ಮಧುಮೇಹ ರೋಗ ಸದ್ದಿಲ್ಲದೆ ತನ್ನ ವೇಗವನ್ನು ಹೆಚ್ಚಿಸಿದೆ. ವರ್ಷದಿಂದ ವರ್ಷಕ್ಕೆ ಮಧುಮೇಹ ಪೀಡಿತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಮಧುಮೇಹ ರೋಗಿಗಳ ಜನಸಂಖ್ಯೆಯಲ್ಲಿ ಚೀನಾ ಮತ್ತು ಭಾರತ ಹಠಕ್ಕೆ ಬಿದ್ದವರಂತೆ ಸ್ಪರ್ಧಿಸುತ್ತಿವೆ.
ಚೀನಾ 141 ಮಿಲಿಯನ್ ಮಧುಮೇಹ ರೋಗಿಗಳೊಂದಿಗೆ ವಿಶ್ವದ ಅಗ್ರಸ್ಥಾನದಲ್ಲಿದ್ದರೆ, 77 ಮಿಲಿಯನ್ ಮಧುಮೇಹ ರೋಗಿಗಳಿಂದ ಭಾರತ ಎರಡನೇ ಸ್ಥಾನದಲ್ಲಿದೆ.
2045 ರ ವೇಳೆಗೆ ನಮ್ಮ ದೇಶದಲ್ಲಿ ಮಧುಮೇಹ ಪೀಡಿತರ ಸಂಖ್ಯೆ 135 ಮಿಲಿಯನ್ ತಲುಪುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ಮಹಿಳೆಯರಿಗಿಂತಲೂ (40 ಪ್ರತಿಶತ)
ಪುರುಷರಿಗೆ (60 ಪ್ರತಿಶತ)
ಹೆಚ್ಚು ಪರಿಣಾಮ ಬೀರುತ್ತಿದೆ.
2020 ರಲ್ಲಿ ದೇಶದಲ್ಲಿ 7 ಲಕ್ಷ ಜನರು ಮಧುಮೇಹದಿಂದ ಸಾವನ್ನಪ್ಪಿದ್ದಾರೆ.
ICMR ಅಂಕಿಅಂಶಗಳ ಪ್ರಕಾರ, ಕೇರಳವು ಶೇ. 19.8 ಪ್ರತಿಶತದಷ್ಟು ಮಧುಮೇಹ ರೋಗಿಗಳೊಂದಿಗೆ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಚಂಡೀಗಢ ಶೇ.13.6 ತಮಿಳುನಾಡು 8.9 ಮತ್ತು ಆಂಧ್ರಪ್ರದೇಶ ಶೇ. 9 ರಷ್ಟು ನಂತರದ ಸ್ಥಾನದಲ್ಲಿವೆ.
ಮಧುಮೇಹ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ವಿವಿಧ ಅಂಶಗಳು ಕಾರಣವೆಂದು ಈಗಾಗಲೇ ಗುರುತಿಸಲಾಗಿದೆ. ಸ್ಥೂಲಕಾಯ, ದೈಹಿಕ ವ್ಯಾಯಾಮದ ಕೊರತೆ, ಜಂಕ್ ಫುಡ್ ಸೇವನೆ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಕೆಲಸದ ಒತ್ತಡ, ಜೀವನಶೈಲಿಯಲ್ಲಿನ ಬದಲಾವಣೆ, ಕುಟುಂಬದ ಆನುವಂಶಿಕತೆ ಪ್ರಮುಖ ಕಾರಣಗಳಾಗಿವೆ.
ಪ್ರತಿ ಇಬ್ಬರು ಮಧುಮೇಹಿಗಳಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ ಎಂದು ತಿಳಿದಿರುವುದಿಲ್ಲ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಇದು ಕೂಡ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…