Connect with us

Hi, what are you looking for?

ಪ್ರಮುಖ ಸುದ್ದಿ

ಕೋವಿಡ್ ಸಂಕಷ್ಟದಲ್ಲಿ ಮಾದರಿಯಾದ ಹೊಸದುರ್ಗ ತಾಲೂಕು ಸರ್ಕಾರಿ ನೌಕರರು

ಸುದ್ದಿಒನ್, ಚಿತ್ರದುರ್ಗ, (ಮೇ.19) : ರಾಜ್ಯ ಸರ್ಕಾರಿ ನೌಕರರ ಸಂಘದ ಹೊಸದುರ್ಗ ತಾಲೂಕು ಶಾಖೆಯಿಂದ ಬುಧವಾರ ಹೊಸದುರ್ಗ ತಾಲೂಕು ಆಸ್ಪತ್ರೆಗೆ 2 ಲಕ್ಷ ರೂ. ಬೆಲೆಯ 3 ಆಮ್ಲಜನಕ ಸಾಂದ್ರಕ ಗಳನ್ನು ವಿತರಿಸಲಾಯಿತು.

ಶಾಖೆಯ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಮಾತನಾಡಿ, ಕರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಮೊದಲ ಸಾಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಶಿಕ್ಷಕರನ್ನು ಸಹ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಸಿಎಂ ಬಿಎಸ್‍ವೈ ಘೋಷಿಸಿದ್ದಾರೆ. ಇದು ಸಂತಸದ ವಿಷಯವಾಗಿದೆ. ಸರ್ಕಾರಿ ನೌಕರರು ಸರ್ಕಾರದ ಆಡಳಿತ ಯಂತ್ರದ ಒಂದು ಭಾಗವಾಗಿ ಸರ್ಕಾರದ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಂತಹ ಜವಾಬ್ದಾರಿಯುತವಾದ ಕೆಲಸಗಳನ್ನು ನಿರ್ವಹಿಸುವ ಜೊತೆಗೆ ಸಾರ್ವಜನಿಕರಿಗಾಗಿ ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ಸೈ ಎನಿಸಿಕೊಂಡಿದೆ ಎಂದು ತಿಳಿಸಿದರು.

ಹೊಸದುರ್ಗ ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಸಂಜಯ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಅಗತ್ಯವಾದ ಆಮ್ಲಜನಕ ಸಾಂದ್ರತೆಗಳನ್ನು ಕೊಡಿಸುವಂತೆ ಸರ್ಕಾರಿ ನೌಕರರ ಸಂಘದ ಹೊಸದುರ್ಗ ಶಾಖೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಮನವಿ ಮಾಡಲಾಗಿತ್ತು.

ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರಿ ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ 3 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು ಇಡೀ ಹೊಸದುರ್ಗ ತಾಲೂಕಿನ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಹೆಮ್ಮೆಪಡುವಂತಹ ವಿಚಾರವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ತಾಲ್ಲೂಕು ಶಾಖೆ ಅಧ್ಯಕ್ಷ ಎಂ.ಆರ್.ಶಾಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!