
ಚಳಿಗಾಲದಲ್ಲೂ ಮಳೆ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಎಲ್ಲೆಡೆ ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದಾನೆ. ಇಂಥ ಚಳಿಯಲ್ಲಿ ದೊಡ್ಡವರೇ ನಡುಗುತ್ತಾರೆ. ಇನ್ನು ಮಕ್ಕಳು.
ಅದರಲ್ಲೂ ಮಕ್ಕಳಿಗೆ ಶೀತ, ಜ್ವರ ಬರದಂತೆ ಈ ಚಳಿಯಲ್ಲಿ ಹುಷಾರಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ತ್ವಜೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ನವಜಾತ ಶಿಶುಗಳಿಗೆ ಇಂಥ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತಾಯಿ ಇದನ್ನೆಲ್ಲಾ ಗಮನ ಕೊಡಬೇಕಾಗುತ್ತದೆ.
ಹೀಗಾಗಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಸಲಹೆ ಸೂಚನೆಗಳನ್ನು ತಾಯಿ ಅನುಸರಿಸಬೇಕಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮಕ್ಕಳ ಚರ್ಮದ ಕಾಳಜಿ ಬಹಳ ಮುಖ್ಯವಾಗುತ್ತದೆ. ಚರ್ಮ ಬೇಗನೆ ಡ್ರೈ ಆಗಿ, ನಿರ್ಜೀವವಾಗುತ್ತದೆ. ಹೀಗಾಗಿ ಮಗುವಿನ ಚರ್ಮಕ್ಕೆ ಆಗಾಗ ಎಣ್ಣೆಯ ಮಸಾಜ್ ಮಾಡಬೇಕಾಗುತ್ತದೆ.

ಎಣ್ಣೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮವಷ್ಟೇ ಆಕ್ಟೀವ್ ಆಗುವುದಿಲ್ಲ, ಮೂಳೆಗಳು ಬಲಿಷ್ಟವಾಗುವುದಕ್ಕೆ ಸಹಾಯವಾಗುತ್ತದೆ. ಸಾಧ್ಯವಾದಷ್ಟು ಮಗುವಿನ ದೇಹದ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಮಾಡಬೇಕಾಗುತ್ತದೆ. ಯಾಕೆಂದರೆ ಸೂರ್ಯನ ಕಿರಣದಿಂದ ವಿಟಮಿನ್ ಡಿ ಸುಲಭವಾಗಿ ಸಿಗುತ್ತದೆ. ಹೀಗಾಗಿ ಹಲವು ಕಾಯಿಲೆಯಿಂದ ಮಗುವನ್ನು ದೂರವಿಡಬಹುದು.
ಇನ್ನು ಮಗುವಿಗೆ ಆದಷ್ಟು ಬೆಚ್ಚಗಿನ ಉಡುಪುಗಳನ್ನು ಧರಿಸಿ. ಮೊದಲೇ ಜೋರು ಚಳಿಯಿದೆ. ಜೊತೆಗೆ ಮಳೆಯೂ ಆಗಾಗ ಬರುತ್ತಿದ್ದು, ಚಳಿ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳ ಉಡುಪಿನ ಬಗ್ಗೆ ಗಮನ ಹರಿಸಬೇಕಾಗುತ್ತದೆ.
GIPHY App Key not set. Please check settings