ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ 34 ಲಕ್ಷ ರೂ. ವಂಚನೆ : ಚಿತ್ರದುರ್ಗ ಸಿ.ಇ.ಎನ್ ಪೊಲೀಸರಿಂದ ಮೂವರ ಬಂಧನ

2 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ಸೈಬರ್ ಕ್ರೈಮ್ ವಿಚಾರಕ್ಕೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿದ ಚಿತ್ರದುರ್ಗ ಸಿಇಎನ್ ಪೊಲೀಸರು ಮೂವರು ಆನ್​ಲೈನ್​ ವಂಚಕರ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರನ್ನು ಉಡುಪಿಯ ಪ್ರಥ್ವೇಶ್( 25 ವರ್ಷ), ಚಿಕ್ಕಮಗಳೂರು ಜಿಲ್ಲೆಯ ನಂದೀಶ (24 ವರ್ಷ) ಮತ್ತು ಬೆಂಗಳೂರಿನ ಉಮರ್ ಫಾರೂಕ್ (24 ವರ್ಷ) ಎಂದು ಗುರುತಿಸಲಾಗಿದೆ. ಇವರಿಂದ 03 ಮೊಬೈಲ್‌ ಮತ್ತು ವಂಚಿಸಿದ ಹಣದಿಂದ ಖರೀದಿಸಿದ್ದ 4,50,000/-ರೂ ಮೌಲ್ಯದ ಮಹೀಂದ್ರ ಕಂಪನಿಯ XUV 700 ಕಾರನ್ನು ಪಡಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಘಟನೆ ವಿವರ : ಈ ಮೂವರು ಆರೋಪಿಗಳು “K3-Gold Stock investor Discussion Group” ನ Whatsapp Group ನ ಮೂಲಕ Fyers ಶೇರು ಮಾರುಕಟ್ಟೆಯ Flat form ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಚಿತ್ರದುರ್ಗ ನಗರದ ಸೈಯದ್‌ ಸಿರಾಜ್‌ ಬಂಡಿ ಎಂಬುವವರನ್ನು ನಂಬಿಸಿ ಅವರಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಒಟ್ಟು 34 ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಯಾವುದೇ ರೀತಿಯ ಹಣವನ್ನು ವಾಪಸ್  ಮಾಡದೇ ಮೋಸ ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ನಗರದ ಸಿ.ಇ.ಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಳೆದ ನವೆಂಬರ್ 23 ರಂದು ದೂರು ನೀಡಿರುತ್ತಾರೆ.

ಈ ದೂರಿನ ಮೇರೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಐ.ಪಿ.ಎಸ್, ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಪೊಲೀಸ್ ಠಾಣೆರವರಾದ ಉಮೇಶ್ ಈಶ್ವರ್ ನಾಯ್ಕ್ ಇವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್.ಎನ್, ಎಎಸ್ಐ ಅಂಜನಪ್ಪ, ಸಿಬ್ಬಂದಿಗಳಾದ ಹೆಚ್ ಸಿ ಕೆಂಚಪ್ಪ, ಹೆಚ್ ಸಿ ಗಂಗಾಧರಪ್ಪ, ಸಿಪಿಸಿ ಗಗನ್ ದೀಪ್ ಅವರ ತಂಡ ರಚಿಸಿ ಆರೋಪಿಗಳ ಪತ್ತೆ ಬಗ್ಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಹಣದ ಹರಿವಿನ ಜಾಡು ಹಿಡಿಯಲು ಸೂಚಿಸಿರುತ್ತಾರೆ. ನಂತರ ತನಿಖೆ ನಡೆಸಿದ ಈ ವಿಶೇಷ ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿರುತ್ತಾರೆ.

ಪ್ರಕರಣವನ್ನು ಭೇಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ  ಸಿಬ್ಬಂದಿಯರಾದ ಆಶಾ, ಹರ್ಷವರ್ಧನ್ ಹಾಗೂ ಲೋಕೇಶ್ ರವರಿಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks