ಬೆಂಗಳೂರು; ಹನಿಟ್ರ್ಯಾಪ್ ವಿಚಾರ ನಿನ್ನೆ ಮೊನ್ನೆಯದ್ದಲ್ಲ. ಆಗಾಗ ಕೇಳಿ ಬರ್ತಾನೆ ಇರುತ್ತೆ. ಅದರಲ್ಲೂ ರಾಜಕಾರಣಿಗಳಿಗೂ ಬೆನ್ನು ಬಿಡದ ಬೇತಾಳದಂತೆ ಆಗಿದೆ. ಇದೀಗ ಸದ್ಯ ರಾಜ್ಯದಲ್ಲಿ ಹೆಚ್ಚಾಗಿ ಸದ್ದು ಮಾಡ್ತಾ ಇರೋದೆ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂಬುದು. ಈ ಸಂಬಂಧ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಇದು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿರುವ ವ್ಯಕ್ತಿಗಳು ಸೇರಿ ಒಟ್ಟು 48 ಗಣ್ಯರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ನಾವೂ ಸಲ್ಲಿಸುತ್ತಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪಿಐಎಲ್ ಸಲ್ಲಿಸಿದ ವ್ಯಕ್ತಿ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಇನ್ನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ಖನ್ನಾ ನೇತೃತ್ವದ ಪೀಠವು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದೆ. ಇಂದು ವಿಚಾರಣೆ ನಡೆಯದೆ ಹೋದಲ್ಲಿ ನಾಳೆಯೆರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.
ಈ ಹನಿಟ್ರ್ಯಾಪ್ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರು ಸದನದಲ್ಲಿಯೇ ಪ್ರಸ್ತಾಪಿಸಿದ್ದರು. ನನಗೆ ಇರುವ ಮಾಹಿತಿ ಪ್ರಕಾರ ಸುಮಾರು 48 ಜನರು ಇದ್ದಾರೆ. ಕೆಲವರು ಕೋರ್ಟ್ ಮೂಲಕ ಸ್ಟೇ ತಂದುಕೊಂಡಿದ್ದಾರೆ. ಇದು ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ನಾಯಕರ ಸಿಡಿಗಳು ಇದಾವೆ. ನಾನು ಲಿಖಿತ ದೂರು ನೀಡುತ್ತೇನೆ ಎಂದಿದ್ದರು. ಈ ಸಂಬಂಧ ಶಾಸಕ ಮುನಿರತ್ನ ಆಕ್ರೋಶ ಹೊರ ಹಾಕಿ, ನೇರವಾಗಿ ಡಿಕೆ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದರು. ಡಿಕೆ ಶಿವಕುಮಾರ್ ಅವರಿಗೆ ಈ ಮಹಾಪಾಪದ ಕೆಲಸವೇಕೆ ಎಂದು ಪ್ರಶ್ನೆ ಮಾಡಿದ್ದರು.
ಬೆಂಗಳೂರು; ದಲಿತ ಸಮುದಾಯಗಳ ಒಳಮೀಸಲಾತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ದಲಿತ ಸಮುದಾಯದ ಒಳಮೀಸಲಾತಿ ಬಗ್ಗೆ ಬಿಗ್ ಅಪ್ಡೇಟ್…
ಬೆಂಗಳೂರು; ವಿರೋಧ ಹೆಚ್ಚಾಗುತ್ತಲೆ, ರಕ್ಷಕ್ ಮುಖಕ್ಕೆ ಮಸಿ ಬಳಿಯುತ್ತೇವೆಂದೆಲ್ಲಾ ಮಾತುಗಳು ಬಂದ ಮೇಲೆ ಈಗ ಕ್ಷಮೆ ಕೇಳಿದ್ದಾರೆ. ಚಾಮುಂಡೇಶ್ವರಿ ಭಕ್ತರಿಗೆ…
ಬೆಂಗಳೂರು; ನಂದಿನಿ ಹಾಲಿನ ದರ ಪದೇ ಪದೇ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ತಲೆ ಬಿಸಿಯಾಗಿದೆ. ಒಮ್ಮೆ ಹಾಲನ್ನು ಹೆಚ್ಚು ಮಾಡಿ ದರವನ್ನು…
ಬೆಂಗಳೂರು; ಬಿಜೆಪಿಯಲ್ಲಿಯೇ ಇದ್ದುಕೊಂಡು ಮುಖ್ಯಮಂತ್ರಿ ಆಗಿದ್ದವರ ಫ್ಯಾಮಿಲಿಯನ್ನೇ ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು…
ಬಳ್ಳಾರಿ,ಮಾ.27 : ಜರ್ಮನಿಯ ಲಿಂಡೌನಲ್ಲಿ ಜೂನ್ 29ರಿಂದ ಜುಲೈ 4ರವರೆಗೆ ಜರುಗಲಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಲಿಂಡೌ ನೊಬೆಲ್ ಪುರಸ್ಕೃತರ…
ಬಳ್ಳಾರಿ,ಮಾ.27 : ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು…