ಸಾಯುವ ತನಕ‌ ಅಮ್ಮನ ಜೊತೆಗೆ ನಿಲ್ತೀನಿ : ನಟ ದರ್ಶನ್

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಸುಮಲತಾ ನಿರಾಸೆಗೊಂಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಅವರ ಸಂಧಾನವೂ ಫಲಪ್ರದವಾಗಿದೆ. ಹೀಗಾಗಿ ಇಂದು ಮಂಡ್ಯದಲ್ಲಿಯೇ ನಾನು ಸ್ಪರ್ಧೆಗೆ ನಿಲ್ಲಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ವೇಳೆ ದರ್ಶನ್ ಕೂಡ ಸಾಥ್ ನೀಡಿದ್ದಾರೆ.

ಸುಮಲತಾ ಮಾತನಾಡುವುದಕ್ಕೂ ಮುನ್ನ ಮಾತನಾಡಿದ ದರ್ಶನ್, ನನ್ನ ಸೆಲೆಬ್ರೆಟಿಗಳಿಗೆ ನಮಸ್ಕಾರ. ಹಿರಿಯರಿಗೆ ನಮಸ್ಕಾರ. ಇದೇ ಐದು ವರ್ಷಗಳ ಹಿಂದೆ ಪ್ರಚಾರಕ್ಕೆ ಬಂದಾಗ ನನಗೆ ಎಳನೀರು ಕೊಟ್ಟು ತಣ್ಣಗೆ ಮಾಡಿದ್ದೀರಿ. ಅವರಿಗೆ ನನ್ನ ಧನ್ಯವಾದಗಳು. ಆರತಿ ಬೆಳಗಿದ ತಾಯಂದಿರಿಗೂ ನನ್ನ ಧನ್ಯವಾದಗಳು. ಯಮ ಕರೆದರು ಅಮ್ಮನ ಒಂದು ಕೆಲಸ ಮುಗಿಸಿ ಬರುತ್ತೀನಿ ಎಂದು ಹೇಳುತ್ತೀನಿ. ಅವರ ಕುಟುಂಬದ ಜೊತೆಗಿನ ನನ್ನ ಬಾಂಧವ್ಯ ಅಂಥದ್ದು. ಇವತ್ತು ಕೈಗೆ ಆಪರೇಷನ್ ಇತ್ತು. ಆದರೆ ಅಮ್ಮನ ಕೆಲಸ ಇದೆ ಅಂತ ಬಂದೆ ಎಂದಿದ್ದಾರೆ.

ಅಮ್ಮ ಏನೇ ನಿರ್ಧಾರ ತೆಗೆದುಕೊಂಡರು ನಾನು ಅದಕ್ಕೆ ಬದ್ಧನಾಗಿರುತ್ತೇನೆ. ನಾನು ನನ್ನ ತಮ್ಮ ಅವರ ಮಾತನ್ನೇ ಕೇಳುತ್ತೇವೆ ಎಂದು ಸುಮಲತಾ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ನಟ ದರ್ಶನ್.

suddionenews

Recent Posts

ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ

ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ, ಈ ರಾಶಿಗಳ ಮದುವೆಗೆ ತುಂಬಾ ಅಡಚಣೆ, ಭಾನುವಾರ ರಾಶಿ ಭವಿಷ್ಯ 23 ಫೆಬ್ರವರಿ…

1 hour ago

ಚಿತ್ರದುರ್ಗ : ನಾಲ್ವರು ಶ್ರೀಗಂಧದ ಕಳ್ಳರ ಬಂಧನ : 7.78 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ

    ಸುದ್ದಿಒನ್, ಹಿರಿಯೂರು, ಫೆಬ್ರವರಿ. 22 : ಅಬ್ಬಿನಹೊಳೆ ಮತ್ತು ಹೊಸದುರ್ಗ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಗಂಧ…

9 hours ago

ಮಹಾರಾಷ್ಟ್ರದ ಸಾರಿಗೆ ಬಸ್ ಮತ್ತು ನಿರ್ವಾಹಕನಿಗೆ ಮಸಿ : ಚಿತ್ರದುರ್ಗದಲ್ಲಿ 8 ಮಂದಿ ಪೊಲೀಸರ ವಶಕ್ಕೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 22 : ಮಹಾರಾಷ್ಟ್ರದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನಿಗೆ ಮರಾಠಿಗರು ಕನ್ನಡದಲ್ಲಿ ಟಿಕೆಟ್ ಕೇಳಿದ…

11 hours ago

ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರದ ಸಂಕಲ್ಪ : ಸಚಿವ ಡಿ.ಸುಧಾಕರ್

ಚಿತ್ರದುರ್ಗ. ಫೆ.22: ರಾಜ್ಯದ ರೈತರಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ಯೋಜನಾ ಮತ್ತು…

12 hours ago

ಇ-ಖಾತಾ ಅಭಿಯಾನಕ್ಕೆ ಸಚಿವ ಡಿ.ಸುಧಾಕರ್ ಚಾಲನೆ

ಚಿತ್ರದುರ್ಗ. ಫೆ.22: ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

12 hours ago