ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಭಾನವಾರ ನಗರದಲ್ಲಿ ನಡೆದ ಸೀರೆ ವಾಕಥಾನ್‍ನಲ್ಲಿ ನೂರಾರು ಮಹಿಳೆಯರು ವಿಭಿನ್ನ ರೀತಿಯಲ್ಲಿ ಸೀರೆಗಳನ್ನುಟ್ಟು ಸಂಭ್ರಮಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಸೀರೆವಾಕಥಾನ್‍ಗೆ ವಾಸವಿ ಕ್ಲಬ್ ಇಂಟರ್‍ನ್ಯಾಷನಲ್ ಗೌರ್ವನರ್ ಅಶೋಕ್ ಚಾಲನೆ ನೀಡಿದರು.
ಉಡುಪಿಯಿಂದ ಆಗಮಿಸಿದ್ದ ಮಹಿಳೆಯರ ಚಂಡೆ ಮೃದಂಗ ಸೀರೆವಾಕಥಾನ್‍ಗೆ ಮೆರಗು ತುಂಬಿತು. ಸೀರೆವಾಕಥಾನ್‍ನಲ್ಲಿ ಭಾರತ್‍ಮಾತ ಕೀ ಜೈ ಘೋಷಣೆಗಳು ಮೊಳಗಿದವು.
ಹಸಿರು, ನೀಲಿ, ಕೇಸರಿ, ಕಂದು ವರ್ಣದ ಸೀರೆಗಳನ್ನುಟ್ಟ ಮಹಿಳೆಯರು ಸೀರೆವಾಕಥಾನ್‍ನಲ್ಲಿ ಹೆಜ್ಜೆ ಹಾಕಿದರು.
ಬಿಸಿಲ ಝಳಕ್ಕೆ ಮಹಿಳೆಯರು ತಲೆಗೆ ಟೋಪಿ ಹಾಗೂ ಕಣ್ಣಿಗೆ ಕೂಲಿಂಗ್ ಗ್ಲಾಸ್‍ಗಳನ್ನು ಧರಿಸಿದ್ದರು. ಒನಕೆ ಓಬವ್ವ ಪ್ರತಿಮೆ ಬಳಿ ಸೀರೆ ವಾಕಥಾನ್ ಮುಕ್ತಾಯಗೊಂಡಿತು. ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರಾಜೇಶ್ವರಿ ಇನ್ನು ಮುಂತಾದವರು ಸೀರೆವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿ; ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಲ್ಲಿಯೇ ಇದ್ರು ಕೂಡ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ…
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…
ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…
ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…
ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…
ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…