ಲಕ್ಷಾಧೀಪತಿ, ಕೋಟ್ಯಾಧಿಪತಿಗಳ ನಡುವೆ ನಾನು ಶಾಸಕನಾಗಿದ್ದೇನೆ : ರೇಣುಕಾಚಾರ್ಯ

suddionenews
1 Min Read

ಬೆಳಗಾವಿ: ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಅಷ್ಟೇ ಬಾಕಿ ಇದೆ. ಹೀಗಿರುವಾಗಲೂ ಸಚಿವ ಸ್ಥಾನ ಬೇಕು, ಮೂರು ತಿಂಗಳಾದರೂ ಸರಿ ಸಚಿವರಾಗಿಯೇ ತೀರಬೇಕು ಎಂಬುದು ಹಲವರ ಆಕಾಂಕ್ಷೆಯಾಗಿದೆ. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಪಯಣ ಬೆಳೆಸಿದ್ದಾರೆ. ದೆಹಲಿಯಿಂದ ಬಂದ ಮೇಲೆ ಸಿಹಿ ಸುದ್ದಿ ಸಿಗಬಹುದಾ ಎಂಬ ಪ್ರಶ್ನೆಗೆ, ಶಾಸಕ ರೇಣುಕಾಚಾರ್ಯ ಮಾತನಾಡಿದ್ದು, ನನಗೆ 365 ದಿನವೂ ಸಿಹಿಯೇ. ಕಹಿ ಅನ್ನೋದು ಗೊತ್ತೆ ಇಲ್ಲ ಎಂದಿದ್ದಾರೆ.

ನನಗೆ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. 2009ರಿಂದ 2012ರ ತನಕ ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನಿಲ್ಲಿ ಸಂತೋಷದಿಂದಾನೇ ಇದ್ದೀನಿ. ನಾನು ಯಾವಾಗಲೂ ಸಂತೋಷ ಜೀವಿ. ಕೆಕವರು ಲಕ್ಷಾಧೀಪತಿಗಳು, ಕೋಟ್ಯಾಧಿಪತಿಗಳು ಇದ್ದಾರೆ. ಅವರೆಲ್ಲರೂ ಶಾಸಕರಾಗೋದಕ್ಕೆ ಸಾಧ್ಯವಾಗಿದೆಯಾ..? ಆದ್ರೆ ನಾನೊಬ್ಬ ಸಾಮಾನ್ಯವಾಗಿ ಶಾಸಕನಾಗಿದ್ದೇನೆ ಎಂದಿದ್ದಾರೆ.

ಜನಾದೇಶ ಬಹಳ ಮುಖ್ಯ. ನಾನು ಶಾಸಕನಾಗಿರುವುದಕ್ಕೆ ತುಂಬಾ ಖುಷಿ ಇದೆ. ಜನಾದೇಶ ನನಗೆ ಮತ್ತೆ ಸಿಗುವ ಆತ್ಮವಿಶ್ವಾಸವಿದೆ. ಹೊನ್ನಾಳಿ ಕ್ಷೇತ್ರದ ಜನ ಆಯ್ಕೆ ಮಾಡಿದ ಮೇಲೆ ಮಾಧ್ಯಮಾಗಳು ನನ್ನನ್ನು ರಾಜ್ಯಕ್ಕೆ ಪರಿಚಯಿಸಿವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *