Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಾಜದಲ್ಲಿ ಶಿಕ್ಷಣದ ಮೌಲ್ಯ ಕುಂಠಿತವಾದರೆ ದೇಶ ನಾಶವಾಗುತ್ತದೆ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
                  ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಫೆ. 10) :  ಗುರುಗಳು, ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ಉಪ ವಿಭಾಗಾಧಿಕಾರಿ ಚಂದ್ರಯ್ಯ ತಿಳಿಸಿದರು.

ನಗರದ ತ.ರಾ.ಸು. ರಂಗಮಂದಿರದಲ್ಲಿ ಎಸ್.ಜೆ.ಎಸ್ ಜ್ಞಾನಪೀಠದಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ 7ನೇ ಜ್ಞಾನ ಸಂಭ್ರಮದಲ್ಲಿ ಮಾತನಾಡಿದ ಅವರು, ಉತ್ತಮವಾದ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮತ್ತು ಪೋಷಕರ ಮೇಲಿದೆ.

ಜ್ಞಾನವನ್ನು ಸಂಫಾದೆನ ಮಾಡಿದರೆ ಸಮಾಜದಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯಲು ಸಾಧ್ಯವಿದೆ. ನಮಗೆ ಈ ರೀತಿಯಾದ ಸೌಲಭ್ಯ ಇರಲಿಲ್ಲ, ಈಗ ಸರ್ಕಾರದಿಂದ ಉತ್ತಮವಾದ ಸೌಕರ್ಯವನ್ನು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಮೀರಿ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ಶಿಕ್ಷಣ ದೂರೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪ್ರಗತಿಗೆ ದಾರಿಯಾಗುತ್ತದೆ ಎಂದರು.

ನಮ್ಮ ಕಾಲದಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವವರಿಲ್ಲ ನಮ್ಮ ದಾರಿ ತಪ್ಪಿತ್ತು ಅದರೆ ಇಂದು ನಿಮಗೆ ಮಾರ್ಗದರ್ಶನ ನೀಡುವವರ ಸಂಖ್ಯೆ ಹೆಚ್ಚಿದೆ ಅಲ್ಲದೆ ಅಧುನಿಕ ತಂತ್ರಜ್ಞಾನದಲ್ಲಿ ಯಾವಾಗ ಬೇಕಾದರೇ ಯಾವ ಮಾಹಿತಿ ಬೇಕಾದರು ಸಿಗುವಂತ ಸೌಕರ್ಯ ಇದೆ.  ಇದರ ಸದುಪಯೋಗದಿಂದ ಪ್ರಗತಿಯನ್ನು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿ, ಈಗ ಉತ್ತಮವಾದ ಗುರುಗಳ ಬಳಗ ವಿದ್ಯಾವಂತರಾದ ಪೋಷಕರಿದ್ದಾರೆ. ಆದರೆ ನಮಗೆ ಈ ರೀತಿಯಾದ ಸೌಕರ್ಯ ಇರಲಿಲ್ಲ, ನಮ್ಮ ಪೋಷಕರು ಆನಕ್ಷರಸ್ಥರಾಗಿದ್ದು ಕಡಿಮೆ ಓದಿದ ಶಿಕ್ಷಕರ ಬಳಗ ಇತ್ತು ಅದರಿಂದಲೇ ಮಾಹಿತಿಯನ್ನು ಪಡೆಯಬೇಕಿತ್ತು ಎಂದು ಚಂದ್ರಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊರಟಿಕೆರೆಯ ಮಹಾಲಿಂಗ ಶ್ರೀಗಳು ಮಾತನಾಡಿ, ಮಕ್ಕಳು ಬಿಳಿ ಹಾಳೆ ಇದ್ದ ಹಾಗೇ ಅದರಲ್ಲಿ ಯಾವ ರೀತಿಯಲ್ಲಿ ನಾವುಗಳು ಬರೆಯುತ್ತಾ ಹೋಗುತ್ತೇವೆ ಅದೇ ರೀತಿ ಮೂಡುತ್ತದೆ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದನ್ನು ಮರೆಯಬೇಡಿ, ಇದರ ಪರಿಣಾಮ ಶೀಘ್ರವಾಗಿ ಸಿಗುವುದಿಲ್ಲ ಮುಂದಿನ ದಿನಗಳಲ್ಲಿ ಸಿಗಲಿದೆ. ಮಕ್ಕಳ ಮುಂದೆ ಪೋಷಕರು ಗಲಾಟೆಯನ್ನು ಮಾಡಬಾರದು ಇದರ ಪರಿಣಾಮ ಮಕ್ಕಳ ಮೇಲೆ ಬೀರಲಿದೆ ಇದರಲ್ಲಿ ಪೋಷಕರು ಬದಲಾಗದ ಹೊರೆತು ಮಕ್ಕಳು ಬದಲಾಗಲು ಸಾದ್ಯವಿಲ್ಲ ಎಂದರು.

