Connect with us

Hi, what are you looking for?

ಕ್ರೀಡಾ ಸುದ್ದಿ

ಐಪಿಎಲ್ 2021 ಹರಾಜು: ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಹರಾಜಾದ ಆಟಗಾರ ಯಾರು ಗೊತ್ತಾ ?

ಚೆನ್ನೈ: ಎಲ್ಲರ ನಿರೀಕ್ಷೆಯನ್ನು ಮೀರಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಈ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದಾರೆ.

ಮೋರಿಸ್ ಅವರನ್ನು 16 ಕೋಟಿ 25 ಲಕ್ಷ ರೂಪಾಯಿಗಳ ದಾಖಲೆ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಹರಾಜಿನ ಮೂಲಕ ಪಡೆದುಕೊಂಡರು.


ಮೋರಿಸ್ ಅವರ ಕನಿಷ್ಠ ಬೆಲೆ 75 ಲಕ್ಷ ರೂ.ಗಳಿದ್ದಾಗ ಅವರಿಗಾಗಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಗಿಬಿದ್ದವು.

ಆದರೆ ಹರಾಜಿನಲ್ಲಿ ಕೊನೆಯದಾಗಿ ರಾಜಸ್ಥಾನ್ ರಾಯಲ್ಸ್ ದುಬಾರಿ ಮೊತ್ತಕ್ಕೆ ಮೋರಿಸ್ ಅವರನ್ನು ಪಡೆದುಕೊಂಡರು. ಮುಂಬೈ ಇಂಡಿಯನ್ಸ್ 12 ಕೋಟಿ 50 ಲಕ್ಷ ರೂಪಾಯಿ ಮತ್ತು ಪಂಜಾಬ್ ಕಿಂಗ್ಸ್ 14 ಕೋಟಿ ರೂ.ಗಳವರೆಗೆ ಬಿಡ್ ಮಾಡಿದವು.

ಆದರೆ ರಾಜಸ್ಥಾನ್ ರಾಯಲ್ಸ್ ಮೋರಿಸ್ ಅವರನ್ನು ಶತಾಯುಗತಾಯವಾಗಿ ಪಡೆಯಲೇಬೇಕೆಂದು ಪಟ್ಟು ಹಿಡಿದು ಅವರನ್ನು ಪಡೆದರು. ಇದರೊಂದಿಗೆ ಐಪಿಎಲ್ ಹರಾಜು ಇತಿಹಾಸದಲ್ಲಿಯೇ ಅತಿ ಹೆಚ್ಚು ಬೆಲೆಗೆ ಹರಾಜಾದ ಆಟಗಾರನಾಗಿ ದಾಖಲೆ ಬರೆದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್, (ಏ.12) : ಯುವಕನೊಬ್ಬ ಚಿರತೆಯಿಂದ ತಪ್ಪಿಸಿಕೊಂಡು ಬಚಾವ್ ಆದ ಘಟನೆ ನಗರದ ಕೋಟೆಯ ಕರವತ್ತಿ ಬಳಿ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ನಡೆದಿದೆ. ನಗರದ...

ಪ್ರಮುಖ ಸುದ್ದಿ

ಆ ಕಡೆ ಸತ್ಯ ಕಾರ್ತೀಕ್ ಮೇಲೆ ಅಗಾಧ ಪ್ರೀತಿ ಬೆಳೆಸಿಕೊಳ್ತಾ ಇದ್ದಾಳೆ…ಇತ್ತ ಕಾರ್ತೀಕ್ ದಿವ್ಯಳ ಮದುವೆಗೆ ತಯಾರಿ ನಡೆಸುತ್ತಿದ್ದಾನೆ…ಇದೆಲ್ಲದರ ನಡುವೆ ಇತ್ತೀಚೆಗೆ ಅಮೂಲ್ ಬೇಬಿಯ ನಡವಳಿಕೆ ಸತ್ಯಳಿಗೆ ಇನ್ನಷ್ಟು ಪ್ರೀತಿ ಹುಟ್ಟುವಂತೆ ಮಾಡಿದೆ....

ಪ್ರಮುಖ ಸುದ್ದಿ

ಇನ್ನೇನು ಕೆಲವೇ ದಿನಗಳಲ್ಲಿ ಕೃಷ್ಣ ಟಾಕೀಸ್ ಸಿನಿಮಾ ಥಿಯೇಟರ್ ಗೆ ಬರಲಿದೆ. ಇದೇ ತಿಂಗಳ 16 ರಂದು ತೆರೆಗೆ ಬರೋದಕ್ಕೆ ಸಜ್ಜಾಗಿರುವ ಕೃಷ್ಣ ಟಾಕೀಸ್, ತನ್ನ ಟೈಟಲ್ ಮೂಲಕವೇ ಸದ್ದು ಮಾಡಿತ್ತು. ಅದಾದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಏ.12) : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಉಮೇದುವಾರಿಕೆ ಹಿಂತೆಗೆದುಕೊಂಡ ನಂತರ ಅಂತಿಮವಾಗಿ 9 ಅಭ್ಯರ್ಥಿಗಳು ಸ್ಪರ್ಧೆಯಲಿದ್ದಾರೆ. ನ.ಕೆಂಚವೀರಪ್ಪ, ಜೆ.ತಿಪ್ಪೇಸ್ವಾಮಿ ಕೊರ್ಲಕುಂಟೆ,...

ಪ್ರಮುಖ ಸುದ್ದಿ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ನ ಸೋಂಕಿತ ಪ್ರಕರಣಗಳ ಸಂಖ್ಯೆ ಹಾವು ಏಣಿ ಆಟದಂತಾಗಿದೆ. ಆದರೆ ಸೋಮವಾರದ ಗುಣಮುಖಗೊಂಡವರು ಹೆಚ್ಚಾಗಿದ್ದು, ಸಮಾಧಾನ ತಂದಿದೆ. ಸೋಮವಾರದ ವರದಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು,...

ಪ್ರಮುಖ ಸುದ್ದಿ

ಚಿತ್ರದುರ್ಗ :  ಕೋವಿಡ್-19 ಹಿನ್ನಲೆಯಲ್ಲಿ ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಜಾತ್ರೆಗಳು, ಮೇಳಗಳಲ್ಲಿ ಗುಂಪು ಸೇರದಂತೆ, ಸಾರ್ವಜನಿಕ ಸ್ಥಳಗಳು, ಮೈದಾನಗಳು, ಉದ್ಯಾನವನಗಳು, ಮಾರುಕಟ್ಟೆ, ಧಾರ್ಮಿಕ ಪ್ರದೇಶ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಏ.12) : ಚಳ್ಳಕೆರೆ ತಾಲ್ಲೂಕಿನ ತಳುಕು ಹೋಬಳಿಯ ರೇಣುಕಾಪುರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಏ. 17ರಂದು ಗ್ರಾಮ ವಾಸ್ತವ್ಯ ಮಾಡಲಿದ್ದು, ಇದರ ಪೂರ್ವಭಾವಿಯಾಗಿ ಗ್ರಾಮದಲ್ಲಿನ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಯನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್...

ಪ್ರಮುಖ ಸುದ್ದಿ

ಬೆಂಗಳೂರು: ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ....

error: Content is protected !!