ಬೆಂಗಳೂರು : ರಾಯಚೂರಿನ ಪಿಎಸ್ಐ ಪರಶುರಾಮ್ ಇತ್ತಿಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಸಕ ಹಾಗೂ ಅವರ ಮಗ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪರಶುರಾಮ್ ಪತ್ನಿ ಆರೋಪ ಮಾಡಿದ್ದಾರೆ. ಪರಶುರಾಮ್ ಆತ್ಮಹತ್ಯೆಯ ಬಳಿಕ, ತಮ್ಮ ಹೆಸರು ಕೇಳಿದ ಬೆನ್ನಲ್ಲೇ, ಎಫ್ಐಆರ್ ದಾಖಲಾದ ಬೆನ್ನಲ್ಲೇ ಶಾಸಕ ಚೆನ್ನಾರೆಡ್ಡಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಬಳಿಕ ಮಾತನಾಡಿರುವ ಶಾಸಕ ಚನ್ನಾರೆಡ್ಡಿ ಪಾಟೀಲ, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾವ ಪೊಲೀಸಗ ಬಳಿಯೂ ದುಡ್ಡು ಕೇಳಿಲ್ಲ. ದುಡ್ಡಿನ ಬಗ್ಗೆ ಮಾತು ಕೂಡ ಆಡಿಲ್ಲ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಮಾತನಾಡಿದ್ದೇನೆ ಅಷ್ಟೆ. ಬೇರೆ ಯಾವ ವಿಷಯವನ್ನು ನಾನು ಮಾತನಾಡಿಲ್ಕ
ಪ್ರಕರಣವನ್ನು ನಮ್ಮ ಸರ್ಕಾರ ಸಿಐಎಇಗೆ ವಹಿಸಿದೆ. ತನಿಖಾ ವರದಿ ಬಂದ ಮೇಲೆ ನಾನು ಸೇರಿ ಸತ್ಯಾಂಶ ತಿಳಿಯುತ್ತದೆ. ಎಫ್ಐಆರ್ ದಾಖಲು ಮಾಡುವುದು ಪೊಲೀಸರಿಗೆ ಬಿಟ್ಟಿದ್ದು. ಆ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ. ಆ ಕುರಿತು ಯಾರ ಜೊತೆಗೂ ಮಾತನಾಡಿಲ್ಲ. ಇದೊಂದು ಷಡ್ಯಂತ್ರ. ತಂದೆ-ಮಗನನ್ನು ಸಿಕ್ಕಿ ಹಾಕಿಸಬೇಕೆಂದು ಮಾಡಿರುವ ಹುನ್ನಾರ. ಸಿಐಡಿ ವರದಿ ಬಂದ ಮೇಲೆ ಅದು ಷಡ್ಯಂತ್ರವೋ, ಅಲ್ಲವೋ ಎಂಬುದು ಹೊರಗೆ ಬರುತ್ತದೆ. ಕಾನೂನಿಗೆ ನಾನು ತಲೆ ಬಾಗುತ್ತೇನೆ. ಸಿಐಡಿ ಅವರು ಕರೆ ಮಾಡಿದ ತಕ್ಷಣ ನಾನು ಹೋಗಿ ವಿಚಾರಣೆಗೆ ಸಹಕಾರ ಕೊಡುತ್ತೇನೆ. ಸಿಎಂ ಅವರು ನಮ್ಮ ನಾಯಕ. ಪಕ್ಷದ ಸಭೆಗೆ ಬರಲು ಹೇಳಿದ್ದರು, ಅದಕ್ಕೆ ಹೋಗಿದ್ದೆ ಎಂದಿದ್ದಾರೆ.
ಸುದ್ದಿಒನ್ :ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ. ಕಾಲ್ತುಳಿತದಲ್ಲಿ 30…
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ವಿಚಾರಕ್ಕೆ ಬಂಡಾಯದ ಕಿಚ್ಚು ಜೋರಾಗಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರ ಸ್ಥಾನಕ್ಕೆ ಕುತ್ತು…
ಬಳ್ಳಾರಿ: ಕಡಲೆ ಕಾಳು ಬೆಎಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ…
ಸುದ್ದಿಒನ್, ಚಿತ್ರದುರ್ಗ,ಜನವರಿ. 29 : ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು ಆದರಿಂದ ಕಂಡು ಹಿಡಿದ ಮೊಬೈಲ್ .ಟಿ.ವಿ. ವಾಟ್ಸಾಪ್,…
ಬೆಂಗಳೂರು: ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೆ.ಸುಧಾಕರ್ ಕೂಡ ವಿಜಯೇಂದ್ರ ವಿರುದ್ಧ…
ಬೆಂಗಳೂರು: ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳಲ್ಲಿ (ನಾನ್ ಆರ್ಎಪಿಡಿಆರ್ ಪಿ) ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ…