ಚಿತ್ರದುರ್ಗ, (ಮೇ.02): ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈರವರ ಹುಟ್ಟುಹಬ್ಬದ ಅಂಗವಾಗಿ ನಗರದ ಜೆ.ಸಿ.ಆರ್. ಏಳನೇ ಕ್ರಾಸ್‍ನಲ್ಲಿ ಸೋಮವಾರ ಜಿಲ್ಲಾ ಕಚೇರಿಯನ್ನು ಜಯಕರ್ನಾಟಕ ಜಿಲ್ಲಾಧ್ಯಕ್ಷ ಬಿ.ಟಿ.ರಾಜೇಂದ್ರ ಉದ್ಘಾಟಿಸಿದರು.
ಕಚೇರಿ ಉದ್ಘಾಟನೆ ನಂತರ ಸಸಿ ನೆಟ್ಟು ಮಾತನಾಡಿದ ಬಿ.ಟಿ.ರಾಜೇಂದ್ರ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಎನ್.ಮುತ್ತಪ್ಪ ರೈ ಸಾಕಷ್ಟು ಹೋರಾಟ ನಡೆಸಿ ನೊಂದವರು, ಶೋಷಿತರಿಗೆ ಕೈಲಾದಷ್ಟು ನೆರವು ನೀಡಿದ್ದಾರೆ. ಹಾಗಾಗಿ ಅವರ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಎಲ್ಲರಿಗೂ ಅವರದೆ ಆದ ವೈಯಕ್ತಿಕ ಜೀವನವಿರುತ್ತದೆ. ಆದರೂ ಬಿಡುವು ಸಿಕ್ಕಾಗ ಜಯಕರ್ನಾಟಕ ಸಂಘಟನೆಯನ್ನು ಜಿಲ್ಲೆಯಾದ್ಯಂತ ಬಲಪಡಿಸಿ ಎಂದು ಪದಾಧಿಕಾರಿಗಳಿಗೆ ಸೂಚಿಸಿದರು.
ಜಯ ಕರ್ನಾಟಕ ಜಿಲ್ಲಾ ಸಂಚಾಲಕ ನಾಗರಾಜ್ ಹಳಿಯೂರು, ಉಪಾಧ್ಯಕ್ಷರುಗಳಾದ ಮಂಜುಸೇನ್, ಅರುಣ್‍ಕುಮಾರ್, ಕುಮಾರ್, ತಾಲ್ಲೂಕು ಅಧ್ಯಕ್ಷ ನವೀನ್, ಟಿ.ಓಬಳೇಶ್, ಚಿದಾನಂದ, ದಾದಾಪೀರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಮೀರ್, ತಾಲ್ಲೂಕು ಉಪಾಧ್ಯಕ್ಷ ಎಸ್.ಪ್ರಕಾಶ್, ನಗರಾಧ್ಯಕ್ಷ ಸುನೀಲ್ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






GIPHY App Key not set. Please check settings