ಅಡಿಕೆ ಮತ್ತು ಕೊಬ್ಬರಿ ಬೆಲೆಯಲ್ಲಿ ಏರಿಕೆ ; ರೈತರಲ್ಲಿ ಮೂಡಿದ ಸಂತಸ

ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೆಳೆಯನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಂಡಿರುತ್ತಾರೆ. ರೋಗಗಳಿಂದ ಅಡಿಕೆಯನ್ನ ಕಾಪಾಡಿಕೊಳ್ಳಬೇಕು, ಮಳೆ ಇಲ್ಲದೆ ಒಣಗಿದಾಗ ಅವುಗಳನ್ನ ಕಾಪಾಡಬೇಕು. ಇಷ್ಟೆಲ್ಲಾ ಕಾಳಜಿ ಮಾಡಿ ಬೆಳೆ ನೋಡಿಕೊಂಡರು ಕೆಲವೊಮ್ಮೆ ಅಡಿಕೆ ಬೆಲೆ ಪಾತಾಳಕ್ಕೆ ಕುಸಿದು ಬಿಡುತ್ತದೆ. ಸದ್ಯ ಅಡಿಕೆ ಹಾಗೂ ಕೊಬ್ಬರಿ ಬೆಳೆಗಾರರಿಗೆ ಸಂತಸಕರ ದಿನ ಬಂದಿದೆ. ಅದುವೇ ಬೆಲೆ ಏರಿಕೆಯಾಗಿದ್ದು, ಮುಂದೆ ಇನ್ನು ಜಾಸ್ತಿಯಾಗುವ ನಿರೀಕ್ಷೆ ಇದೆ.

ಸದ್ಯ ಅಡಿಕೆ ಧಾರಣೆಯನ್ನು ನೋಡುವುದಾದರೆ, ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಲ್ ಗೆ ಕನಿಷ್ಠ 40,689 ಇದ್ದರೆ ಗರಿಷ್ಠ ಬೆಲೆ 54,900 ರೂಪಾಯಿಗೆ ಮಾರಾಟವಾಗಿದೆ. ಗೊರಬಲುವಾಡಿಕೆ ಬೆಲೆ ಕ್ವಿಂಟಾಲ್ ಗೆ 22,309 ರೂಪಾಯಿಯಂತೆ ಮಾರಾಟವಾಗಿದೆ‌. ಯಲ್ಲಾಪುರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಅಡಿಕೆ ಕನಿಷ್ಠ 40,689 ರೂಪಾಯಿ ಇದ್ದು, ಗರಿಷ್ಠ 54,900 ರೂಪಾಯಿಗೆ ಮಾರಾಟವಾಗಿದೆ. ಇನ್ನು ಸಿದ್ದಾಪುರದಲ್ಲಿ ತಟ್ಟಿಬೆಟ್ಟೆ ಅಡಿಕೆ ಗರಿಷ್ಠ 36,119 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ 47,299 ರೂಪಾಯಿಗೆ ಹೋಗಿದೆ. ಇದು ಅಡಿಕೆ ಬೆಳೆಗಾರರಿಗೆ ಖುಷಿ ಕೊಟ್ಟಿದ್ದರೆ, ಕೊಬ್ಬರಿ ಶೇಖರಿಸಿದವರಿಗೂ ಸಂತಸದ ಸುದ್ದಿ ಸಿಕ್ಕಿದೆ.

ಕಳೆದ ಕೆಲವು ತಿಂಗಳಿನಿಂದ ಕೊಬ್ಬರಿ ಬೆಲೆಯಲ್ಲಿ ಇಳಿಕೆಯಾಗುತ್ತಲೆ ಇತ್ತು. ಇದರಿಂದ ರೈತ ಕೂಡ ಕಂಗಾಲಾಗಿದ್ದ. ಇದೀಗ ಕೊಭರಿ ಬೆಲೆಯಲ್ಲೂ ಏರಿಕೆಯಾಗಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಒಂದು ಕ್ವಿಂಟಾಲ್ ಗೆ ಕನಿಷ್ಠ 17 ಸಾವಿರ ರೂಪಾಯಿ ಇದ್ದರೆ ಗರಿಷ್ಠ 19 ಸಾವಿರಕ್ಕೆ ಮಾರಾಟವಾಗಿದೆ. ಹಾಗೇ ಅರಸೀಕೆರೆ ಮಾರುಕಟ್ಟೆಯಲ್ಲಿ 16 ಸಾವಿರ ರೂಪಾಯಿಗೆ ಕ್ವಿಂಟಾಲ್ ಕೊಬ್ಬರಿ ಮಾರಾಟವಾಗಿದೆ.

suddionenews

Recent Posts

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

2 hours ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

3 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

3 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

3 hours ago

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ ; ಯಾರೀ ನೈನಾರ್ ನಾಗೇಂದ್ರನ್..?

    ಚೆನ್ನೈ; ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಕೊಟ್ಟ ಬಳಿಕ ಇದೀಗ ಅವಿರೋಧ ಆಯ್ಕೆ ಮಾಡಲಾಗಿದೆ.…

3 hours ago

ಗುತ್ತಿಗೆದಾರರ ಸಂಘದ ಆರೋಪ : ಸಚಿವಸಂಪುಟದಲ್ಲಿ ಏನೆಲ್ಲಾ ಚರ್ಚೆಯಾಯ್ತು ?

    ಬೆಂಗಳೂರು, ಏಪ್ರಿಲ್ 11: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ…

4 hours ago