Connect with us

Hi, what are you looking for?

ಪ್ರಮುಖ ಸುದ್ದಿ

ರತ್ನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ !

ರತ್ನಗಳು ಆಕರ್ಷಕವಾಗಿ ಕಾಣುವ ಹಾಗೂ ಅತಿ ಬೆಲೆ ಬಾಳುವ ಖನಿಜಗಳು. ಉಪಯೋಗ, ಹೊಳಪು ಮತ್ತು ಲಭ್ಯತೆಗೆ ತಕ್ಕಂತೆ ರತ್ನಗಳ ಬೆಲೆಯನ್ನು ಅಳೆಯಲಾಗುವುದು. ಆಭರಣಗಳಿಗಾಗಿ ಇವುಗಳನ್ನು ಕತ್ತರಿಸಿ ಪಾಲೀಸ್ ಮಾಡಲಾಗುವುದು. ಹೆಚ್ಚಿನ ರತ್ನಗಳು, ಖನಿಜದ ಸ್ಫಟಿಕದ ರೂಪದಲ್ಲಿರುತ್ತವೆ.

ಒಂದು ನಿರ್ದಿಷ್ಟ ರಾಸಾಯನಿಕ ಬಂಧ ಹಾಗೂ ಸ್ಪಷ್ಟ ಅಣು ರಚನೆಯಿಂದಾಗಿ, ರತ್ನದ ಕಲ್ಲು ಪಾರದರ್ಶಕವಾಗಿರುತ್ತದೆ. ರತ್ನದ ಕಲ್ಲುಗಳಿಗೆ ಬಳಸುವ 120 ಖನಿಜಗಳ ಪೈಕಿ ಕೇವಲ 25 ಮಾದರಿಗಳನ್ನು ಇಂದು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವಜ್ರ, ಪಚ್ಚೆ, ಮಾಣಿಕ್ಯ ಮತ್ತು ನೀಲಮಣಿಗಳು ಅತಿ ಬೆಲೆಬಾಳುವ ರತ್ನಗಳಲ್ಲಿ ಮುಖ್ಯವಾದವು. ಪುಷ್ಯರಾಗ, ಕ್ಷೀರಸ್ಫಟಿಕ ಮತ್ತು ಪದ್ಮರಾಗ ಮಣಿಗಳು ಎರಡನೇ ಗುಣಮಟ್ಟದ ರತ್ನಗಳು.

ಹೆಚ್ಚಿನ ರತ್ನಗಳು, ಸಾಮಾನ್ಯ ಖನಿಜಗಳ ಅತಿಸಾಮಾನ್ಯ ರೂಪದಲ್ಲಿರುತ್ತವೆ. ಉದಾಹರಣೆಗೆ ವಜ್ರ. ಇದು ಪೆನ್ಸಿಲ್‍ಗಳಲ್ಲಿ ಉಪಯೋಗಿಸುವ ಗ್ರಾಫೈಟ್‍ನಲ್ಲಿರುವ ಇಂಗಾಲದ ಸ್ವಲ್ಪ ವಿಭಿನ್ನ ರೂಪ ಅಷ್ಟೇ. ಅಂದರೆ ವಜ್ರಗಳು ಶುದ್ಧ ಇಂಗಾಲದ, ಗಟ್ಟಿಯಾದ ಮತ್ತು ಹೆÇಳೆಯುವ ಹರಳು ಎಂದರ್ಥ. ಆದರೆ ಸಾಮಾನ್ಯ ಗ್ರಾಫೈಟ್ ಬೂದು ಬಣ್ಣದಾಗಿದ್ದು, ನೋಡಲು ಆಕರ್ಷಕವೆನಿಸುವುದಿಲ್ಲ. ಪ್ರಾಕೃತಿಕವಾಗಿ ದೊರೆಯುವ ವಜ್ರ, ಗಾಜಿನ ತುಂಡುಗಳಂತಿರುತ್ತವೆ.

