ಹನಿಟ್ರ್ಯಾಪ್ ಪ್ರಕರಣ; ಎಂಟ್ರಿ ಕೊಟ್ಟ ಸಿಐಡಿ

ಬೆಂಗಳೂರು; ಸಚಿವ ಕೆ.ಎನ್.ರಾಜಣ್ಣ ಮೇಲೆ ಬಂದಿರುವ ಹನಿಟ್ರ್ಯಾಪ್ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಈಗಾಗಲೇ ಗೃಹಸಚಿವರಿಗೆ ದೂರನ್ನು ನೀಡಿದ್ದಾರೆ. ಇದೀಗ ಈ ಹನಿಟ್ರ್ಯಾಪ್ ಪ್ರಕರಣಕ್ಕೆ ಸಿಐಡಿ ಅಧಿಕಾರಿಗಳು ಎಂಟ್ರಿಯಾಗಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಅದರಲ್ಲೂ ಸರ್ಕಾರಿ ನಿವಾಸದಿಂದಲೇ ತನಿಖೆ ಪ್ರಾರಂಭಿಸಿದ್ದಾರೆ.

ಇನ್ನು ಸಿಐಡಿ ಅಧಿಕಾರಿಗಳು ರಾಜಣ್ಣ ಮನೆಯಲ್ಲಿಯೂ ಪರಿಶೀಲನೆ ನಡೆಸುತ್ತಿದ್ದಾರೆ. ಸಿಐಡಿ ಡಿಐಜಿ ವಂಶಿಕೃಷ್ಟ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿದ್ದು, ಸಿಐಡಿ ಎಸ್ಪಿ ರಾಘವೇಂದ್ರ, ಡಿವೈಎಸ್ಪಿ ಕೇಶವ್ ತಂಡ ಸಾಥ್ ನೀಡಿದೆ.

ರಾಜಣ್ಣ ಮನೆಗೆ ವಿಚಾರಣೆಗೆಂದು ಹೋದ ಸಿಐಡಿ ಅಧಿಕಾರಿಗಳು ಅಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜಣ್ಣ ಅವರನ್ನು ಯಾರೆಲ್ಲಾ ಭೇಟಿ ಮಾಡಿದರು ಎಂಬುದನ್ನ ಹಾಜರಾತಿಯ ಲೆಡ್ಜರ್ ಬುಕ್ ನಲ್ಲೂ ಪರಿಶೀಲನೆ ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಶುರುವಾದ ಹಿನ್ನೆಲೆ ಸಿಐಡಿಗೆ ವಹಿಸಲಾಗಿದೆ.

ಹನಿಟ್ರ್ಯಾಪ್ ಕೇಸ್ ಪ್ರಕರಣ ಸಿಎಂ ಹಾಗೂ ಗೃಹ ಮಂತ್ರಿಗಳ ತೀರ್ಮಾನಕ್ಕೆ ಬಿಟ್ಟಿದ್ದು. ಅವರು ಏನೇ ತೀರ್ಮಾನ ತೆಗೆದುಕೊಂಡರು ಅದೇ ಫೈನಲ್ ಎಂದು ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕೇಸ್ ಗೆ ಸಂಬಂಧಿಸಿದಂತೆ ಕೆ.ಎನ್.ರಾಜಣ್ಣ ದೂರು ಕೊಡುವುದಕ್ಕೆ ಹೋಗಿರಲಿಲ್ಲ. ಆದರೆ ಗೃಹಮಂತ್ರಿಗಳು ನೀಡಿದ ಭರವಸೆಯಿಂದಾಗಿ ರಾಜಣ್ಣ ಅವರು ದೂರನ್ನ ನೀಡಿದರು. ಗೃಹಸಚಿವ ಜಿ.ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆಗೆ ಕೈ ಹಾಕಿದ್ದಾರೆ. ಗೃಹಸಚಿವರ ಸೂಚನೆಯ ಮೇರೆಗೆ ಸಿಐಡಿ ಅಧಿಕಾರಿಗಳು ಹನಿಟ್ರ್ಯಾಪ್ ಮೂಲವನ್ನ ತಡಕಾಡುತ್ತಿದ್ದಾರೆ. ಆರಂಭದಲ್ಲಿಯೇ ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾಗಲು ಯಾರೆಲ್ಲಾ ಬಂದಿದ್ದರು, ಅದರಲ್ಲೂ ಹೆಣ್ಣು‌ಮಕ್ಕಳ ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

suddionenews

Recent Posts

ಈ ಪುಟಾಣಿಯ ಚಿಕಿತ್ಸೆಗೆ 16 ಕೋಟಿಯ ಅಗತ್ಯ ; ಕೈಜೋಡಿಸಿದ ಕಿಚ್ಚ ಸುದೀಪ್

ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…

9 hours ago

ಚಿತ್ರದುರ್ಗ : ಯುಗಾದಿ ಹಬ್ಬ ಆಚರಣೆ : ಚಂದ್ರನನ್ನು ಕಣ್ತುಂಬಿಕೊಂಡ ಜನತೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು.…

10 hours ago

ಚಿತ್ರದುರ್ಗ : ಯುಗಾದಿ ವೇಳೆ ಇಸ್ಪೀಟ್ ಜೂಜಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ : 575 ಜನ ಮತ್ತು 7 ಲಕ್ಷ ವಶಕ್ಕೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್…

11 hours ago

ಚಿತ್ರದುರ್ಗ : ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬ ಆಚರಣೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶೇಷವಾದ…

11 hours ago

ಚಿತ್ರದುರ್ಗ : ಮಡಿವಾಳರ ವಿದ್ಯಾರ್ಥಿನಿಲಯ ನಾಮಫಲಕ ಉದ್ಘಾಟನೆ

ವರದಿ ಮತ್ತು ಫೋಟೋ ಕೃಪೆ                      ಕೆ.ಎಂ.ಮುತ್ತುಸ್ವಾಮಿ…

11 hours ago

ಯುವಕರು ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು : ಆರ್.ಶೇಷಣ್ಣಕುಮಾರ್

ವರದಿ ಮತ್ತು ಫೋಟೋ ಕೃಪೆ                    ಕೆ.ಎಂ.ಮುತ್ತುಸ್ವಾಮಿ ಕಣ್ಣನ್…

12 hours ago