ಮಡಿವಾಳ ಮಾಚಿದೇವ ಮಠದ ಶ್ರೀ ಬಸವ ಮಾಚಿದೇವ ಶ್ರೀಗಳು ಮಾತನಾಡಿ, ಶಿಕ್ಷಣ ಜ್ಞಾನವನ್ನು ನೀಡುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ. ನಮ್ಮ ಕಾಲದಲ್ಲಿ ಈ ರೀತಿಯಾದ ಕಾರ್ಯಕ್ರಮಗಳು ಇರಲಿಲ್ಲ ಈಗ ಎಲ್ಲವು ಸಹಾ ಉತ್ತಮವಾಗಿ ನಡೆಯುತ್ತಿವೆ. ಶಾಲೆಯಲ್ಲಿ ಕಲಿತ್ತದ್ದನ್ನು ಮಕ್ಕಳು ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಇದರಿಂದ ಅವರ ಮುಂದೆ ಉತ್ತಮ ರೀತಿಯಲ್ಲಿ ಶಿಕ್ಷಕರು ಪೋಷಕರು ನಡೆಯಬೇಕಿದೆ ಎಂದು ತಿಳಿ ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಭೋವಿ ಗುರುಫೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಮೌಲ್ಯ ಕುಂಠಿತವಾದರೆ ದೇಶದ ನಾಶವಾಗುತ್ತದೆ. ಮಕ್ಕಳಿಗೆ ಬರೀ ಅಂಕಗಳನ್ನು ಮಾತ್ರವೇ ಕಲಿಸದೇ ಸಂಸ್ಕಾರವನ್ನು ಕಲಿಸಬೇಕಿದೆ. ಇದರಿಂದ ಅವರು ಸಂಸ್ಕಾರವಂತರಾಗುತ್ತಾರೆ. ನಮ್ಮ ಶಿಕ್ಷಣ ಸಂಸ್ಥೆ ಆದಾಯಕ್ಕಾಗಿ ನಡೆಸುತ್ತಿಲ್ಲ ಇದರ ಬದಲಿಎಗ ಮಕ್ಕಳ ಅಧ್ಯಯನಕ್ಕಾಗಿ ನಡೆಸಲಾಗುತ್ತಿದೆ. ಪೋಷಕರು ನೀಡುವ ಶುಲ್ಕದ ಜೊತೆಗೆ ಶ್ರೀಮಠವೂ ಸಹಾ ಶುಲ್ಕವನ್ನು ಭರಿಸುವುದರ ಮೂಲಕ ಶಿಕ್ಷಣ ಸಂಸ್ಥೆಯನ್ನು ನಡೆಸಲಾಗುತ್ತಿದೆ ಎಂದರು.

ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಿಂಗಲ್ ಪೇರೆಂಟ್, ಅನಾಥ ಮತ್ತು ಬಡ ಮಕ್ಕಳಿಗೆ ಅವಕಾಶವನ್ನು ನೀಡಲಾಗಿದೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳು ಸರ್ಕಾರಿ ಉದ್ಯೋಗವನ್ನು ಕಾಯದೇ ಬೇರೆಯವರಿಗೆ ಉದ್ಯೋಗವನ್ನು ನೀಡುವಂತರಾಗಬೇಕಿದೆ ಇದನ್ನು ನಾವು ಬಯಸುತ್ತೇವೆ. ಜನರು ಸಹಾ ತಮ್ಮ ಹಿನ್ನೂಟವನ್ನು ಅರಿಯಬೇಕಿದೆ ಇದರಿಂದ ಮಾತ್ರ ಇತಿಹಾಸವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಂತ ಮಲ್ಲಿಕಾರ್ಜನ ಶ್ರೀಗಳು ಸಾನಿದ್ಯವನ್ನು ವಹಿಸಿದ್ದರು, ಸಂಸ್ಥೆಯ ಕಾರ್ಯದರ್ಶೀ ಮೋಹನ್, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ, ಮುಖ್ಯಶಿಕ್ಷಕರಾದ ಎಂ.ಸಿ.ನಾಗರಾಜ, ಪಿ.ಕೆ.ಶ್ರೀಧರ್, ಶಿವರಾಂ, ಹನುಮಂತಪ್ಪ, ನಾಗರಾಜ್, ಸಹಶಿಕ್ಷಕ ಹನುಮಂತಪ್ಪ, ದಾವಣಗೆರೆ ಬೋವಿ ಸಮಾಜದ ಜಯ್ಯಣ್ಣ, ಗೋಪಾಲಪ್ಪ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಶಾರದ ಬಾಲಕಿಯ ಪ್ರೌಢಶಾಲೆ, ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ, ರಾಮಕೃಷ್ಣ ವಸತಿ ಪ್ರೌಢಶಾಲೆ, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!