Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಸ ಪಕ್ಷದ ಬಗ್ಗೆ ಮಾತನಾಡಲು ಇನ್ನೂ ಸಮಯವಿದೆ ಎಂದ ರೆಡ್ಡಿ : ಬಿಜೆಪಿಯವರ ನಡೆಯನ್ನು ಕಾದು ನೋಡುತ್ತಿದ್ದಾರಾ..?

Facebook
Twitter
Telegram
WhatsApp

 

ಗದಗ: ಕಳೆದ ಕೆಲವು ದಿನಗಳಿಂದ ಗಾಲಿ ಜನಾರ್ದನ್ ರೆಡ್ಡಿ ರಾಜಕೀಯ ನಡೆ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಪ್ರತ್ಯೇಕ ಪಕ್ಷ ಕಟ್ಟಿ ಆ ಮೂಲಕ ತಮ್ಮ ರಾಜಕೀಯ ಪುನರ್ ಹೆಜ್ಜೆಯನ್ನು ರೆಡ್ಡಿ ಇಡಲಿದ್ದಾರೆ ಎಂಬ ಮಾತುಗಳು ಆರಂಭವಾಗಿತ್ತು. ಜನಾರ್ದನ್ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದರೆ, ಬಿಜೆಪಿಗೆ ಸಮಸ್ಯೆ ಆಗುತ್ತದೆ ಎಂಬುದು ತಿಳಿದು, ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಚಿಂತಿಸಿದೆ ಎಂಬ ಮಾತುಗಳು ಓಡಾಡುತ್ತಿವೆ.

ಆಪ್ತ ಶ್ರೀರಾಮುಲು ಕಡೆಯಿಂದ ಚುನಾವನೆಗೆ ಸ್ಪರ್ದಿಸಿ, ಆದ್ರೆ ಸ್ವತಂತ್ರ ಅಬ್ಯರ್ಥಿಯಾಗಿ ನಿಲ್ಲಿ. ಬೆಂಬಲ ಸೂಚಿಸೋಣಾ. ಆಮೇಲೆ ಬಿಜೆಪಿಗೆ ಸೇರಿಸಿಕೊಳ್ಳೋಣಾ ಎಂದಿದ್ದಾರೆ ಎಂಬ ಮಾತುಗಳು ಇದೆ. ಇದರ ನಡುವೆ ಜನಾರ್ದನ ರೆಡ್ಡಿಯವರಿಗೆ ಈ ಆಫರ್ ಅಷ್ಟೊಂದು ಖುಷಿಕೊಟ್ಟಿಲ್ಲ ಎಂಬ ಮಾತು ಸಹ ಇದೆ. ಹೀಗಾಗಿ ಮುಂದೆ ಏನು ಮಾಡುತ್ತಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಈ ಮಧ್ಯೆ ಗದಗದ ಬಸವೇಶ್ವರ ಗಾರ್ಡನ್ ಗೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಅವರು ಹೊಸ ರಾಜಕೀಯ ಪಕ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು, ನನ್ನ ಇಡೀ ರಾಜಕೀಯದ ಜೀವನ ಭಾರತೀಯ ಜನತಾ ಪಕ್ಷ. 30 ವರ್ಷದಿಂದ ಬಿಜೆಪಿಯೇ ನಮ್ಮ ಕುಟುಂಬವಾಗಿದೆ. ಬಿಜೆಪಿಯಿಂದ ರಾಜಕೀಯ ಪಕ್ಷ ಆರಂಭವಾಗಿದೆ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣಾ ಎಂದಿದ್ದಾರೆ.

ಸದ್ಯ ಬಳ್ಳಾರಿ ವಾಸಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಇರುವುದಕ್ಕೆ ಇಷ್ಟವಿಲ್ಲ. ಹೀಗಾಗಿ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ. ಜನರ ನಡುವೆ ಇರಬೇಕು ಎಂಬುದೇ ನನ್ನ ಆಸೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ.ಎನ್.ಚಂದ್ರಪ್ಪನವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿ : ಮಾಜಿ ಶಾಸಕ ಎ.ವಿ.ಉಮಾಪತಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.23 : ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಟಸ್ಥರಾಗಿದ್ದ ಹೊಳಲ್ಕೆರೆ ತಾಲ್ಲೂಕಿನ ವೆಂಕಟೇಶ್‍ನಾಯ್ಕ, ಬಸವರಾಜ್‍ನಾಯ್ಕ,

ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ : ನಾಗರಾಜ್ ಸಂಗಮ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.23 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ

ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿ : ತಹಶೀಲ್ದಾರ್ ಬೀಬಿಫಾತಿಮ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.23  : ಇದೇ ತಿಂಗಳ 26 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ

error: Content is protected !!