ಬಾದಾಮಿ: ಚುನಾವಣೆ ಹತ್ತಿರವಾಗುತ್ತಿರುವಾಗಲೂ ಸಿದ್ದರಾಮಯ್ಯ ಇನ್ನು ಕ್ಷೇತ್ರ ಆಯ್ಕೆ ಫೈನಲ್ ಮಾಡಿಲ್ಲ. ಕೋಲಾರದಲ್ಲಿ ನಿಲ್ತಾರೆ ಎನ್ನಲಾಗಿತ್ತು, ಆದ್ರೆ ಅದಕ್ಕೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಗಲಿಲ್ಲ. ಈಗ ಕ್ಷೇತ್ರ ಆಯ್ಕೆಯ ಅಗತ್ಯವಿದೆ. ಇದರ ನಡುವೆ ಇಂದು ಬಾದಾಮಿಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಬಾದಾಮಿ ಜನತೆ ಕೂಡ ಇಲ್ಲಿಂದಾನೇ ಸ್ಪರ್ಧಿಸಿ ಅಂತ ಒತ್ತಡ ಹಾಕುತ್ತಿದ್ದಾರೆ.
ಬಾದಾಮಿಯಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಜನರನ್ನುದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಕಾರ್ಯಕರ್ತರು, ನೀವೂ ಬಾದಾಮಿ ಕ್ಷೇತ್ರದಿಂದಾನೇ ಮತ್ತೆ ಸ್ಪರ್ಧೆ ಮಾಡಬೇಕೆಂದು ಹೇಳಿದಾಗ ಗರಂ ಆದ ಸಿದ್ದರಾಮಯ್ಯ ಅವರು, ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದರೆ ನೀವೆಲ್ಲಾ ಕಾಂಗ್ರೆಸ್ ಗೆ ಮತ ನೀಡಿ, ಗೆಲ್ಲಿಸಬೇಕು ಎಂದಿದ್ದಾರೆ.
ನಾನು ಇರುವ ತನಕ ರಾಜಕೀಯ ನಿವೃತ್ತಿ ಹೊಂದಲ್ಲ. ನಾನು ಎಲ್ಲಿಯೇ ಸ್ಪರ್ಧಿಸಲಿ, ನಾನು ನಿಮ್ಮವನೆ. ಹೈಕಮಾಂಡ್ ಬಳಿ ಈಗಾಗಲೇ ಮೂರು ಕ್ಷೇತ್ರಗಳ ಲೀಸ್ಟ್ ಕೊಟ್ಟಿದ್ದೇನೆ. ಬಾದಾಮಿ, ಕಾರ ಮತ್ತು ವರುಣಾ. ಅವರು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ನಾನು ನಿಲ್ಲುತ್ತೇನೆ ಎಂದಿದ್ದಾರೆ.





GIPHY App Key not set. Please check settings