Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಮ್ಮದೇ ಪಕ್ಷದ ಯತ್ನಾಳ್ ಸೋಲಿಸಲು, ಬಿಜೆಪಿಯಿಂದಲೇ ನಡೆಯುತ್ತಿದೆಯಾ ಸಂಚು..?

Facebook
Twitter
Telegram
WhatsApp

ವಿಜಯಪುರ: ಬಿಜೆಪಿಗೆ ದೊಡ್ಡ ತಲೆನೋವಾಗಿರುವುದೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌. ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಮಾಜಿ ಸಿಎಂ, ಹಾಲಿ ಸಿಎಂ ಯತ್ನಾಳ್ ಅವರ ಮಾತಿನ ಟಾರ್ಗೆಟ್. ರಾಜ್ಯ ಶಿಸ್ತು ಸಮಿತಿ, ಕೇಂದ್ರ ಶಿಸ್ತು ಸಮಿತಿ ಅದಾಗಲೇ ವಾರ್ನಿಂಗ್ ಕೂಡ ನೀಡಿ ಆಗಿದೆ. ಇದೀಗ ಒಳಗೊಳಗೆ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.

ಯತ್ನಾಳ್ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದವರು. ಇವರನ್ನು ಹಿಂದೂ ಹುಲಿ ಎಂದೇ ಕರೆಯುತ್ತಾರೆ. ಹೀಗಾಗಿ ಯತ್ನಾಳ್ ಅವರ‌ನ್ನು ಪಕ್ಷದಿಂದ ವಜಾ‌ಮಾಡುವ ಮಾತನ್ನು ಪಕ್ಷದಲ್ಲಿ ಯಾರೂ ಆಡಿಲ್ಲ. ಹಿಂದೂವಾದಿ ಯುವಕರ ಬೆಂಬಲವಿರುವ ಕಾರಣ, ಅವರನ್ನು ವಜಾ ಮಾಡಿದರೆ ಹಿಂದೂ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರಯತ್ತದೆ. ಹೀಗಾಗಿ ಯಾರೊಬ್ಬರು ಅವರನ್ನು ವಜಾ ಮಾಡುವ ವಿಚಾರ ಎತ್ತಿಲ್ಲ. ಬದಲಿಗೆ ಸೋಲಿನ ರುಚಿ ತಿನಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಬಿಎಸ್ವೈ ಮತ್ತು ಅವರ ಪುತ್ರನ ಬಗ್ಗೆ ಕೆಂಡಕಾರುತ್ತಿದ್ದ ಯತ್ನಾಳ್, ಸಚಿವ ಮುರುಗೇಶ್ ನಿರಾಣಿಯನ್ನು ಬಿಟ್ಟಿಲ್ಲ. ಹಾಗೇ ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ವಿಚಾರದ ಹೋರಾಟದಲ್ಲಿ ಶಾಸಕ ಯತ್ನಾಳ್ ಅವರೇ ಮುಂದೆ ಇದ್ದಾರೆ. ಈ ಎಲ್ಲಾ ಬೆಳವಣಿಗೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗೆ ಎಐಡಿಎಸ್ಓ ವತಿಯಿಂದ ಪ್ರಣಾಳಿಕೆ ಸಲ್ಲಿಕೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ದುಡಿಯುವ ಜನರ ಹೋರಾಟದ ಧ್ವನಿಯಾಗಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಜಾತ.ಡಿ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು. ಸ್ವಾತಂತ್ರ್ಯ ಬಂದು

error: Content is protected !!