ಬೇಸಿಗೆ ಬಿಸಿ ಈ ಬಾರಿ ಬೇಗನೇ ಶುರುವಾಗಿದೆ. ಫೆಬ್ರವರಿಗೇನೆ ರಣರಣ ಬಿಸಿಲು ಚುರುಗುಡ್ತಾ ಇತ್ತು. ಈಗಂತೂ ಆರಂಭದಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ವರ್ಷ ಮಳೆ ಕೂಡ ಉತ್ತಮವಾಗಿಯೇ ಆಗಿದೆ. ಎಲ್ಲೆಡೆ ಸುರಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ತುಳುಕುವುದಲ್ಲದೆ ಜಲಾಶಯಗಳು ಕೋಡಿ ಬಿದ್ದಿವೆ. ಇದರಿಂದ ರೈತ ಕೊಂಚ ಸಮಾಧಾನಗೊಂಡಿದ್ದಾನೆ. ಈ ವರ್ಷದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗಲ್ಲ ಎಂಬ ಸಂತಸ ಇದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಸದ್ಯದ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ನೋಡೋಣಾ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಸಾಗರ ಮೂರನೇ ಬಾರಿಗೆ ಕೋಡಿ ಬಿದ್ದಿದೆ. ಸದ್ಯ ಗರಿಷ್ಠ ನೀರಿನ ಮಟ್ಟ 2140 ಅಡಿ : 30.42 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಹಾಗೇ ಇಂದಿನ ನೀರಿನ ಮಟ್ಟ 2138.35 ಅಡಿ ನೀರು ಇದೆ. ಅಂದ್ರೆ 29.04 ಟಿಎಂಸಿ ನೀರಿದೆ. ಒಳಹರಿವು ಇಲ್ಲ, ಹೊರ ಹರಿವು 715 ಕ್ಯೂಸೆಕ್ ಆಗಿದೆ.
ಹಾಗೇ ಮಲಪ್ರಭಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2059.74 ಅಡಿ, 16.39 ಟಿಎಂಸಿ ನೀರು ಇದೆ. ತುಂಗಾ ಭದ್ರಾ ಜಲಾಸಯದಲ್ಲಿ ಇಂದಿನ ನೀರಿನ ಮಟ್ಟ, 1606.52 ಅಡಿ / 31.22 ಟಿಎಂಸಿ ಇದೆ. ಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟವನ್ನು ನೋಡೋದಾದ್ರೆ, 2139.79 ಅಡಿ / 50.57 ಟಿಎಂಸಿ ಇದೆ. ರಾಜ್ಯದಲ್ಲಿ ಇನ್ನು ಹಲವು ಪ್ರಮುಖ ಜಲಾಶಯಗಳಲ್ಲೂ ನೀರು ತುಂಬಿದ್ದು, ಬೇಸಿಗೆಯಲ್ಲಿ ಉಪಯೋಗಕ್ಕೆ ಬರುವ ಸಂತಸ ರೈತರಲ್ಲಿದೆ.
ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…
ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…
ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…
ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…