ಚಿತ್ರದುರ್ಗ, ಸುದ್ದಿಒನ್,:(ಆಗಸ್ಟ್ .18) : ನಗರದ ವಾಸವಿ ಮಹಲ್ನಲ್ಲಿ 2022-2025 ನೇ ಅವಧಿಗೆ ಆಯ್ಕೆಯಾದ ಆರ್ಯವೈಶ್ಯ ಸಂಘದ ನೂತನ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಪದಗ್ರಹಣ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎನ್. ಕಾಶಿವಿಶ್ವನಾಥ ಶೆಟ್ಟಿ ವಹಿಸಿ ಮಾತನಾಡುತ್ತಾ, ಆರ್ಯವೈಶ್ಯ ಸಂಘ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಉಲ್ಬಣಗೊಂಡಾಗ ರೋಗಿಗಳಿಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ಗಳನ್ನು, ಸರ್ಕಾರಿ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಊಟ ಮತ್ತು ಔಷಧಿ ನೀಡಿದ್ದು, ಅಷ್ಟೇ ಅಲ್ಲದೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷಕರ ವಿಷಯವಾಗಿದೆ ಮತ್ತು ನೂತನ ಸಮಿತಿ ಪದಾಧಿಕಾರಿಗಳು ಸಂಘದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಪ್ರಭಾರವನ್ನು ವಹಿಸಿಕೊಂಡ ಎಲ್.ಇ. ಶ್ರೀನಿವಾಸ ಬಾಬುರವರು ಮಾತನಾಡುತ್ತಾ ಸಂಘ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಎಲ್ಲರ ಸಹಕಾರವನ್ನು ಕೋರಿದರು. ಮುಂದಿನ ದಿನಗಳಲ್ಲಿ ವಿಶೇಷವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದ ಸಮಸ್ತ ಆರ್ಯವೈಶ್ಯ ಬಾಂಧವರಿಗೆ ಅಭಿನಂದನೆ ಸಲ್ಲಿಸಿದರು.
ಉಪಾಧ್ಯಕ್ಷರಾಗಿ ಮಂಜುನಾಥ್ ಎಂ.ಹೆಚ್ ಮತ್ತು ಅರುಣ್ಕುಮಾರ್ ಕೆ.ಆರ್., ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ್ ಎಸ್. ಕಾರ್ಯದರ್ಶಿಗಳಾಗಿ ರಮೇಶ್ ಎಂ.ವಿ., ಸಂಘಟನಾ ಕಾರ್ಯದರ್ಶಿಯಾಗಿ, ಸುನಿಲ್ಕುಮಾರ್ ಪಿ., ಖಜಾಂಚಿಯಾಗಿ ಕಾಂತರಾಜು ಹೆಚ್.ಸಿ. ಸಹಕಾರ್ಯದರ್ಶಿಯಾಗಿ ಶಶಿಧರ್ ಗುಪ್ತ ಎನ್., ಮಂಜುನಾಥ ಶೆಟ್ಟಿ ಕೆ.ಎಸ್., ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಟಿ.ವಿ. ಸುರೇಶಗುಪ್ತ, ನಿರ್ದೇಶಕರುಗಳಾಗಿ ಮುಕುಂದರಾಜು ಎಂ.ಎನ್., ಅಶ್ವತ್ನಾರಾಯಣ ಶೆಟ್ಟಿ ಎಂ.ಎಸ್., ನಟರಾಜ್ ಎಂ.ಆರ್. ರವರು ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಸಮಾಜದ ಹಿರಿಯರಾದ ಕೊಟ್ರೇಶ್ ಶ್ರೇಷ್ಠಿಯವರು ಉಪಸ್ಥಿತರಿದ್ದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಪ್ರೊ. ಟಿ.ವಿ. ಸುರೇಶಗುಪ್ತರವರು ತಿಳಿಸಿರುತ್ತಾರೆ.
ಪ್ರೊ.ಟಿ.ವಿ. ಸುರೇಶಗುಪ್ತ
ಮೊ : 9945461834
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…