ಚಪಾತಿ ಮತ್ತು ರೊಟ್ಟಿ ದೇಹದ ತೂಕ ಇಳಿಸಲು ಉತ್ತಮ ಆಯ್ಕೆ ಎಂದು ಹಲವರು ಪರಿಗಣಿಸುತ್ತಾರೆ. ಇವುಗಳನ್ನು ಇಷ್ಟಪಟ್ಟು ಊಟ ಮಾಡುತ್ತಾರೆ. ಎಲ್ಲರಿಗೂ ಮೃದುವಾಗಿರುವುದಿಲ್ಲ. ಎಷ್ಟೇ ಮುಂಜಾಗ್ರತೆ ವಹಿಸಿದರೂ, ಕಷ್ಟಪಟ್ಟು ಮಾಡಿದರೂ ಸಹಾ ಕೆಲವರಿಗೆ ಚಪಾತಿ ಅಥವಾ ರೊಟ್ಟಿ ಮೃದುವಾಗಿ ಮಾಡಲು ಬರುವುದಿಲ್ಲ.
ಟಿವಿಯಲ್ಲಿ ಬರುವ ಜಾಹೀರಾತುಗಳಲ್ಲಿ ನೋಡಿದಂತೆ ದುಂಡಗಿನ ಮತ್ತು ಮೃದುವಾದ ರೊಟ್ಟಿಯನ್ನು ಹೇಗೆ ಮಾಡುವುದು. ಅನುಸರಿಸಬೇಕಾದ ಸಲಹೆಗಳು ಯಾವುವು? ಇವುಗಳನ್ನು ಅನುಸರಿಸಿದರೆ ಚಪಾತಿ ಮತ್ತು ರೊಟ್ಟಿ ಮೃದುವಾಗುತ್ತದೆಯೇ ? ಪುಲ್ಕಾ ಮತ್ತು ಚಪಾತಿ ನಡುವಿನ ವ್ಯತ್ಯಾಸವೇನು? ಅವುಗಳನ್ನು ಹೇಗೆ ಬೇಯಿಸುವುದು. ಈಗ ಯಾವ ಸಲಹೆಗಳನ್ನು ಅನುಸರಿಸಬೇಕು ಎಂದು ನೋಡೋಣ.
ಯಾವ ಹಿಟ್ಟು..
ರೊಟ್ಟಿ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ಹಿಟ್ಟನ್ನೇ ಅನೇಕರು ಬಳಸುತ್ತಾರೆ. ಆದರೆ ಗೋಧಿಯನ್ನು ಹಿಟ್ಟಿನ ಗಿರಣಿಯಲ್ಲಿ ಮಾಡಿಸಿದ ಹಿಟ್ಟು ಅಂಗಡಿ ಖರೀದಿಸಿದ ಹಿಟ್ಟಿಗಿಂತಲೂ ಉತ್ತಮ ಆಯ್ಕೆಯಾಗಿದೆ.
ಹಿಟ್ಟು ಕಲಿಸುವುದು ಹೇಗೆ ?
ದೊಡ್ಡ ಬಟ್ಟಲಿನಲ್ಲಿ 2 ಕಪ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ನಿಧಾನವಾಗಿ ನೀರು ಸೇರಿಸಿ ಮಿಶ್ರಣ ಮಾಡಿ. ಉಗುರು ಬೆಚ್ಚಗಿನ ನೀರನ್ನು ಬಳಸುವುದರಿಂದ ಚಪಾತಿ ಮೃದುವಾಗುತ್ತದೆ. ಇದನ್ನು ನೆನಪಿಡಿ. ಒಂದೇ ಬಾರಿಗೆ ಎಲ್ಲಾ ನೀರನ್ನು ಸೇರಿಸುವ ಬದಲಿಗೆ ಹದಕ್ಕೆ ತಕ್ಕಷ್ಟು ಮಾತ್ರ ನೀರನ್ನು ನಿಧಾನವಾಗಿ ಹಿಟ್ಟಿಗೆ ಸುರಿದು ಮಿಶ್ರಣ ಮಾಡಿ.
ಒದ್ದೆಯಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಹಿಟ್ಟನ್ನು ಮುಚ್ಚಿ ಮತ್ತು ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ಬಿಡಿ. ನಂತರ ಹಿಟ್ಟನ್ನು ಹೊರತೆಗೆದು ಮತ್ತೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ನಯವಾಗಿಸಲು ಮತ್ತೆ ಮಿಶ್ರಣ ಮಾಡಿ.
ತಯಾರಾದ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ, ಚಪಾತಿ ಮಾಡಲು ಹಲಗೆಯ ಮೇಲೆ ಸ್ವಲ್ಪ ಹಿಟ್ಟು ಉದುರಿಸಿ, ಹಿಟ್ಟಿನ ಉಂಡೆಗಳನ್ನು ಹಾಕಿ ಚಪಾತಿಯಂತೆ ಒತ್ತಿರಿ. ಚಪಾತಿಗಳನ್ನು ದುಂಡಗೆ ಸುತ್ತಿಕೊಳ್ಳಿ. ಬೇಕಾದರೆ ತುಪ್ಪ ಸೇರಿಸಿಕೊಳ್ಳಿ.
ಮೊದಲು ಒಲೆಯ ಮೇಲೆ ಹೆಂಚನ್ನು ಬಿಸಿ ಮಾಡಿ. ಈಗ ಉಜ್ಜಿದ ಚಪಾತಿಯನ್ನು ಬಿಸಿಯಾದ ಹೆಂಚಿನ ಮೇಲೆ ಹಾಕಿ. ಸ್ವಲ್ಪ ಸಮಯದ ನಂತರ ಅದು ಬೆಂದಿದೆ ಎಂದು ತಿಳಿದು ಬಂದಾಗ ಅದನ್ನು ಇನ್ನೊಂದು ಬದಿಗೆ ತಿರುಗಿಸಿ. ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಚಪಾತಿ ಅಥವಾ ರೊಟ್ಟಿ ಮೇಲೆ ಹಾಕಿ ಬೇಯುವವವರೆಗೆ ನಿಧಾನವಾಗಿ ಹುರಿಯಿರಿ.
ಹೆಂಚಿನ ಮೇಲೆ ಎಣ್ಣೆ ಹಾಕಿ ಬೇಯಿಸುವುದನ್ನು ಚಪಾತಿ ಎಂದೂ, ಎಣ್ಣೆ ಹಾಕದೆ ಒಲೆಯ ಮೇಲೆ ಬೇಯುವುದನ್ನು ಪುಲ್ಕಾ ಎಂದೂ ಕರೆಯುತ್ತಾರೆ. ನಿಮಗೆ ಯಾವದು ಇಷ್ಟವೋ ಅದನ್ನು ಮಾಡಿಕೊಳ್ಳಿ.
ಬೀದರ್,(ಏಪ್ರಿಲ್ 16): ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಏ. 16 : ಹೊಳಲ್ಕೆರೆ…
ಚಿತ್ರದುರ್ಗ. ಏ.16: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ…
ಚಿತ್ರದುರ್ಗ. ಏ.16: ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಹಜ್ ಸಮಿತಿ ಸಹಯೋಗದೊಂದಿಗೆ ಬುಧವಾರ ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲೆಯ 99…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ರಂಗಭೂಮಿ ಚಟುವಟಿಕೆಗಳ ಆಯಾಮಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಕ…
ಚಿತ್ರದುರ್ಗ. ಏ.16:ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಯೂನಿಯನ್ ಪಾರ್ಕ್ ಬಳಿ, ಪುಟ್‍ಪಾತ್ ಮೇಲೆ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ.…