ಅದನ್ನು ಕತ್ತರಿಸಿ, ಪಾಲೀಷ್ ಮಾಡಿದಾಗ ಕಣ್ಣು ಕುಕ್ಕುವಂತೆ ಹೊಳೆಯುತ್ತದೆ. ಅತಿ ಅಮೂಲ್ಯದ ವಜ್ರ ನೀಲಿ ಬಣ್ಣ ಅಥವಾ ಬಣ್ಣವನ್ನು ಹೊಂದಿರುವುದಿಲ್ಲ. ವಜ್ರವು ಖನಿಜಗಳಲ್ಲೇ ಅತಿ ಕಠಿಣ ಎನ್ನಬಹುದು. ಅದನ್ನು ಇನ್ನೊಂದು ವಜ್ರದಿಂದಷ್ಟೇ ಕತ್ತರಿಸಲು ಸಾಧ್ಯ. ಜ್ವಾಲಾಮುಖಿಗಳ ಒಳಪದರದಲ್ಲಿ ಅತ್ಯಂತ ಬಿಸಿ ಹಾಗೂ ಒತ್ತಡದಲ್ಲಿ ಇವು ರೂಪಗೊಳ್ಳುವುದು ಇದಕ್ಕೆ ಕಾರಣ. ದಕ್ಷಿಣ ಆಫ್ರಿಕ, ಸೈಬೀರಿಯ, ಆಸ್ಟ್ರೇಲಿಯ, ಬ್ರೆಜಿಲ್ ಮತ್ತು ಭಾರತ ವಜ್ರ ಉತ್ಪಾದನೆಯ ಮುಂಚೂಣಿಯಲ್ಲಿ ನಿಲ್ಲುವ ರಾಷ್ಟ್ರಗಳು.

ಸ್ಫಟಿಕ ಶಿಲೆಗಳು ಮಣ್ಣು ಮತ್ತು ಕಲ್ಲುಗಳಲ್ಲಿ ಸಾಮಾನ್ಯವಾಗಿ ದೊರೆಯುವ ಖನಿಜ. ಶುದ್ಧ ಸ್ಫಟಿಕ ಶಿಲೆಯ ಹರಳಿನಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್‍ನ ಅಂಶಗಳೂ ಇರುತ್ತವೆ. ಸ್ಫಟಿಕದ ಹರಳು ನೇರಳೆ ಬಣ್ಣದಲ್ಲಿದ್ದರೆ, ಅದನ್ನು ಪದ್ಮರಾಗ ಮಾಣಿಕ್ಯ ಎನ್ನುತ್ತಾರೆ. ಇವು ಮುಖ್ಯವಾಗಿ ಉರಾಲ್ ಪರ್ವತಗಳು, ಬಾರತ, ಅಮೆರಿಕ, ಉರುಗ್ವೆ ಮತ್ತು ಬ್ರೆಜಿಲ್‍ನಲ್ಲಿ ಸಿಗುತ್ತವೆ.

ಕೋರಂಡಮ್, ಸಿಲಿಕಾ ಕಡಿಮೆಯಿರುವ ಅಗ್ನಿಶಿಲೆ ಹಾಗೂ ರೂಪಾಂತರಗಳಲ್ಲಿ ದೊರೆಯುವ ಇನ್ನೊಂದು ಸಾಮಾನ್ಯ ಖನಿಜ. ವಜ್ರದ ಬಳಿಕ ಇದೇ ಕಠಿಣವಾದ ಖನಿಜ. ಇದನ್ನು ಶುದ್ಧೀಕರಿಸಿದಾಗ ವಿವಿಧ ಬಣ್ಣಗಳನ್ನು ಪಡೆಯುತ್ತದೆ. ಕೋರಂಡಮ್‍ನಲ್ಲಿ ಕ್ರೋಮಿಯಂ ಆಕ್ಸೈಡ್‍ನ ಅಂಶವಿದ್ದರೆ ಅದು ಕೆಂಪು ಬಣ್ಣ ಪಡೆದು ಕೆಂಪು ಪದ್ಮರಾಗ ಮಾಣಿಕ್ಯ ಎನಿಸಿಕೊಳ್ಳುತ್ತದೆ. ಇವು ಮುಖ್ಯವಾಗಿ ಬರ್ಮಾದಲ್ಲಿ ಸಿಗುತ್ತವೆ. ಕಬ್ಬಿಣ ಮತ್ತು ಟೈಟಾನಿಯಂನ ಅಂಶಗಳಿದ್ದರೆ, ನೀಲಮಣಿ ಎನಿಸಿಕೊಳ್ಳುತ್ತದೆ. ಇವು ಕೆಂಪು ಹೊರತುಪಡಿಸಿ ಯಾವುದೇ ಬಣ್ಣದಲ್ಲಿರಬಹುದು. ಆದರೆ ಸಾಮಾನ್ಯವಾಗಿ ಕಡುನೀಲಿ ಬಣ್ಣದಲ್ಲಿ ಇರುತ್ತದೆ. ಹಳದಿ ಬಣ್ಣದಲ್ಲಿ ಇರುವ ನೀಲಮಣಿಗಳೂ ಇವೆ.

ಪಚ್ಚೆ ರತ್ನ ಮುಖ್ಯವಾಗಿ ಗ್ರಾನೈಟ್ ಅದಿರುಗಳಲ್ಲಿರುತ್ತವೆ. ಮರಕತ ಮತ್ತು ನೀಲ ರತ್ನ ಇದರ ಎರಡು ವಿಧಗಳು. ಮರಕತ ನಿಷ್ಕಲ್ಮಶ ಹಸಿರು ಬಣ್ಣದಲ್ಲಿದ್ದು, ಕೊಲಂಬಿಯ, ರಷ್ಯದ ಉರಲ್ ಪರ್ವತಗಳು, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯದಲ್ಲಿ ನೈಸರ್ಗಿಕವಾಗಿ ದೊರೆಯುತ್ತವೆ. ನೀಲ ರತ್ನ ತಿಳಿ ನೀಲಿ ಬಣ್ಣದಲ್ಲಿರುತ್ತದೆ.

ಎಲ್ಲ ರತ್ನಗಳೂ ಖನಿಜಗಳಲ್ಲ. ಮುತ್ತು ಮತ್ತು ಶಿಲಾರಾಳ ಅಥವಾ ಅಂಬರು, ನಿಜಾರ್ಥದಲ್ಲಿ ಖನಿಜಗಳಲ್ಲ. ಅವುಗಳ ರಚನೆಯ ಹಿಂದೆ ಸಾವಯವ ಜೀವಿಗಳ ಹಿನ್ನೆಲೆಯಿದೆ. ಅವು ಪ್ರಾಣಿ ಮತ್ತು ಸಸ್ಯಗಳ ನೆರವಿನಿಂದ ರೂಪು ಪಡೆಯುತ್ತವೆ. ಉದಾಹರಣೆಗೆ ಮುತ್ತು, ಕಪ್ಪೆ ಚಿಪ್ಪು ಮೀನಿನ ಚಿಪ್ಪಿನೊಳಗೆ ಇರುವಂಥದ್ದು. ಅದೇ ರೀತಿ ಅಂಬರು, ದೇವದಾರು ಹಾಗೂ ಸೂಚಿಪರ್ಣ ವೃಕ್ಷಗಳ ರಾಳದಿಂದ ರೂಪು ಪಡೆಯುತ್ತದೆ. ಇವು ವರ್ಷಾನುಗಟ್ಟಲೆ ಕಲ್ಲುಗಳ ನಡುವೆ ಸಮಾಧಿಯಾಗಿ ರತ್ನ ಎನಿಸಿಕೊಳ್ಳುತ್ತದೆ.

ಮನುಷ್ಯ ಇಂದು ಕೃತಕ ರತ್ನಗಳನ್ನು ರಚಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾನೆ. ಭೂಮಿಯ ಮೇಲ್ಪದರದಲ್ಲಾಗುವ ಒತ್ತಡದ ಮಾದರಿಯಲ್ಲೇ ಪ್ರಯೋಗಶಾಲೆಗಳಲ್ಲಿ ಒತ್ತಡವನ್ನು ರಚಿಸಿ ರತ್ನಗಳನ್ನು ತಯಾರಿಸಲಾಗುತ್ತದೆ. ಸೂಕ್ಷ್ಮ ವಜ್ರಗಳನ್ನು ಗ್ರಾಫೈಟ್‍ನಿಂದ ಪ್ರಯೋಗಶಾಲೆಗಳಲ್ಲೇ ಪಡೆಯಬಹುದು. ಇವನ್ನು ದಂತ ವೈದ್ಯರ ಹಲ್ಲು ಕತ್ತರಿಸುವ ಉಪಕರಣ, ಗಾಜು ಕತ್ತರಿಸುವ ಹಾಗೂ ಬಂಡೆಗಳನ್ನು ಕೊರೆಯುವ ಗರಗಸ ಮತ್ತು ಡ್ರಿಲ್‍ಬಿಟ್‍ಗಳಲ್ಲಿ ಬಳಸುತ್ತಾರೆ. ಕೃತಕ ಮಾಣಿಕ್ಯವನ್ನು ಲೇಸರ್‍ಗಳಲ್ಲಿ ಬಳಸುತ್ತಾರೆ. ನೀಲಮಣಿ ಹಾಗೂ ಪಚ್ಚೆ ರತ್ನಗಳನ್ನೂ ಯಶಸ್ವಿಯಾಗಿ ತಯಾರಿಸಬಹುದು. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪೆನಿ ಮೊದಲ ಬಾರಿಗೆ ಕೃತಕ ರತ್ನಗಳ ತಯಾರಿಕೆಯನ್ನು 1955ರಲ್ಲಿ ಆರಂಭಿಸಿತು.

ವಿಶೇಷ ಲೇಖನ : ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ರಿ.)

