ಹೊಳಲ್ಕೆರೆ ನೂತನ ಬಸ್ ನಿಲ್ದಾಣ ಲೋಕಾರ್ಪಣೆ | ಸಾರ್ವಜನಿಕರ ಸೇವೆಯೇ ಸಾರಿಗೆ ಸಂಸ್ಥೆಯ‌ ಧ್ಯೇಯ : ಸಚಿವ ಬಿ.ಸಿ.ಪಾಟೀಲ್

ಚಿತ್ರದುರ್ಗ,(ಏ.18) : ಲಾಭಕ್ಕಿಂತ ಸಾರ್ವಜನಿಕರ ಸೇವೆಗೆ ಹೆಚ್ಚಿನ ಆಧ್ಯತೆಯನ್ನು ಸಾರಿಗೆ ಸಂಸ್ಥೆ ನೀಡಿದೆ. ಸಾಮಾನ್ಯ, ಮಧ್ಯಮ ವರ್ಗದ ಜನರು ಹಾಗೂ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಆಧಾರವಾಗಿವೆ. ಶಾಲಾ ಮಕ್ಕಳಿಗೆ ಉಚಿತ ಬಸ್‌ಪಾಸ್‌ಗಳನ್ನು ಸರ್ಕಾರದಿಂದ ನೀಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

9 ಕೋಟಿ ವೆಚ್ಚದಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕ ಎ.ಚಂದ್ರಪ್ಪನವರು ಹೊಳಲ್ಕೆರೆ ಅಭಿವೃದ್ಧಿ 152 ಕೋಟಿ ಅನುದಾನ ತಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗೆಗಿನ ಅವರ ಬದ್ದತೆ ಅಚಲವಾದು.ಕ್ಷೇತ್ರದ ಅಭಿವೃದ್ಧಿಗೆ ಬಸ್ ನಿಲ್ದಾಣ ಪೂರಕವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ
ಎಂ.ಚಂದ್ರಪ್ಪ, ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಮುಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಹೊಳಲ್ಕೆರೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಲಾಗುತ್ತಿದೆ. ವಿಶೇಷವಾಗಿ 152 ಕೋಟಿ ರೂಪಾಯಿ ವೆಚ್ಚದಲ್ಲಿ ತಾಳ್ಯ ಹೋಬಳಿಯ‌ಕೆರೆಗಳಿಗೆ ನೀರು ತುಂಬಲು ಆದ್ಯತೆ ನೀಡಲಾಗಿದೆ.

357 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಎಲ್ಲಾ ಮನೆನೆಗಳಿಗೆ ಶುದ್ಧ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲಾಗುವುದು. 250 ಕೋಟಿ ವೆಚ್ಚದಲ್ಲಿ ಕೋಟಿಹ್ಯಾಳ ಗ್ರಾಮದಲ್ಲಿ ವಿದ್ಯುತ್ ಎಕ್ಸ್‌ಪ್ರಸ್ ಕೇಂದ್ರ ಸ್ಥಾಪಿಸಿಲಾಗಿದೆ. ಜೋಗದ ಮಹಾತ್ಮ ಗಾಂಧೀ ಜಲವಿದ್ಯುತ್ ಉತ್ಪಾದನಾ ಕೇಂದ್ರ ನೇರವಾಗಿ ವಿದ್ಯುತ್ ಸರಬರಾಜು ಮಾಡಲು ಎಕ್ಸ್‌ಪ್ರೆಸ್ ಕೇಂದ್ರ ಅನುಕೂಲವಾಗಿದೆ. ಚಿಕ್ಕಜಾಜೂರು, ರಾಮಗಿರಿ, ಮಲಾಡಿಹಳ್ಳಿ, ತೇಕಲವಟ್ಟಿ, ಚಿತ್ರಹಳ್ಳಿ ಭಾಗಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು.

