ಮತ್ತೆ ರಾಜ್ಯಾಧ್ಯಕ್ಷನಾಗುವ ಭರವಸೆ ಇದೆ : ಬಿವೈ ವಿಜಯೇಂದ್ರ

 

ಶಿವಮೊಗ್ಗ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಬಿವೈ ವಿಜಯೇಂದ್ರ ಅವರನ್ನು ದ್ವೇಷಿಸುವ, ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿರುವ ಬೆನ್ನಲ್ಲೇ ಈ ಸಲ ಕೂಡ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆಂದು ವಿಜಯೇಂದ್ರ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ವ್ಯವಸ್ಥಿತವಾಗಿ ಸಂಘಟನೆ, ಚುನಾವಣೆ ನಡೆಯುವುದು ಬಿಜೆಪಿಯಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ರಾಜ್ಯ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ.ಬನಾನು ಅಧ್ಯಕ್ಷನಾಗಿ ಕೆಲಸ ಮಾಡಿದ ರೀತಿ ಕಾರ್ಯಕರ್ತರಿಗೆ ಗೊತ್ತಿದೆ.

ನಾನು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂಬ ಪೂರ್ಣ ವಿಶ್ವಾಸವಿದೆ. ಜಿಲ್ಲಾಧ್ಯಕ್ಷರ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಅದೇ ರೀತಿ ಪೈಪೋಟಿ ಇದೆ. ಎಲ್ಲವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಇದೆ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿ, ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕು ಎಲ್ಲವೂ ಆಗಿದೆ. ಒಂದು ವಾರದಲ್ಲಿ ಯಾರೂ ಅಧ್ಯಕ್ಷರಾಗುತ್ತಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಅದಾದ ಬಳಿಕ ಎಲ್ಲವೂ ಸರಿಯಾಗಲಿದೆ. ಕಳೆದ ವರ್ಷದಿಂದ ನಾನು ಯಾರೂ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ ಎಂದಿದ್ದಾರೆ.

suddionenews

Recent Posts

ಮಹಾಕುಂಭಮೇಳದಲ್ಲಿ ಕಾಲ್ತುಳಿತ : ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹ

  ಸುದ್ದಿಒನ್ ಮಹಾಕುಂಭ ಮೇಳದಲ್ಲಿ ಮೌನಿ ಅಮವಾಸ್ಯೆಯ ದಿನ ನಡೆದ ಕಾಲ್ತುಳಿತದ ಬಗ್ಗೆ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಧ್ವನಿ ಎತ್ತಿವೆ. ಈ…

1 hour ago

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐನಿಂದ ಬಹುಮಾನ

ಸುದ್ದಿಒನ್ : ಪ್ರತಿಷ್ಠಿತ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಅನ್ನು ಭಾರತ ತಂಡ ಎರಡನೇ ಬಾರಿಗೆ ಗೆದ್ದುಕೊಂಡಿದೆ. ಕೌಲಾಲಂಪುರದ…

3 hours ago

ಬಹಳ ದಿನಗಳ ಬಳಿಕ ಚಿನ್ನದ ದರ ಇಳಿಕೆ : ಮಹಿಳೆಯರಿಗೆ ಖುಷಿ

  ಬೆಂಗಳೂರು:  ಚಿನ್ನ ಬೆಳ್ಳಿ ಎರಡರಲ್ಲೂ ಏರಿಕೆಯಾಗುತ್ತಲೆ ಇತ್ತು. ಇನ್ನು ಚಿನ್ನದ ಮೇಲೆ ಹೇಗಪ್ಪ ಇನ್ವೆಸ್ಟ್ ಮಾಡೋದು ಅಂದುಕೊಳ್ಳುವಾಗಲೇ ಚಿನ್ನದ…

3 hours ago

ಬಹಳ ದಿನಗಳ ಬಳಿಕ ಚಿನ್ನದ ದರ ಇಳಿಕೆ : ಮಹಿಳೆಯರಿಗೆ ಖುಷಿ

ಬೆಂಗಳೂರು:  ಚಿನ್ನ ಬೆಳ್ಳಿ ಎರಡರಲ್ಲೂ ಏರಿಕೆಯಾಗುತ್ತಲೆ ಇತ್ತು. ಇನ್ನು ಚಿನ್ನದ ಮೇಲೆ ಹೇಗಪ್ಪ ಇನ್ವೆಸ್ಟ್ ಮಾಡೋದು ಅಂದುಕೊಳ್ಳುವಾಗಲೇ ಚಿನ್ನದ ದರದಲ್ಲಿ…

4 hours ago

ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಆರೋಪ : ದಾವಣಗೆರೆ ವಿವಿ ಪ್ರೊಫೆಸರ್ ಅರೆಸ್ಟ್..!

ದಾವಣಗೆರೆ: ಈಗಂತೂ ಲಂಚದ ಹಿಂದೆ ಸಾಕಷ್ಟು ಅಧಿಕಾರಿಗಳು ಬಿದ್ದಿದ್ದಾರೆ. ಯಾವೂ ಮಾಡುವ ಹುದ್ದೆಯಲ್ಲಿ ಎಲ್ಲೆಲ್ಲಿ ಲಂಚ ಸ್ವೀಕಾರ ಮಾಡುವುದಕ್ಕೆ ಅವಕಾಶವಿದೆಯೋ…

4 hours ago

ಈ ರಾಶಿಯವರನ್ನು ಪ್ರೀತಿಸುವ ಮುನ್ನ ಎಚ್ಚರದಿಂದಿರಿ

ಈ ರಾಶಿಯವರನ್ನು ಪ್ರೀತಿಸುವ ಮುನ್ನ ಎಚ್ಚರದಿಂದಿರಿ, ಸೋಮವಾರದ ರಾಶಿ ಭವಿಷ್ಯ 03 ಫೆಬ್ರವರಿ 2025 ಸೂರ್ಯೋದಯ - 6:51 AM…

10 hours ago