ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ಅನುಭವಿಸುತ್ತಿರುವ ಜನ ಸಂಖ್ಯೆ ಜಾಸ್ತಿ. ಅದನ್ನ ಕರಗಿಸುವುದಕ್ಕೆ ಸಾಕಷ್ಟು ಶ್ರಮ ಹಾಕುತ್ತಾರೆ. ಇನ್ನಿಲ್ಲದ ವ್ಯಾಯಾಮವನ್ನು ಮಾಡುತ್ತಾರೆ. ಕೆಲವೊಂದಿಷ್ಟು ಮಂದಿಗೆ ವ್ಯಾಯಾಮ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಅಂಥವರಿಗೆ ಇಲ್ಲೊಂದು ಟಿಪ್ಸ್ ಇದೆ ನೋಡಿ.
* ಕೊತ್ತಂಬರಿ ಸೊಪ್ಪು, ಪುದೀನಾ, ನಿಂಬೆರಸ, ಶುಂಠಿ ಹಾಗೂ ಜೇನುತುಪ್ಪವನ್ನು ಬಳಸಿಕೊಂಡು ಒಂದು ಜ್ಯೂಸ್ ತಯಾರಿಸಿಕೊಳ್ಳಿ.
* ಮೊದಲಿಗೆ ಪುದೀನಾ ಹಾಗೂ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ನೀರನ್ನು ಹಾಕಿಕೊಂಡು ರುಬ್ಬಿರಿ. ನಿಮಗೆ ಎಷ್ಟು ತೆಳುವಾಗಿ ಬೇಕೋ ಅಷ್ಟು ನೀರನ್ನು ಹಾಕಿಕೊಳ್ಳಿ.
* ಬಳಿಕ ಆ ರಸವನ್ನ ಒಂದು ಬೌಲ್ ಗೆ ಸೋಸಿಕೊಳ್ಳಿ. ಅದಕ್ಕೆ ಒಂದು ಸ್ಪೂನ್ ಜೇನು ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿ ಸೇವಿಸಿ.
* ಬೆಳಗ್ಗೆ ಈ ಪಾನೀಯವನ್ನು ಕುಡಿಯುವುದರಿಂದ ಸಾಕಷ್ಟು ಅನುಕೂಲಗಳು ಸಿಗಲಿವೆ. ಸುಲಭವಾಗಿ ಬೊಜ್ಜು ಕರಗಲಿದೆ. ಬೊಜ್ಜು ಕರಗುವುದಕ್ಕೆ ಬೇರೆ ಸಾಹಸ ಪಡಬೇಕಿಲ್ಲ. ಹಾಗೇ ವರ್ಕೌಟ್ ಮಾಡಿಕೊಳ್ಳುವುದಕ್ಕೆ ಸಾಹಸವನ್ನು ಪಡಬೇಕಿರುವುದಿಲ್ಲ.
* ಇನ್ನು ಪುದೀನಾ ಜ್ಯೂಸ್ ನಿಂದಾನೂ ಸಾಕಷ್ಟು ಲಾಭವಿದೆ. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇದೆ. ಎದೆಯುರಿಯನ್ನು ಈ ಪುದೀನಾ ನಿವಾರಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ.
* ನಿಂಬೆಯಲ್ಲಿ ಸಾಮಾನ್ಯವಾಗಿ ಗೊತ್ತಿರುವಂತೆ ವಿಟಮಿನ್ ಸಿ ಇದೆ. ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಇದು ದೇಹದಲ್ಲಿರುವ ವಿಷವನ್ನು ತೊಡೆದು ಹಾಕುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಈ ಮೂರನ್ನು ಬಳಸಿಕೊಂಡು ನಿಮ್ಮ ಬೊಜ್ಜನ್ನು ಸುಲಭವಾಗಿ ಕರಗಿಸಬಹುದಾಗಿದೆ. ಪ್ರತಿದಿನ ಈ ಜ್ಯೂಸ್ ಅನ್ನು ಒಮ್ಮೆ ಟ್ರೈ ಮಾಡಿ.
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 08 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಫೆಬ್ರವರಿ. 08 ) ಹತ್ತಿ ಮಾರುಕಟ್ಟೆ ಇದ್ದು,…
ಫೆಬ್ರವರಿ 16 ಹತ್ತಿರವಾಗುತ್ತಿದೆ. ಅಂದು ದರ್ಶನ್ ಅಭಿಮಾನಿಗಳಿಗೆ ವಿಶೇಷದಲ್ಲಿ ವಿಶೇಷವಾದ ದಿನವಾಗಿದೆ. ತಮ್ಮ ಬಾಸ್ ಬರ್ತ್ ಡೇ ಸೆಲೆಬ್ರೇಷನ್ ಮೂಡಲ್ಲಿದ್ದಾರೆ.…
ಬೆಂಗಳೂರು: ಬೆಳಗಾವಿ ರಾಜಕಾರಣದಲ್ಲಿ ಸತೀಶ್ ಜಾರಕಿಹೊಳಿ ಸ್ಟ್ರಾಂಗ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗೂ ಒಳ್ಳೆಯ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ…
ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ. ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ…
ಸುದ್ದಿಒನ್ :ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಮಾದರಿಯನ್ನು ನೋಡಿದರೆ ಬಿಜೆಪಿ ಅಧಿಕಾರದ ಗದ್ದುಗೆ ಏರುವುದು ಸ್ಪಷ್ಟವಾಗಿದೆ. ಆದರೆ ಈ ಚುನಾವಣೆಯಲ್ಲಿ…
ಗುಬ್ಬಿ: ಸಾಮಾಜಿಕ ಹೋರಾಟಗಾರ ಜನ ಸ್ನೇಹಿ ನಾಗಸಂದ್ರ ವಿಜಯ್ ಕುಮಾರ್ ( 62 ) ಕೆಲ ದಿನಗಳಿಂದ ಅನಾರೋಗ್ಯದಿಂದ…