Connect with us

Hi, what are you looking for?

ಪ್ರಮುಖ ಸುದ್ದಿ

ಮಾನವ ಸಂಸ್ಕೃತಿ ಬುದ್ಧ, ಬಸವರಿಂದ ಮೂಡಿ ಬಂದಿದೆ; ಪ್ರೊ.ಮಲ್ಲಿಕಾರ್ಜುನ ಆರ್.ಹಲಸಂಗಿ

ಚಿತ್ರದುರ್ಗ, (ಏ. 06) : ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಫ್ರೊ ಮಲ್ಲಿಕಾರ್ಜುನ ಆರ್. ಹಲಸಂಗಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗು ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಂಘರ್ಷಗಳು ಮತ್ತು ಸಾಮರಸ್ಯ ವಿಷಯ ಕುರಿತು ಮಾತನಾಡಿದ ಅವರು, ಸಂಘರ್ಷ ಮಾನವ ಇತಿಹಾಸದ ಆಯಾಮವಾಗಿಯೇ ಬೆಳೆದುಕೊಂಡು ಬಂದಿರುವ ವಿದ್ಯಮಾನ. ಸಂಘರ್ಷದ ಮೂಲ ಉದ್ದೇಶ ಸರಿಪಡಿಸುವಿಕೆ.

ಬಸವಣ್ಣನವರು ವೈದಿಕ ವ್ಯವಸ್ಥೆಯ ಹೊಳಹುಗಳನ್ನು ಕಂಡು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದರು. ಸಾಧ್ಯವಾಗದಾದಾಗ ಅವರು ಶರಣ ತತ್ವದ ಕಡೆ ಬಂದರು. ಬಸವಣ್ಣನವರ ಪ್ರೀತಿ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವುದು. ಅದು ಸಾಂಸ್ಥಿಕ ಸ್ವರೂಪವನ್ನು ಸ್ಥಾಪಿಸುವುದು ಆಗಿತ್ತು. ಅರಿವೇ ಗುರು ಎಂದರು.

ಕಾಯಕ ಕೈಲಾಸವಾಗಬೇಕು. ಆತ್ಮಾನುಸಂಧಾನ ಮಾಡಿಕೊಳ್ಳಬೇಕು. ದೇವರನ್ನು ಒಳಗಿನಿಂದ ಹುಡುಕುತ್ತ ನಾಗರಿಕ ಸಮಾಜದ ಸ್ಥಾಪಕ ಮನುಷ್ಯನೇ ಆಗಬೇಕು. ಸಹಾನುಭೂತಿ, ಕರುಣೆ, ಅನುಭಾವ ಇವೆಲ್ಲವು ಬೇಕು. ತನ್ಮೂಲಕ ತನ್ನ ವ್ಯಕ್ತಿತ್ವವನ್ನು ಉನ್ನತಿಗೇರಿಸಿಕೊಂಡವನೇ ನಿಜವಾದ ಶರಣ. ಏಕ ಸಂಸ್ಕøತಿಯ ಹೇರಿಕೆ ಆ ರಾಷ್ಟ್ರದ ವಿನಾಶಕ್ಕೆ ಕಾರಣವಾಗುತ್ತದೆ. ಸಾಂಸ್ಕೃತಿಕ ಸಾಮರಸ್ಯ ಉಂಟಾಗಬೇಕು. ಮಾನವ ಸಂಸ್ಕೃತಿ ಬುದ್ಧ ಮತ್ತು ಬಸವರಿಂದ ಮೂಡಿಬಂದಿತು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಚಳುವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ. ಅದು ಸ್ವಾತಂತ್ರ್ಯ ಸಂಗ್ರಾಮವಾಗಿರಬಹುದು. ಇನ್ನಿತರೆ ಹಲವು ಹೋರಾಟಗಳಿರಬಹುದು. ಚಳುವಳಿಗಿಂತಲು ತೀವ್ರತರವಾದದ್ದು ಕ್ರಾಂತಿ. ರಷ್ಯಾ, ಅಮೆರಿಕ, ಫ್ರಾನ್ಸ್ ಕ್ರಾಂತಿಯಂತೆ ಕರ್ನಾಟಕದಲ್ಲೂ ಕಲ್ಯಾಣ ಕ್ರಾಂತಿಯಾಯಿತು. ಕುಟುಂಬದಲ್ಲಿದ್ದುಕೊಂಡು ಹಣ, ಆಸ್ತಿ, ಅನ್ನ, ಅರಿವೆ, ಆಶ್ರಯಕ್ಕಾಗಿ ಸಂಘರ್ಷ ಮಾಡುವವರು ಜನಸಾಮಾನ್ಯರು. ಇವರದು ಭೌತಿಕವಾಗಿರುವ ಸಂಘರ್ಷ. ಎಲ್ಲ ಕಾಲದಲ್ಲೂ ಸಾಮಾಜಿಕ ಅಸಮಾನತೆ ಇರುತ್ತದೆ. ಇದು ರಾಜಕೀಯ ಅಸಮಾನತೆಗೂ ಕಾರಣವಾಗುತ್ತದೆ. ಅದರ ಜೊತೆ ಧಾರ್ಮಿಕ ಅಸಮಾನತೆ ಇರುತ್ತದೆ.