Click to comment

Leave a Reply

Your email address will not be published. Required fields are marked *

Latest

Home

  ಸುದ್ದಿಒನ್, ದಾವಣಗೆರೆ, (ಆ.05): ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದ್ದಾರೆ. ದೆಹಲಿಯ ಕೃಷಿ ಭವನದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.05) : ಜನಸ್ನೇಹಿಯಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂಬುದು ಚಿತ್ರದುರ್ಗ ಜಿಲ್ಲಾಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಜಿಲ್ಲೆಗೆ ಕಾಲಿಟ್ಟ ದಿನದಿಂದಲೂ ಜನರ ನೋವು ನಲಿವಿಗೆ ತಾಯಿಯಂತೆ ಕಿವಿಯಾಗಿದ್ದಾರೆ. ಮೊಳಕಾಲ್ಮೂರು...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಸಹಜ. ಸಾಕಷ್ಟು ಜನ ರೈತರ ಬೆಳೆ ನಾಶವಾಗಿದೆ. ಇದೀಗ ಮೂಡಿಗೆರೆ ತಾಲೂಕಿನ ಕಾರ್ ಬೈಲ್ ಗ್ರಾಮದಲ್ಲೂ ರೈತ ಬೆಳೆನಾಶವಾಗಿರೋ ಘಟನೆ ನಡೆದಿದೆ. ಕಾರ್ ಬೈಲ್ ಗ್ರಾಮದ ತೋಟವೊಂದಕ್ಕೆ...

ಪ್ರಮುಖ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಕ್ಸ್ಟ್ ಸಿಎಂ ಯಾರಾಗ್ತಾರೆ ಅನ್ನೋ ರೇಸ್ ನಲ್ಲಿ ತೀರಾ ಹತ್ತಿರದಲ್ಲಿ ಕಾಂಪೀಟೇಷನ್ ಕೊಟ್ಟವರು ಅರವಿಂದ್ ಬೆಲ್ಲದ್. ಸಾಕಷ್ಟು ಜನರು ಸಾಲಿನಲ್ಲಿದ್ರು ಅರವಿಂದ್ ಬೆಲ್ಲದ್...

ಪ್ರಮುಖ ಸುದ್ದಿ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 5 ಜನ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ರನ್ನ ನೇಮಕ ಮಾಡಲಾಗಿದೆ. ವಾರ್ತಾ...

ಪ್ರಮುಖ ಸುದ್ದಿ

  ಸುದ್ದಿಒನ್, ಚಿತ್ರದುರ್ಗ, (ಆ.05) : ಹಿಂದುಳಿದ ವರ್ಗಗಳ ನಾಯಕಿ, ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ...

You May Also Like

ಆರೋಗ್ಯ

ಮಾಹಿತಿ: ಮಂಜುನಾಥ ಯಾದವ್ (97417 38979) ಬೇಳೆಕಟ್ಟು ಸಾರು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಎರಡ್ಮೂರು ದಿನ ಕೂಡ ಈ ಸಾಂಬಾರ್ ತಿನ್ನೋದು ಅಂದ್ರೆ ಟೇಸ್ಟೋ ಟೇಸ್ಟೂ..ಆದ್ರೆ ಕೆಲವೊಬ್ರಿಗೆ ಈ ಸಾಂಬಾರ್ ಮಾಡೋಕೆ...

ಪ್ರಮುಖ ಸುದ್ದಿ

ಮುಂಬೈ : ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದಾರೆ. ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದ್ದು, ಒಂದೊಂದೆ ವಿಚಾರಗಳು ಬಯಲಿಗೆ ಬರ್ತಿವೆ. ಇದೀಗ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ರಾಜ್...

ಆರೋಗ್ಯ

ನಮ್ಮ ಸುತ್ತ ಮುತ್ತ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ವಸ್ತುವನ್ನ ನಾವೂ ನೆಗ್ಲೆಕ್ಟ್ ಮಾಡ್ತೀವಿ. ಚಿಕ್ಕವರಿದ್ದಾಗ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥಗಳನ್ನ ಬೆಳೀತಾ ಬೆಳೀತಾ ಮರೆತೆ ಹೋಗ್ತೀವಿ. ಆದ್ರೆ ಅಂದು ಖುಷಿಗಾಗಿ ತಿನ್ನುವ...

ಪ್ರಮುಖ ಸುದ್ದಿ

ಕಾಬೂಲ್: ಕಂಧರ್ ಪ್ರಾಂತ್ಯದ ಜೀರೊಯ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಹತರಾಗಿದ್ದಾರೆ. ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ...

Copyright © 2021 Suddione. Kannada online news portal

error: Content is protected !!