in

ಬಸ್ಸಿನಲ್ಲಿ ಪರಿಚಯವಿಲ್ಲದ ಯುವತಿಗೆ ಕಿಸ್ : ಗೀತ ಗೋವಿಂದಂ ಸಿನಿಮಾ ಅಂದ್ಕೊಂಡ್ನಾ..?

suddione whatsapp group join

ಬೆಂಗಳೂರು: ಕೆಲವೊಂದಿಷ್ಟು ಮಂದಿ ಕೆಲವೊಂದಿಷ್ಟು ವಿಚಾರಗಳನ್ನ ಸಿನಿಮಾ ನೋಡಿನೇ ಫಾಲೋ ಮಾಡ್ತಾರೆ ಅನ್ಸುತ್ತೆ. ಇಲ್ಲೊಬ್ಬ ಗೊತ್ತಿಲ್ಲದೆ ಇರುವ ಯುವತಿಯೊಬ್ಬಳಿಗೆ ಆತ ಬಸ್ಸಿನಲ್ಲೇ ಮುತ್ತಿಕ್ಕಿದ್ದಾನೆ.

ಬಳ್ಳಾರಿಯಿಂದ ಕೆಎಸ್ಆರ್ಟಿಸಿ ಬಸ್ಸೊಂದು ಬೆಂಗಳೂರಿಗೆ ಬರ್ತಾ ಇತ್ತು. ಆ ಬಸ್ಸಿನಲ್ಲಿ ಯುವತಿಯೊಬ್ಬಳು ಕುಳಿತಿದ್ದಳು. ಆ ಯುವತಿಯನ್ನ ಆ ಹುಡುಗ ತುಂಬಾ ದೂರದಿಂದ ಫಾಲೋ ಮಾಡಿಕೊಂಡು ಬಂದಿದ್ದಾನೆ. ಕಡೆಗೆ ಆಕೆಯ ಪಕ್ಕದಲ್ಲೇ ಸೀಟ್ ಹಿಡಿದು ಕುಳಿತಿದ್ದಾನೆ.

ಬಸ್ಸು ಬೆಂಗಳೂರು ತಲುಪುವ ತನಕ ಸುಮ್ಮನೆ ಕುಳಿತಿದ್ದಾನೆ. ಆದ್ರೆ ಪೀಣ್ಯ ತಲುಪುವ ವೇಳೆಗೆ ಆ ಯುವತಿಗೂ ನಿದ್ದೆ ಆವರಿಸಿದೆ. ಅದೇ ಚಾನ್ಸ್ ಕಾಯ್ತಿದ್ದವನಂತೆ, ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟಿದ್ದಾನೆ. ಇದು ತೆಲುಗಿನ ಗೀತ ಗೋವಿಂದ ಸಿನಿಮಾದ ದೃಶ್ಯವನ್ನ ರಿಕ್ರಿಯೇಟ್ ಮಾಡಿದ್ದಂತಿದೆ.

ಆ ಯುವಕ ಮುತ್ತಿಟ್ಡಿದ್ದೆ ತಡ, ಆ ಯುವತಿಗೆ ಎಚ್ಚರವಾಗಿದೆ. ತಕ್ಷಣ ಆ ಬಸ್ ನಿಲ್ಲಿಸಿದ್ದಾರೆ. ಪೀಣ್ಯದಲ್ಲೇ ಇದ್ದ ಕಾರಣ ಪೀಣ್ಯ ಪೊಲೀಸ್ ಠಾಣೆಗೆ ಆ ಯುವತಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆ ಕಿರಾತಕನಿಗಾಗಿ ಪೊಲೀಸರು ಸರ್ಚ್ ಮಾಡುತ್ತಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೊಸದುರ್ಗ ಹಾಗೂ ಹೊಳಲ್ಕೆರೆ ಗಡಿ ಭಾಗದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

1108 ಹೊಸ ಸೋಂಕಿತರು..809 ಮಂದಿ ಡಿಸ್ಚಾರ್ಜ್..!