ವರ್ಣ, ವರ್ಗ, ಜಾತಿ, ಲಿಂಗ, ಹಾಗೂ ವಯೋಭೇದ ಹೀಗೆ ಪಂಚ ಭೇದಗಳಿವೆ. ಇವು ಬುದ್ಧ, ಬಸವ, ಪೈಗಂಬರ್, ಗಾಂಧೀಜಿ, ಅಂಬೇಡ್ಕರ್ ಮತ್ತು ನಮ್ಮ ಕಾಲದಲ್ಲೂ ಇವೆ. ಅಸಮಾನತೆ ಇಲ್ಲದಿರುವ ಸಮಾಜ ಅದು ಸಮ ಸಮಾಜ. ಜ್ಞಾನಪ್ರಧಾನ ಪುಸ್ತಕಗಳನ್ನು ಓದಬೇಕು. ಪ್ರಕೃತಿ ಪುಸ್ತಕವನ್ನು ಓದಬೇಕು. ಸಮಾಜ ಸುಧಾರಕರು ಎಷ್ಟೇ ಬಂದರು ಇನ್ನೂ ಅಸಮಾನತೆ ಇದೆ. ನಾವು ಆಶಾವಾದಿಗಳಾಗಿ ಇರಬೇಕು ಎಂದರು.

ಬಸವಣ್ಣನವರದು ವೈಚಾರಿಕ ಕ್ರಾಂತಿ. ಆ ಸಂದರ್ಭದಲ್ಲಿ ಅನೇಕ ಸವಾಲುಗಳಿದ್ದವು. ಶರಣರು ವಿಚಾರದ ಮೂಲಕ ಕ್ರಾಂತಿ ಮಾಡಿದರು. ಶಿವಶರಣರು ಸತ್ಯವೆಂಬ ಕತ್ತಿಯನ್ನು ಹಿಡಿದು ಹೋರಾಡಿದರು. ಕೊಲ್ಲುವ ಹೃದಯವನ್ನು ಗೆಲ್ಲುತ್ತೇವೆಂಬುದು ಶರಣರ ತತ್ವ. ಸತ್ಯ, ಕರುಣೆ, ಮಮತೆ, ಪ್ರೀತಿ ಇವು ಶರಣ ತತ್ವದ ಜೀವಾಳ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಶಿಧರ ಉಬ್ಬಳಗುಂಡಿ ರಚನೆಯ ಮರಣ ಮೃದಂಗ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಬಸವರಾಜ ಐರಣಿ ದಾವಣಗೆರೆ ಇವರನ್ನು ಸನ್ಮಾನಿಸಲಾಯಿತು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಶ್ರೀಮತಿ ಪರಂಜ್ಯೋತಿ, ಶ್ರೀಮತಿ ಪುಷ್ಪವಲ್ಲಿ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ಸಿಬ್ಬಂದಿವರ್ಗ ಮೊದಲಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಇಮ್ರಾನ್ ಸ್ವಾಗತಿಸಿದರು. ಶ್ರೀಮತಿ ನೇತ್ರಾವತಿ ನಿರೂಪಿಸಿದರು. ಕಾಟಲಿಂಗೇಶ್ವರ ವಂದಿಸಿದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರ ವರದಿಯಲ್ಲಿ 183 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47668 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 69...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಸುದ್ದಿಒನ್,ಬಳ್ಳಾರಿ, (ಜೂ.15) : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ 339 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದವರಿಗೆ ಎಷ್ಟು ಮೊತ್ತ ಸಿಗಬಹುದು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ಕಾಡುವಂತ ಪ್ರಶ್ನೆ. ಆ ಪ್ರಶ್ನೆಗೆ ಇಂದು ಐಸಿಸಿ ಉತ್ತರಿಸಿದೆ. ಟೆಸ್ಟ್ ಚಾಂಪಿಯನ್ ಶಿಪ್...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ನವದೆಹಲಿ : ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಸಿದ್ಧತೆಗಳು ನಡೆದಿವೆ. ವರ್ಷದ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪ್ರವಾಸದ ಸಮಯ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

error: Content is protected !!