in ,

ಪ್ಲಾಸ್ಟಿಕ್ ಮರುಬಳಕೆ ಹೆಚ್ಚಿಸಿ, ಮಾಲಿನ್ಯ ತಡೆಯಿರಿ : ಪರಿಸರ ಅಧಿಕಾರಿ ಈ. ಪ್ರಕಾಶ್

suddione whatsapp group join

ಚಿತ್ರದುರ್ಗ, (ಫೆ.08) : ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗುತ್ತಿದ್ದು, ಮಣ್ಣಿನ ಸತ್ವ ಹಾಳಾಗಿತ್ತಿದ್ದು, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದೆ, ಮರುಬಳಕೆ ಮಾಡುವ ಪ್ಲಾಸ್ಟಿಕ್ ಅನ್ನು ಮಿತವಾಗಿ ಬಳಕೆ ಮಾಡಿ, ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಮಂಡಳಿಯ ಪರಿಸರ ಅಧಿಕಾರಿಗಳಾದ  ಈ.ಪ್ರಕಾಶ್ ತಿಳಿಸಿದರು.

ನಗರದ ಹೊರವಲಯದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಮಾರ್‍ದೆಹ (ರಿ)  ಸಂಯುಕ್ತವಾಗಿ ಆಯೋಜಿಸಿದ್ದ ಪರಿಸರ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಜನರು ಹೆಚ್ಚೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಾ ಬಂದು, ಮಾಲಿನ್ಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಅವಶ್ಯಕತೆಗಳು ಸಹ  ಹೆಚ್ಚಾಗುತ್ತಿದ್ದು ಅದನ್ನು ನಿಗ್ರಹಿಸಲು ಪರಿಸರಕ್ಕೆ ಸಾದ್ಯವಾಗುತ್ತಿಲ್ಲ, ಇಂದು ಜಲ ಪ್ರಳಯ, ಜಲ ದಿಗ್ಬಂಧನೆ, ಮಹಾನಗರಗಳಲ್ಲಿ ಕಸ ನಿರ್ವಹಣೆ ಕಠಿಣವಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್ಕಿನ ಮಿತ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಮಾಲಿನ್ಯ ತಡೆಯಲು ಸಾಕಷ್ಟು ತಂತ್ರಜ್ಞಾನ ಬಂದಿದ್ದು, ಅದನ್ನ ಬಳಸಿ, ಸುಸ್ಥಿರ ಅಭಿವೃದ್ಧಿಯ ಕಡೆ ಗಮನ ಕೊಡಬೇಕು, ಒಣ ಕಸ, ಹಸಿ ಕಸ ವಿಂಗಡನೆ ಮಾಡಬೇಕು,  ತಾಂತ್ರಿಕ ಅಭಿವೃದ್ಧಿ ಹೊಂದುತ್ತಿರುವುದರಿಂದ ಮಾಲಿನ್ಯ ತಡೆಯಲು ಸಾಕಷ್ಟು ಯಂತ್ರಗಳನ್ನು ಬಳಕೆ ಮಾಡಬಹುದು, ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ಮಿತಗೊಳಿಸಲು, ಕಸ ವಿಂಗಡನೆ, ಪ್ಲಾಸ್ಟಿಕ್ ಮರುಬಳಕೆ, ಇವುಗಳ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ ಎಂದರು.

ಎಲ್ಲಾ ಕಡೆ ಕಾಂಕ್ರೀಟ್ ರಸ್ತೆಗಳನ್ನ ಹೆಚ್ಚಿನ ನಿರ್ಮಾಣ ಮಾಡುತ್ತಿದ್ದು, ಮಳೆ ನೀರು ಇಂಗಲು ಅಡೆತಡೆ ಉಂಟು ಮಾಡುತ್ತಿದೆ, ಹಾಗಾಗಿ ಅಭಿವೃದ್ಧಿಯನ್ನು ಸುಸ್ಥಿರ ಅಭಿವೃದ್ಧಿಯನ್ನಾಗಿ ಮಾಡಿಕೊಂಡು, ಪರಿಸರ ಉಳಿಸಿಕೊಳ್ಳಬೇಕು ಎಂದರು.

ಏಕ ಬಳಕೆ ಮಾಡಿ ಬಿಸಾಡುವಂತ ಪ್ಲಾಸ್ಟಿಕ್ ಅನ್ನು ಸರ್ಕಾರ ನಿಷೇಧಿಸಿದೆ, ಹಾಗಾಗಿ ಯಾವುದನ್ನೇ ಆಗಲಿ, ಬಳಸಿ ಬಿಸಾಡುವಂತ ಪ್ಲಾಸ್ಟಿಕ್ ಅನ್ನು ಮಿತಗೊಳಿಸಬೇಕು ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಎಚ್ ಕೆ ಎಸ್. ಸ್ವಾಮಿ ಮಾತನಾಡುತ್ತಾ ಸಣ್ಣ ಮಕ್ಕಳಿಗೂ ಸಹ ಪರಿಸರ ಜಾಗೃತಿ ಮೂಡಿಸಬೇಕಾಗುತ್ತದೆ, ದೊಡ್ಡವರಾದ ನಂತರ ನಾವು ಆದಷ್ಟು ಪರಿಸರ ವಿರೋಧಿ ಜೀವನವನ್ನು ನಿಲ್ಲಿಸಿ, ಪರಿಸರ ಸ್ನೇಹಿ ಜೀವನವನ್ನು ಮಾಡಬೇಕು ಎಂದು ಪ್ರತ್ಯಕ್ಷತೆಯ ಮೂಲಕ ತೋರಿಸಿಕೊಟ್ಟರು.

ಸ್ಮಾದ್ದೇಹ ಸಂಸ್ಥೆಯ ಕಾರ್ಯದರ್ಶಿಗಳಾದ  ಎಂ.ಎನ್. ಹನುಮಂತಪ್ಪ ನವರು ಮಾತನಾಡುತ್ತಾ ಶಾಲಾ ಮಕ್ಕಳ ಕೈಯಲ್ಲಿ ಮರ ಗಿಡಗಳನ್ನು ಬೆಳೆಸಿ, ಅವರುಗಳ ಮುಖಂಡತ್ವದಲ್ಲಿ ಕಸ ವಿಂಗಡನೆ ಕಲಿಸಿಕೊಟ್ಟು, ಪರಿಸರ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಮುಖ್ಯೋಪಾಧ್ಯಾಯರಾದ ರುದ್ರಮನಿಯವರು ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಎಸ್ ಜಯಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಿ ಎಸ್ ಹಾಜರಿದ್ದರು.
ಗಣಿತ ಶಿಕ್ಷಕರಾದ ಶ್ರೀ ತಿಪ್ಪೇಸ್ವಾಮಿಯವರು ನಿರೂಪಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಡಾನ್‍ಬೋಸ್ಕೋ ಶಾಲೆಯಲ್ಲಿ ಕಲಾ ಸಂಭ್ರಮ-2023 : ವಿಜೇತ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ…!

ಫೆಬ್ರವರಿ 11ರಂದು ಮೊಳಕಾಲ್ಮೂರು ನೂತನ ಬಸ್ ಘಟಕ ಹಾಗೂ ಬಸ್ ನಿಲ್ದಾಣದ ಶಂಕು ಸ್ಥಾಪನಾ ಸಮಾರಂಭ