Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಗಸಾಧುಗಳು ಬಂದರೆ ಕೊಂಚ ಹುಷಾರು : ತುಮಕೂರಿನಲ್ಲಿ ನಕಲಿ ನಾಗಸಾಧುಗಳಿಂದ ಮೋಸ..!

---Advertisement---

ತುಮಕೂರು: ದೇವರ ವೇಶ, ನಾಗಸಾಧುಗಳು ಎಂದರೆ ಜನರಿಗೆ ಭಯ ಭಕ್ತಿ ಜಾಸ್ತಿ. ಹೀಗಾಗಿಯೇ ಅಂಗಡಿ ಬಳಿಯೋ ಮನೆ ಬಳಿಯೋ ಬಂದರೆ ದೇವರಂತೆ ಟ್ರೀಟ್ ಮಾಡುತ್ತಾರೆ. ಭಕ್ತಿಗೆ ಕಾಣಿಕೆಯನ್ನು ಕೊಡುತ್ತಾರೆ. ಆದರೆ ಈ ರೀತಿ ಭಕ್ತಿ, ಗೌರವ ತೋರಿಸಲು ಹೋದವರಿಗೆ ಮೋಸವಾಗಿದೆ. ಆದರೆ ಅವರು ನಕಲಿ ಸಾಧುಗಳಾಗಿದ್ದಾರೆ.

ನಗರದ ಎಂಜಿ ರೋಡಲ್ಲಿ ಮಲ್ನಾಡ್ ಎಂಬ ಸ್ಟುಡಿಯೋ ಇದೆ. ಆ ಸ್ಟುಡಿಯೋಗೆ ನಕಲಿ ಸಾಧುಗಳು ಎಂಟ್ರಿ ಕೊಟ್ಡಿದ್ದಾರೆ. ಬಳಿಕ ಸ್ಟುಡಿಯೋ ಮಾಲೀಕ ಚಂದ್ರು ಅವರ ಕೈಗೆ ರುದ್ರಾಕ್ಷಿ ಹಾಕಿದ್ದಾರೆ. ಬಳಿಕ ಎರಡು ಕೈಹಿಡಿದು ಮಂತ್ರ ಹೇಳಲು ಶುರು ಮಾಡಿದ್ದಾರೆ. ಧ್ಯಾನ ಮಾಡುವುದಕ್ಕೆ ಹೇಳಿ ಚಂದ್ರು ಕೈಲಿದ್ದ ಉಂಗುರವನ್ನೇ ಬಿಚ್ಚಿಕೊಂಡಿದ್ದಾರೆ. ಏನೇನೋ ಮಂತ್ರ ಹೇಳಿಕೊಟ್ಟು ಒಳ್ಳೆಯದ್ದಾಗುತ್ತೆ ಎಂದು ನಂಬಿಸಿದ್ದಾರೆ.

ನಕಲಿ ಸಾಧುಗಳ ಮಾತನ್ನು ನಂಬಿ ಮಾಲೀಕ ಚಂದ್ರು ಧ್ಯಾನದಲ್ಲಿ ಮಗ್ನರಾಗಿದ್ದಾರೆ‌. ಆದ್ರೆ ಧ್ಯಾನದಿಂದ ಹೊರ ಬಂದ ಮೇಲೆ ಗೊತ್ತಾಗಿದ್ದು, ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಮಾಲೀಕ ಚಂದ್ರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಸಾಧುಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರು ನಕಲಿ ಸಾಧುಗಳು ಈ ಕೃತ್ಯ ನಡೆಸಿದ್ದಾರೆ. ಹತ್ತಿರದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment