ದೆಹಲಿ: ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಿದ್ದಾರೆ. ಏಳನೇ ಪತ್ರದಲ್ಲಿ ಸಿಎಂ ಕೇಜ್ರಿವಾಲ್ ಅವರಿಗೇನೆ ಬ್ಲಾಕ್ ಮೇಲ್ ಮಾಡಿರುವ ಸ್ಟೈಲ್ ನಲ್ಲಿ ಪತ್ರ ಬರೆದಿದ್ದಾರೆ. ನಿಮ್ಮ ಗ್ಯಾಂಗ್ ನ ಚಾಟ್ ಮತ್ತು ರೆಕಾರ್ಡಿಂಗ್ ಎಲ್ಲಾ ನನ್ನ ಬಳಿಯೇ ಇದೆ. ನಾನು ಅತಿಯಾದ ಆತ್ಮ ವಿಶ್ವಾಸದಿಂದ ಇದ್ದೇನೆ ಎಂದಿದ್ದಾರೆ.
ಪತ್ರದಲ್ಲಿ ಶಾಲೆಗಳ ಹಣದ ವಿಚಾರವನ್ನು ಉಲ್ಲೇಖಿಸಿದ್ದು, ಕೇಜ್ರಿವಾಲ್ ಜೀ ನೀವೂ ನನ್ನನ್ನು ದರೋಡೆಕೋರ ಎಂದು ಕರೆದಿದ್ದೀರಿ. ಆದ್ರೆ ಮಕ್ಕಳ ಶಿಕ್ಷಣ ಕಲ್ಯಾಣಕ್ಕಾಗಿರುವ ಹಣವನ್ನು ಲಪಾಟಾಯಿಸಿರುವ ದೊಡ್ಡ ದರೋಡೆಕೋರರು ನೀವೂ, ಕಳ್ಳರು ನೀವೂ. ಎಲ್ಲೆಡೆ ದೆಹಲಿ ಸ್ಕೂಲ್ ಮಾಡೆಲ್ ಹೆಸರಿನಲ್ಲಿ ಹಣ ಪಡೆಯುತ್ತೀರಿ. ಸತ್ಯೇಂದರ್ ಜಿ, ಮನೀಷ್ ಜಿ ಹಣ ಪಡೆಯುತ್ತೀರಿ. ಸತ್ಯೇಂದ್ರ ಜೈನ್ 2017ರ ಫೆಬ್ರವರಿಯಲ್ಲಿ 20 ಮಿಲಿಯನ್ ಡಾಲರ್ ಗಳನ್ನು ರೂಪಾಯಿಗೆ ವರ್ಗಾವಣೆ ಮಾಡಿಸಿ, ಒಂದು ಭಾಗವಾಗಿ ಬಿಟ್ ಕಾಯಿನ್ ಆಗಿಸಿ ಬೆಂಗಳೂರಿನಲ್ಲಿ ತನ್ನ ವ್ಯಾಪಾರದ ಸಹದ್ಯೋಗಿಗಳಿಗೆ ನೀಡುವುದಕ್ಕೆ ತಿಳಿಸಿದ್ದರು.
ಕೇಜ್ರಿವಾಲ್ ಜೀ ಈಗ ಮತ್ತೊಮ್ಮೆ ನೀವು ಅಳುವುದು ಖಚಿತವಾಗಿದೆ. ಇದಲ್ಲಾ ಕಲ್ಪನೆ ಎನ್ನುವುದಾದರೆ ಪಾಲಿಗ್ರಾಫ್ ಪರೀಕ್ಷೆಗೆ ನೀವೂ ಒಳಪಡಬೇಕು ಎಂದು ನಾನು ಬಯಸುತ್ತೇನೆ. ನಾನು ಎಲ್ಲಾ ಪುರಾವೆಗಳೊಂದಿಗೆ ನನ್ನ ಆರೋಪವನ್ನು ಸಾಬೀತುಪಡಿಸುತ್ತೇನೆ. ಅತಿಯಾದ ಆತ್ಮವಿಶ್ವಾಸ ನನಗಿಲ್ಲ ಎಂದು ಭಾವಿಸಬೇಡಿ. ನಿಮ್ಮ ಗ್ಯಾಂಗ್ ನ ಚಾಟ್ ಮತ್ತು ರೆಕಾರ್ಡ್ ನನ್ನ ಬಳಿ ಇದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…