ನವದೆಹಲಿ: ಸದ್ಯ ಪಕ್ಷ ಸಂಘಟನೆಗೆಂದು ಕನ್ಯಾಕುಮಾರಿಯಿಂದ ಕಾಶ್ಮೀರದ ತನಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ನಡು ನಡುವೆ ಬಿಡುವಾದಗೆಲ್ಲಾ ದೆಹಲಿಗೆ ಭೇಟಿ ನೀಡಿ, ಚುನಾವಣೆಯ ಕೆಲಸಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಮಾಧ್ಯಮದವರೊಂದಿಗೆ ಆಗಾಗ ಆಪ್ತಸಮಾಲೋಚನೆ ನಡೆಸಿ, ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇಂಥದ್ದೇ ಸಂದರ್ಭದಲ್ಲಿ ಇದೀಗ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆಯಾಗಲೂ ಎಂಥ ಹುಡುಗಿ ಬೇಕು ಎಂಬುದನ್ನು ಹೇಳಿದ್ದಾರೆ.

ಬುದ್ಧಿವಂತ ಹಾಗೂ ಪ್ರೀತಿಸುವ ಹುಡುಗಿಯಾದರೆ ಸಾಕು. ತಕ್ಕನಾದ ಹುಡುಗಿ ಸಿಕ್ಕರೆ ಖಂಡಿತ ಮದುವೆಯಾಗುತ್ತೀನಿ. ನನ್ನ ಹೆತ್ತವರು ಪ್ರೀತಿಸುವುದನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ನನಗೆ ಬಹಳ ನಿರೀಕ್ಷೆಗಳಿವೆ ಎಂದಿದ್ದಾರೆ. ಇದೇ ವೇಳೆ ತಮ್ಮಿಷ್ಟದ ತಿಂಡಿಯ ಬಗ್ಗೆಯೂ ಮಾತನಾಡಿ, ನನಗೆ ನಾನ್ ವೆಜ್ ಎಂದರೆ ಬಹಳ ಇಷ್ಟ. ಚಿಕನ್ ಟಿಕ್ಕಾ, ಸೀಖ್ ಕಬಾಬ್ ಮತ್ತು ಆಮ್ಲೇಟ್ ಎಂದರೆ ತುಂಬಾ ಇಷ್ಟಪಟ್ಟು ತಿನ್ನುತ್ತೇನೆ ಎಂದಿದ್ದಾರೆ.
ತಮ್ಮ ಮೊದಲ ಸಂಬಳ, ಹುಡುಗಿ, ಕೆಲಸ ಹೀಗೆ ಹಲವು ಸ್ವಾರಸ್ಯಕರ ವಿಚಾರವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಸದ್ಯ ಭಾರತ್ ಜೋಡಪೊ ಯಾತ್ರೆಗೆ ಬ್ರೇಕ್ ಕೊಟ್ಟಿದ್ದು, ಮತ್ತೆ ಕಾಶ್ಮೀರದ ತನಕ ಮುಂದುವರೆಸಲಿದ್ದಾರೆ.

