ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದತಿ ಮುಂದುವರಿಕೆ

ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ರೈಲು ಸಂಚಾರ ರದ್ದತಿಯನ್ನು ಮುಂದುವರೆಸಲಾಗಿದೆ. ಇದಕ್ಕೆ ಕಾರಣ ಪ್ರಯಾಣಿಕರ ಕೊರತೆ ಎನ್ನಲಾಗಿದೆ. ಪ್ರಯಾಣಿಕರು ನಿರೀಕ್ಷಿಸಿದ ಮಟ್ಟಿಗೆ ಬಾರದೆ ಇರುವ ಕಾರಣ ಈ ಭಾಗದ ರೈಲನ್ನ ರದ್ದು ಮಾಡಲಾಗಿದೆ. ರೈಲು ಸಂಖ್ಯೆ 17347/17348 ಆಗಿದ್ದು, ಎಸ್.ಎಸ್.ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಎಸ್.ಎಸ್.ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ ಪ್ರೆಸ ರೈಲಿನ ಸಂಚಾರವನ್ನು ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ಸಂಚಾರ ಭಾಗಶಃ ರದ್ದು ಮಾಡಲಾಗಿದೆ. ಇದನ್ನ ಜೂನ್ 30, 2025ರವರೆಗೆ ವಿಸ್ತರಿಸಲಾಗಿದೆ.

 

ಈ ಹಿಂದೆ ಮಾರ್ಚ್ 31, 2025 ರವರೆಗೆ ಮಾತ್ರ ಭಾಗಶಃ ರದ್ದತಿ ಇತ್ತು, ಆದರೆ ಈಗ ಅದನ್ನು ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ. ಹುಬ್ಬಳ್ಳಿಯಿಂದ ಹೊರಡುವ ರೈಲು (ರೈ.ಸಂ.17347) ಚಿಕ್ಕಜಾಜೂರಿನಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಹಾಗೆಯೇ, ಚಿತ್ರದುರ್ಗದಿಂದ ಹುಬ್ಬಳ್ಳಿಗೆ ತೆರಳುವ ರೈಲು (ರೈ.ಸಂ.17348) ಚಿಕ್ಕಜಾಜೂರಿನಿಂದಲೇ ಪ್ರಯಾಣ ಆರಂಭಿಸಲಿದೆ. ಇದರಿಂದಾಗಿ, ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ರೈಲು ಸಂಚಾರವು ಸಂಪೂರ್ಣವಾಗಿ ರದ್ದಾಗುತ್ತದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

suddionenews

Recent Posts

ಹಿರಿಯೂರು ಬಳಿ ಉಪ ಸಭಾಪತಿಗೆ ಬೈಕ್ ಡಿಕ್ಕಿ : ಪ್ರಾಣಾಪಾಯದಿಂದ ಪಾರು

ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…

7 hours ago

ದೊಣ್ಣೆಹಳ್ಳಿಯಲ್ಲಿ ಮಾರ್ಚ್ 22 ಮತ್ತು 23 ರಂದು ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

  ಸುದ್ದಿಒನ್, ಜಗಳೂರು, ಮಾರ್ಚ್. 14 : ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ದೊಣ್ಣೆಹಳ್ಳಿ, ಸರ್ಕಾರಿ ದಂತ ಕಾಲೇಜು…

8 hours ago

ಬಾಲಕಿ ಮೇಲೆ ಅತ್ಯಾಚಾರ : ಪೋಕ್ಸೋ ಕಾಯಿದೆಯಡಿ ಕಠಿಣ ಶಿಕ್ಷೆ ವಿಧಿಸಿ : ಕರುನಾಡ ವಿಜಯಸೇನೆ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago

ಮಾ.17 ರಂದು ದೊಣ್ಣೆಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

10 hours ago

ಮಾರ್ಚ್ 16ರಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ

ಚಿತ್ರದುರ್ಗ. ಮಾ.14: ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಇದೇ ಮಾರ್ಚ್ 16 ರಂದು ಭಾನುವಾರ…

10 hours ago

ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಮಾರ್ಚ್‌. 14 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 14: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)…

11 hours ago