ಹೊಸಪೇಟೆ-ಕಂಪ್ಲಿ-ಕುರುಗೋಡು-ಸಿರುಗುಪ್ಪ-ಆದೋನಿ ಮಾರ್ಗದಲ್ಲಿ ವೇಗದೂತ ಬಸ್ ಸಂಚಾರ ಆರಂಭ

suddionenews
1 Min Read

ಬಳ್ಳಾರಿ, (ಸೆ.30): ಬಳ್ಳಾರಿ ವಿಭಾಗದ ಕುರುಗೋಡು ಘಟಕದಿಂದ ನೂತನವಾಗಿ ಹೊಸಪೇಟೆ-ಕಂಪ್ಲಿ-ಕುರುಗೋಡು-ಸಿರುಗುಪ್ಪ-ಆದೋನಿ ಮಾರ್ಗದಲ್ಲಿ ಅ.1ರಿಂದ ಎರಡು ವೇಗದೂತ ವಾಹನಗಳ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸಪೇಟೆ-ಕಂಪ್ಲಿ- ಕುರುಗೋಡು-ಸಿರುಗುಪ್ಪ- ಆದೋನಿ ಮಾರ್ಗದಲ್ಲಿ ಹೊಸಪೇಟೆಯಿಂದ ಒಂದು ವಾಹನ ಬೆಳಗ್ಗೆ 06.30ಕ್ಕೆ ಮತ್ತೊಂದು ವಾಹನ  ಬೆಳಗ್ಗೆ 9ಕ್ಕೆ ಬಿಡಲಾಗುವುದು. ಒಂದು ವಾಹನ ಬೆಳಗ್ಗೆ 11ಕ್ಕೆ ಮತ್ತೊಂದು ವಾಹನ 1.30ಕ್ಕೆ ಆದೋನಿ ತಲುಪಲಿದೆ.

ಆದೋನಿ-ಸಿರುಗುಪ್ಪ-ಕುರುಗೋಡು-ಕಂಪ್ಲಿ-ಹೊಸಪೇಟೆ ಮಾರ್ಗವಾಗಿ ಆದೋನಿಯಿಂದ ಒಂದು ವಾಹನ 11.30ಕ್ಕೆ ಮತ್ತೊಂದು ವಾಹನ ಮಧ್ಯಾಹ್ನ 2ಕ್ಕೆ ಬಿಡಲಾಗುತ್ತದೆ. ಒಂದು ವಾಹನ ಸಂಜೆ 4ಕ್ಕೆ ಮತ್ತೊಂದು ವಾಹನ ಸಂಜೆ 6.30ಕ್ಕೆ ಹೊಸಪೇಟೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಶೇಷ ಸೌಲಭ್ಯವನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *