ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ಬಿಜೆಪಿ ಸದಸ್ಯರು ಹೈಡ್ರಾಮಾವನ್ನೇ ಮಾಡಿದ್ದಾರೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡುವ ವಿಧೇಯಕ ಮಂಡನೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರಿದ್ದ ಪೀಠವನ್ನೇ ಏರಿ ಅವರ ಮೇಲೆಯೇ ಬಜೆಟ್ ಪ್ರತಿಯನ್ನು ಹರಿದು ಹಾಕಿ ಅಗೌರವ ಸೂಚಿಸಿದ್ದಾರೆ. ಇದರಿಂದ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿಕೆ ಮಾಡಿದ್ದರು. ಈ ಘಟನೆಗೆ ನೊಂದ ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿ.ಆರ್.ಪಾಟೀಲ್ ಅವರು, ಸದನದಲ್ಲಿ ನಡೆದಿರುವ ಘಟನೆ ನನಗೆ ತೀವ್ರ ಬೇಸರ ತರಿಸಿದೆ. ವಿಪಕ್ಷದ ಸದಸ್ಯರುಗಳು ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದಾರೆ. ಈ ರೀತಿಯ ಘಟನೆ ಆಗಬಾರದು. ನಾನು ಮನನೊಂದು ರಾಜೀನಾಮೆ ಕೊಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಅಲ್ಲಿಯೇ ಕಾಣಿಸಿಕೊಂಡರು. ಬಿ.ಆರ್.ಪಾಟೀಲ್ ಅವರ ಸಮಸ್ಯೆಯನ್ನು ಆಲಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿ.ಆರ್.ಪಾಟೀಲ್ ನನ್ನ ಸ್ನೇಹಿತ. ಅವರ ಜೊತೆಗೆ ನಾನು ಮಾತನಾಡುತ್ತೇನೆ ಎಂದರು.
ಆದರೆ ವಿಧಾನಸಭೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದಕ್ಕೆ ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರೀ ಗದ್ದಲ, ಕೋಲಾಹಲದ ನಡುವೆಯೇ ಬಜೆಟ್ ಅನ್ನು ಅಂಗೀಕಾರ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಎದ್ದ ಗದ್ದಲದಿಂದ ಕಲಾಪವನ್ನೇ ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು.
ಕೋತಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರದುರ್ಗ ಮೂಲದವರು. ಜ್ಯೋತಿರಾಜ್ ಮೂಲ ಹೆಸರಾದರೂ ಮಾಡುವ ಸಾಹಸಗಳಿಂದ ಕೋತಿರಾಜ್ ಎಂದೇ ಖ್ಯಾತಿ…
ಹೌದು ಯುಗಾದಿ ಹಬ್ಬಕ್ಕೂ ಮುನ್ನ ಒಂದು ಮಳೆಯಾಗಬೇಕಿದೆ. ಇದು ಅನಾದಿ ಕಾಲದಿಂದಾನೂ ನಡೆದುಕೊಂಡು ಬಂದಿರುವ ಪದ್ಧತಿ. ಪ್ರಕೃತಿಯೇ ಹಾಗೇ ಯಾರೂ…
ಸುದ್ದಿಒನ್, ಚಳ್ಳಕೆರೆ, ಮಾರ್ಚ್. 22 : ತಾಲ್ಲೂಕಿನ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ…
ಸುದ್ದಿಒನ್ : ಬ್ಯಾಂಕ್ ನೌಕರರ ಸಂಘಗಳು ಬಹಳ ದಿನಗಳಿಂದ ವಾರಕ್ಕೆ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿವೆ.…
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಡುವೆ ಜೋರು ಗದ್ದಲ ಎದ್ದಿದೆ. ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…