300 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಳಲ್ಕೆರೆ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ಪುರಸಭೆ ಕಟ್ಟಡ, ಮಾದರಿ ಶಾಲೆ, ಕ್ರೀಡಾಂಗಣ, ಈಜುಕೋಳ ನಿರ್ಮಿಸಲಾಗಿದೆ. ಪಟ್ಟದ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಶಿವನ ಪ್ರತಿಮೆ ಸ್ಥಾಪಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು.

ತಾಲೂಕಿನ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಮುಂದಿನ ವರ್ಷದಿಂದ ಎಲ್ಲಾ ಶಾಲಾ ಮಕ್ಕಳಿಗೂ ಉಚಿತ ಪಾಸ್ ವಿತರಣೆ ಮಾಡಲಾಗುವದು. ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವರಿಗೆ ಈಗಾಗಲೇ ಉಚಿತ ಬಸ್‌ಗಳನ್ನು ವಿತರಿಸಲಾಗಿದೆ ಎಂದರು.

ಕೆಎಸ್‍ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಪ್ರಸ್ತಾವಿಕವಾಗಿ ಮಾತನಾಡಿ, ನಿಗಮದ ಆಸ್ತಿಗೆ ಮುಕುಟವಾಗಿ ಹೊಳಲ್ಕೆರೆ ಬಸ್ ನಿಲ್ದಾಣ ಸೇರ್ಪಡೆಯಾಗಿದೆ. ಸುಂದರ ಹಾಗೂ ಭವ್ಯವಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಸಾರಿಗೆ ಸಂಸ್ಥೆ 6 ದಶಕಗಳಿಂದ ರಾಜ್ಯದ ಮೂಲೆ ಮೂಲೆಗೂ ಸೇವೆ ನೀಡುತ್ತಿದೆ. ಸಂಸ್ಥೆಯಲ್ಲಿ 25 ಸಾವಿರ ಬಸ್‌ಗಳಿವೆ. ಕೆ.ಎಸ್.ಆರ್.ಟಿ.ಸಿ ನಿಗಮ ವ್ಯಾಪ್ತಿಯಲ್ಲಿ 8300 ಬಸ್‌ಗಳಿವೆ. ಸಂಸ್ಥೆ ದೇಶದಲ್ಲೇ ಮಾದರಿಯಾಗಿದೆ.

ಈ ಸಾಧನೆಗೆ ಸಾರ್ವಜನಿಕರ ಪ್ರೇರಣೆ ಹಾಗೂ
ನೌಕರರ ಶ್ರಮ ಕಾರಣ. ನಿಗಮ ಕೋವಿಡ್‌ನಿಂದಾಗಿ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಸರ್ಕಾರ ನೌಕರರ ವೇತನಕ್ಕಾಗಿ ಅನುದಾನ ನೀಡಿದೆ. ನಿಗಮದ ಏಳಿಗೆ ಎಲ್ಲರ ಸಹಕಾರ ಅಗತ್ಯ. ಶ್ರೀಸಾಮನ್ಯರು, ವಿದ್ಯಾರ್ಥಿಗಳು ಹಾಗೂ ಹಿರಿಯನಾಗರಿಕರು ಸಂಸ್ಥೆಯ ಬಸ್ ಸೇವೆಯನ್ನು ಅವಲಂಬಿಸಿದ್ದಾರೆ.

ನಿಗಮ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ವಸತಿ ಸಹಿತ ತರಬೇತಿಯನ್ನು ಹೊಳಲ್ಕೆರೆ ತರಬೇತಿ‌ ಕೇಂದ್ರಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ಚಾಲಕರಿಗೆ ಬೆಳ್ಳಿ ಪದಕ ವಿತರಣೆ

ಐದು ವರ್ಷ ಅಪಘಾತ ಹಾಗೂ ಅಪರಾಧ ರಹಿತವಾಗಿ, ವಾರ್ಷಿಕವಾಗಿ 240 ದಿನ ಹಾಜರಾತಿಯೊಂದಿಗೆ ಉತ್ತಮ ಸೇವೆ ಸಲ್ಲಿಸಿದ ಸಂಸ್ಥೆಯ 9 ಚಾಲಕರು “ಸುರಕ್ಷಾ ಚಾಲಕ” ಎಂಬ ಬಿರುದುಗೆ ಭಾಜನಾರಗಿದ್ದಾರೆ. ಇವರಿಗೆ ಗಂಡಭೇರುಢ ಲಾಂಛನವುಳ್ಳ 32 ಗ್ರಾಂ ತೂಕ ಬೆಳ್ಳಿ ಪದಕ, 2000 ರೂಪಾಯಿ ನಗದು ಹಾಗೂ ಪ್ರಶಂಸನಾ‌ ಪತ್ರ ನೀಡಿ ಗೌರವಿಸಲಾಯಿತು. ಪದಕ ಪಡೆದವರ ವಿವರ ಇಂತಿದೆ. ಸಿ.ಶಿವಕುಮಾರಸ್ವಾಮಿ, ಬಾಷ, ಲೋಕೇಶ್.ಜಿ.ಟಿ. ಶಿವಶಂಕರ ಮೂರ್ತಿ, ನಟರಾಜ.ಎಸ್, ಲಕ್ಷ್ಮಣ ಜಾನವಟ್ಟಿ, ಪುಟ್ಟರಾಜು.ಆರ್, ವಿಜಯಕುಮಾರ್ ಹಾಗೂ ರಾಘವೇಂದ್ರ.ಹೆಚ್.ಡಿ.

ನೂತನ ಬಸ್ ಮಾರ್ಗಗಕ್ಕೆ ಚಾಲನೆ

ಸಂತೇಬೆನ್ನೂರು, ಹೊಳಲ್ಕೆರೆ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಆರಂಭಿಸಲಾಗಿರುವ ನೂತನ ಬಸ್ ಮಾರ್ಗಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

ಹೊಳಲ್ಕೆರೆ ಬಸ್ ನಿಲ್ದಾದ ವಿಶೇಷತೆಗಳು

ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ 1 ಎಕರೆ 18 ಗುಂಟೆ ವಿಸ್ತೀರ್ಣದಲ್ಲಿ 9 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ,ಮುಂಗಡ ಟಿಕೆಟ್ ಕಾಯ್ದಿರಿಸುವ, ಪಾಸ್ ಕೌಂಟರ್ ಕೊಠಡಿಗಳು, ಉಪಹಾರಗೃಹ, ವಾಣಿಜ್ಯ ಸಮುಚ್ಚಯ, ವಿಕಲಚೇತರನರ ಅನುಕೂಲಕ್ಕಾಗಿ ರ್ಯಾಂಪ್, ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಶಿಶು ಹಾರೈಕೆ ಕೇಂದ್ರ ನಿರ್ಮಿಸಲಾಗಿದೆ. ಲಿಫ್ಟ್ ವ್ಯವಸ್ಥೆಗೆ ಪ್ರಾವಧಾನ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾರಿಗೆ ಸಂಪಂದ ಪುರವಣಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಹೊಳಲ್ಕೆರೆ ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್ ಹಾಗೂ ಇತರೆ ಸದಸ್ಯರು, ಶಿವಮೊಗ್ಗ ಸಾರಿಗೆ ಮಂಡಳಿಯ ನಿರ್ದೇಶಕ ಪಿ.ರುದ್ರೇಶ್, ಹುಬ್ಬಳ್ಳಿ ಮಂಡಳಿಯ ನಿರ್ದೇಶಕ ರಾಜು ವಿಠಲಸ ಜರತಾರಘರ, ತಹಶೀಲ್ದಾರ ರಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹಮದ್ ವಾಸೀಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

suddionenews

Recent Posts

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

2 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

3 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

12 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

12 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

12 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

12 hours ago