ಟೀಂ ಇಂಡಿಯಾಗೆ ಬಾಂಗ್ಲಾದೇಶ ಭಾರೀ ಆಘಾತ ನೀಡಿದೆ. 3 ಏಕದಿನ ಸರಣಿಯ ಅಂಗವಾಗಿ ಇಂದು (ಡಿಸೆಂಬರ್ 4) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಟೀಂ ಇಂಡಿಯಾ ವಿರುದ್ಧದ ರೋಚಕ ಪಂದ್ಯದಲ್ಲಿ ಒಂದು ವಿಕೆಟ್ ನಿಂದ ಜಯಗಳಿಸಿ ಸಂಚಲನ ಮೂಡಿಸಿದೆ.
ತೀವ್ರ ಪೈಪೋಟಿಯ ಈ ಪಂದ್ಯದಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮೆಹಿದಿ ಹಸನ್ (ಅಜೇಯ 38) ಮತ್ತು ಮುಸ್ತಫಿಜುರ್ (ಔಟಾಗದೆ 10) ಬಾಂಗ್ಲಾದೇಶಕ್ಕೆ ಸ್ಮರಣೀಯ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
ಮೆಹಿದಿ ಮತ್ತು ಮುಸ್ತಫಿಜುರ್ ಕೊನೆಯ ವಿಕೆಟ್ ಜೊತೆಯಾಟದಲ್ಲಿ ಅಜೇಯ 51 ರನ್ ಸೇರಿಸಿ ಟೀಂ ಇಂಡಿಯಾ ಗೆಲುವಿನ ಅವಕಾಶಕ್ಕೆ ಅಡ್ಡಿಯಾದರು. ಈ ಪಂದ್ಯದಲ್ಲಿ ಭಾರತದ ಫೀಲ್ಡರ್ ಗಳ ಕಳಪೆ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣವಾಗಿದೆ.
136 ರನ್‌ಗಳಾಗುವಷ್ಟರಲ್ಲಿ ಒಂಬತ್ತನೇ ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿ ನಿಂತಿದ್ದ ಬಾಂಗ್ಲಾದೇಶವನ್ನು ಭಾರತದ ಫೀಲ್ಡರ್‌ಗಳೇ ಗೆಲುವಿನ ದಡ ಸೇರಿಸಿದರು. ಬಾಂಗ್ಲಾದೇಶ 46 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡಿತಾದರೂ ಭಾರತ ನೀಡಿದ್ದ ಸಾಧಾರಣ ಮೊತ್ತವನ್ನು ಬೇಧಿಸಿದರು.
ಎದುರಾಳಿಯ ಆಹ್ವಾನದ ಮೇರೆಗೆ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಕೆಎಲ್ ರಾಹುಲ್ (70 ಎಸೆತಗಳಲ್ಲಿ 73; 5 ಬೌಂಡರಿ, 4 ಸಿಕ್ಸರ್) ಹೊರತುಪಡಿಸಿ ಭಾರತದ ಎಲ್ಲಾ ಬ್ಯಾಟ್ಸ್ ಮನ್ ಗಳು ರನ್ ಕಲೆಹಾಕುವಲ್ಲಿ ದಯನೀಯವಾಗಿ ವಿಫಲರಾದರು.
ಶಿಖರ್ ಧವನ್ (7), ಕೊಹ್ಲಿ (9), ಶಹಬಾಜ್ ಅಹ್ಮದ್ (0), ಶಾರ್ದೂಲ್ ಠಾಕೂರ್ (2), ದೀಪಕ್ ಚಹಾರ್ (0), ಸಿರಾಜ್ (9) ಪೆವಿಲಿಯನ್ ಗೆ ಅಣಿಯಾದರು. ನಾಯಕ ರೋಹಿತ್ ಶರ್ಮಾ (27), ಶ್ರೇಯಸ್ ಅಯ್ಯರ್ (24) ಮತ್ತು ವಾಷಿಂಗ್ಟನ್ ಸುಂದರ್ (19) ರನ್‌ಗಳಿಂದ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಯಿತು.
ಆ ಬಳಿಕ ಭಾರತ ನೀಡಿದ್ದ ಅಲ್ಪ ಮೊತ್ತದ ಗುರಿ ಮುಟ್ಟಲು ಕಣಕ್ಕೆ ಇಳಿದ ಬಾಂಗ್ಲಾದೇಶ ಟೀಂ ಇಂಡಿಯಾ ಬೌಲರ್ ಗಳಾದ ಸಿರಾಜ್ (3/32), ಕುಲದೀಪ್ ಸೇನ್ (2/37), ಸುಂದರ್ (2/17), ಶಾರ್ದೂಲ್ ಠಾಕೂರ್ (1/15), ದೀಪಕ್ ಚಹಾರ್ ( 1/32) ಸ್ಕೋರ್ 136 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ, ಮೆಹದಿ ಹಸನ್ ಮತ್ತು ಮುಸ್ತಫಿಜುರ್ ತಮ್ಮ ತಂಡಕ್ಕೆ ಅತ್ಯುತ್ತಮ ಹೋರಾಟದ ಶೈಲಿಯನ್ನು ಪ್ರದರ್ಶಿಸುವ ಮೂಲಕ ಐತಿಹಾಸಿಕ ಜಯವನ್ನು ನೀಡಿದರು.
ಇದರಿಂದಾಗಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಡಿಸೆಂಬರ್ 7ರಂದು ನಡೆಯಲಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…