲಿ ಶಾಂತಿಯುತವಾಗಿ ಚಳವಳಿ ಮಾಡುವವರನ್ನು ಬಂಧಿಸುವಂತಹ ಕೆಲಸ ಮಾಡಲಾಗುತ್ತಿರುವು ಪ್ರಜಾತಂತ್ರದ ಕಗ್ಗೊಲೆ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಯಾರೂ ಮಾತನಾಡುವವರ ಅಂತವರ ವಿರುದ್ಧ ಇಡಿ, ಸಿಬಿಐ, ಐಟಿ ದಾಳಿ ಮಾಡಿಸಿ ಪ್ರತಿಕ್ಷೇತ್ರದಲ್ಲಿಯೂ ಕೂಡ ಕೈಹಾಡಿಸುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ.
ಅನ್ನ ನೀಡುವ ರೈತರು ದೇಶದ ತಂದೆ ತಾಯಿಗೆ ಸಮಾನ, ಅಂತವರನ್ನು ಕರೆದು ಮಾತನಾಡುವ ಸೌಜನ್ಯ ದೇಶದ ಪ್ರಧಾನಿಗಳಿಗಿಲ್ಲ. ರೈತರನ್ನು ಬಂಧಿಸುವ ಗೋಲಿಬಾರ್ ಮಾಡುವ ಮತ್ತು ರೈತರ ಮೇಲೆ  ವಾಹನ ಚಲಾಯಿಸಿ   ಅವರ ಪ್ರಾಣ ತೆಗೆಯುವ ಕೆಲಸವನ್ನು  ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರಣರಾಗಿದ್ದಾರೆಯೆಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಗತ್ಯವಿದ್ದರೇ ಸಕಾರಣಗಳನ್ನು ಮುಂದು ಮಾಡಿ ಘೋಷಿತ ತುರ್ತು ಪರಿಸ್ಥಿತಿ ಹೇರಲಿ ಅದನ್ನು ಬಿಟ್ಟು ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಜನರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನ ತಕ್ಷಣ ನಿಲ್ಲಿಸಬೇಕು, ಇಲ್ಲವಾದರೇ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದರು.

ಪರಿಸ್ಥಿತಿಯ ಗಂಭೀರತೆಯನ್ನ ಅರಿತು ಪ್ರಧಾನಿ ನರೇಂಧ್ರ ಮೋದಿಯವರು ಕೂಡಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿವಾದ್ರಾರವರನ್ನು ಬಿಡುಗಡೆಗೊಳಿಸಬೇಕು. ಗೌರವಯುತವಾಗಿ ನಡೆದುಕೊಂಡು ಅವರು ಮಾಡುವ ಚಳುವಳಿಗೆ ಸಹಕಾರ ಕೊಟ್ಟು ಜನರ ಭಾವನೆಗೆ ಅರ್ಥಮಾಡಿಕೊಳ್ಳುವುದನ್ನ ಕಲಿಯಬೇಕೆಂದು ಆಗ್ರಹಿಸಿದರು.

ದೇಶದಲ್ಲಿ ವಿನಾ ಕಾರಣ ನಡೆಯುವ ದೌರ್ಜನ್ಯದ ವಿರುದ್ಧ ಬೃಹತ್ ಪ್ರಮಾಣದಲ್ಲಿ ಕಾಂಗ್ರೆಸ್ ಪ್ರತಿಭಟಿಸಲು  ಕೊರೋನಾ ಕಾರಣವಾಗಿದೆ. ಕೊರೋನಾ ಇಲ್ಲದಿದ್ದರೆ  ಕಾಂಗ್ರೆಸ್ಸಿಗರ ಶಕ್ತಿ ಏನೆಂಬುದನ್ನು ತೋರಿಸಲಾಗುತ್ತಿತ್ತು.
ಕಾಂಗ್ರೆಸಿಗರಿಗೆ ಹಿಂಸಾತ್ಮಕ ಚಳವಳಿಯಲ್ಲಿ ನಂಬಿಕೆಯಿಲ್ಲ,  ಮಹಾತ್ಮಗಾಂಧಿಯವರು ಪ್ರತಿಪಾದಿಸಿದ ಅಹಿಂಸಾತ್ಮಕ ಚಳವಳಿಯಲ್ಲಿ ನಂಬಿಕೆಯಿದೆ.  ಈ ಹಿನ್ನೆಲೆಯಲ್ಲಿ  ರೈತರ ಮೇಲಿನ ಕರಾಳ ಕಾಯಿದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಡಿಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಡಿಸಿಸಿ ಮಹಿಳಾ ಅಧ್ಯಕ್ಷೆ ಗೀತಾನಂದಿನಿಗೌಡ, ಜಿಪಂ ಮಾಜಿ ಸದಸ್ಯ ನರಸಿಂಹರಾಜು,  ಮುಖಂಡರಾದ ಕುಮಾರ್ಗೌಡ, ಎನ್.ಡಿ.ಕುಮಾರ್, ಅಶೋಕ್ ನಾಯ್ಡು,  ಧನಂಜಯ್,  ತಿಪ್ಪೇಸ್ವಾಮಿ, ಕಿರಣ್ ಯಾದವ್, ಅನಿಲ್ ಕೋಟಿ, ಸಾಧಿಕ್, ಅಜ್ಜಪ್ಪ, ಪ್ರಕಾಶ್ ರಾಮನಾಯ್ಕ, ನಜ್ಮಾತಾಜ್, ಸೌಭಾಗ್ಯ, ಮುನೀರಾ ಮುಖಂದರ್,ಜಯಣ್ಣ  ಮತ್ತಿತರರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಧೋನಿ ಯಾಕೆ ಇನ್ನು ಬಾಲಿವುಡ್ ಗೆ ಹೋಗಿಲ್ಲ : ಅಭಿಮಾನಿಗಳ ಪ್ರಶ್ನೆಗೆ ಧೋನಿ ಏನಂದ್ರು..?

ಆರ್‌ಎಸ್‌ಎಸ್ ತರಬೇತಿಗೆ ಎಚ್‌ಡಿಕೆಗೆ ಆಹ್ವಾನ ; ಪ್ರಭಾಕರ