ಅಲೆಮಾರಿ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತೇನೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭರವಸೆ

1 Min Read

 

ಸುದ್ದಿಒನ್, ಬೆಂಗಳೂರು, ನವೆಂಬರ್. 22 : ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತೇನೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭರವಸೆ ನೀಡಿದರು.

ಬೆಂಗಳೂರಿನ ಜೆ.ಪಿ.ಭವನದಲ್ಲಿ ಶುಕ್ರವಾರ (ನವೆಂಬರ್. 21 ರಂದು) ರಾಷ್ಟ್ರೀಯ ಪರಿಷತ್ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಾಗೂ 25 ವರ್ಷಗಳ ಬೆಳ್ಳಿ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಲೆಮಾರಿ ಸಮುದಾಯದ ಯುವ ಮುಖಂಡ ಪ್ರತಾಪ್‍ ಜೋಗಿ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ದೇವೇಗೌಡರು, ಅಲೆಮಾರಿ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಡೆಗಣಿಸಿದ್ದಾರೆ. ಇರುವ ಸವಲತ್ತುಗಳನ್ನು ಕಸಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಜಾತ್ಯಾತೀತ ಜನತಾದಳದ ನೂತನವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಮತ್ತು ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಉಕ್ಕು ಮತ್ತು ಬಾರೀ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರನ್ನು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ಜಯಣ್ಣ, ಯಶೋಧರ್, ಗೋಪಾಲಸ್ವಾಮಿ ನಾಯಕ್ ವಕ್ತಾರು, ಚಿದಾನಂದಮೂರ್ತಿ, ರಮೇಶ್, ಅಬ್ದುಲ್.ಎಸ್.ಸಿ (ಅಬು), ಪ್ರತಾಪ್‍ಜೋಗಿ, ತಿಮ್ಮಣ್ಣ ರವರು ಅಭಿನಂದಿಸಿದರು.

Share This Article