in

ಭಾರತೀಯ ಚಿಕಿತ್ಸಾ ಪದ್ಧತಿ ಹೆಚ್ಚು ಪರಿಣಾಮಕಾರಿ : ಮಹಮ್ಮದ್ ಮನ್ಸೂರ್

suddione whatsapp group join

ಚಿತ್ರದುರ್ಗ, (ಫೆ.10) ಪ್ರಾಚೀನ ವೈಜ್ಞಾನಿಕ ಪದ್ಧತಿಯಾದ ಸ್ಪಟಿಕ ಚಿಕಿತ್ಸಾ ಶಿಬಿರ ಹಾಗೂ ಸಂಗೀತ ಶಿಬಿರವನ್ನು ನಗರದ ರಿದ್ಧಿ ಫೌಂಡೇಶನ್ ಸಂಸ್ಥೆಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.

ಶಿಬಿರವನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎನ್.ಐ. ಮಹಮ್ಮದ್ ಮನ್ಸೂರ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮನ್ಸೂರ್ ಅವರು ಮಾತನಾಡಿ, ಸ್ಪಟಿಕ ಚಿಕಿತ್ಸೆ ಪದ್ಧತಿ ಉಪನಿಷತ್ತಿನಲ್ಲೂ ಉಲ್ಲೇಖವಿದೆ.  ರಾಜ ಮಹಾರಾಜರು ಹಾಗೂ ಮಹಾಭಾರತ, ರಾಮಾಯಣ ಕಾಲದಲ್ಲಿಯೂ ಈ ಚಿಕಿತ್ಸೆಯನ್ನು ಬಳಸುತ್ತಿದ್ದರು.

ಇದೊಂದು ಸರಳ ಮತ್ತು ಸುಲಭದ ಚಿಕಿತ್ಸೆ ಆಗಿದ್ದು, ಧೀರ್ಘಕಾಲದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ದೊರಕುತ್ತದೆ.  ಆದ್ಧರಿಂದ ಭಾರತೀಯ ಚಿಕಿತ್ಸಾ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿದೆ. ರಿದ್ಧಿ ಫೌಂಡೇಶನ್ ಸಂಸ್ಥೆ ಅಳವಡಿಸಿರುವುದು ಸ್ವಾಗತಾರ್ಹವಾದದ್ದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಭಾರತೀಯ ಸನಾತನ ಔಷಧಿ ಪದ್ಧತಿ ಬಹಳ ಅಮೂಲ್ಯವಾದದ್ದು,   ಈ ಪದ್ಧತಿಗಳ ಬಗ್ಗೆ ಅಧ್ಯಾಯನವಾಗಬೇಕು.  ವೈಜ್ಞಾನಿಕ ತಳಹದಿಯಲ್ಲಿ ಅಳವಡಿಸಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡಿದರೇ, ಅಧ್ಬುತವಾದ ಪರಿಣಾಮ ಬೀರಲಿದೆ.

ಅದೇ ರೀತಿ ಯೋಗ, ಧ್ಯಾನಗಳಿಂದ ಸಾಕಷ್ಟು ಕಾಯಿಲೆಗಳು ವಾಸಿ ಮಾಡಲು ಸಾಧ್ಯವಾಗಿದೆ.  ವಿಶೇಷವಾಗಿ ಮಾನಸಿಕವಾಗಿ ಸಂಬಂಧಿಸಿದ ಖಾಯಿಲೆಗಳಿಗೆ ಯೋಗ ಮತ್ತು ಧ್ಯಾನಗಳು ಪರಿಣಾಮಕಾರಿಯಾಗಿ ಸಹಕಾರಿಯಾಗಲಿವೆ ಎಂದರು.

ರಿದ್ಧಿ ಸಂಸ್ಥೆಯ ಖಜಾಂಚಿ ಶ್ರೀಮತಿ ಶೋಭ ಮಾತನಾಡಿ, ಇಂದಿನ ಯುವಪೀಳಿಗೆ ಮಾನಸಿಕ ಅಸಮಾನತೋಲನದಿಂದ ಬಳಲುತ್ತಿದೆ.  ಸಣ್ಣ ಸಣ್ಣ ವಿಚಾರಗಳಿಗೂ ಮಾನಸಿಕ ಒತ್ತಡಗಳಿಗೆ ಸಿಲುಕಿ ಬಳಲುತ್ತಾರೆ.

ಎಷ್ಟೋ ಯುವಕರು ಮಾನಸಿಕ ಒತ್ತಡಕ್ಕೆ ಬಲಿಯಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇಂತಹ ಯುವಕರು ಧ್ಯಾನದ ಮೊರೆ ಹೋದರೆ ಮಾನಸಿಕವಾಗಿ ಸದೃಢರಾಗಬಲ್ಲರು.  ಹಾಗೂ ಯುವಕರಿಗೆ ನೈತಿಕ ಶಿಕ್ಷಣ ಕಲ್ಪಿಸುವ ಅಗತ್ಯತೆ ಹೆಚ್ಚು ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ ಅವರನ್ನು ಸನ್ಮಾನಿಸಲಿ ಗೌರವಿಸಲಾಯಿತು.

ಕಾರ್ಯಕ್ರದ ನಿರೂಪಣೆಯನ್ನು ಮಮತಾ ನಿರ್ವಹಿಸಿದರು. ಸ್ವಾಗತವನ್ನು ಪ್ರಿಯದರ್ಶಿನಿ, ವಂದನಾರ್ಪಣೆಯನ್ನು ಟಿ.ಶಿವರುದ್ರಮ್ಮ ನಿರ್ವಹಿಸಿದರು. ವೇದಿಕೆಯಲ್ಲಿ ನೃತ್ಯ ತರಬೇತಿ ಶಿಕ್ಷಕ ಜಮದಗ್ನಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿ ಪತ್ರಿಕೋದ್ಯಮ, ಪತ್ರಕರ್ತರ ಸ್ಥಿತಿ ಶೋಚನೀಯ : ಬಂಗ್ಲೆ ಮಲ್ಲಿಕಾರ್ಜುನ್

ಡಿಕೆಶಿಗೆ ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್..!