ಚಿತ್ರದುರ್ಗ : (ಆ.20) : ಮದ್ಯಪಾನ ನಿಷೇಧ, ವಿಧವಾ ವಿವಾಹ ಮೊದಲಾದ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಶತಮಾನದಿಂದಾಚೆಯೇ ಯತ್ನಿಸಿ, ನೆರೆಹಾವಳಿ ಬಂದಾಗ ಮಾನವೀಯ ನೆಲೆಗಟ್ಟಿನಲ್ಲಿ ಕಂಕಣಬದ್ಧರಾಗಿ ಸೇವೆ ಸಲ್ಲಿಸಿದ, ನ್ಯಾಯ ನಿಷ್ಠುರತೆಗೆ ಹೆಸರಾದ ಮಹನೀಯರೆಂದರೆ ಆತ್ಮೂರಿ ಲಕ್ಷ್ಮೀನರಸಿಂಹ ಸೋಮಯಾಜಿಗಳವರು ಎಂದು ಪ್ರೊ. ಟಿ.ವಿ. ಸುರೇಶಗುಪ್ತ ಹೇಳಿದರು.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯಸಂಘ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ಸೋಮಯಾಜಿಗಳವರ 178ನೇ ಜನ್ಮ ದಿನ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಆತ್ಮಗೌರವ, ಸ್ವಾಭಿಮಾನ, ಧಾರ್ಮಿಕ ಸ್ವಾವಲಂಬನೆ ಎಂಬ ಮಂತ್ರಗಳ ಅನುಷ್ಠಾನವನ್ನು ಮಾಡಬೇಕೆಂದು ಕೆಲವೊಮ್ಮೆ ಚ್ಯುತಿ ಬಂದಾಗ ಪ್ರತಿಭಟನೆ ಮಾಡಲೂ ಪ್ರತಿಪಾದಿಸಿದ್ದ ಅವರು ಜಿಲ್ಲಾ ಮುನ್ಸೀಫರಾಗಿದ್ದ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ನ್ಯಾಯಪರತೆಗೆ ಹೆಸರಾಗಿದ್ದರು. ತಮ್ಮ ಕಕ್ಷೆದಾರರಲ್ಲಿರಬಹುದಾದ ಈ ಗುಣವನ್ನು ಅರಿತೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೆಸರಾಗಿದ್ದರು.
ಕುಲಾಭಿಮಾನಕ್ಕೆ ಧಕ್ಕೆ ಒದಗಿದಾಗ ದಿಟ್ಟ ಹೋರಾಟ ಮಾಡಿ ನ್ಯಾಯಾಲಯದಲ್ಲಿಯೂ ಮೊಕದ್ದಮೆ ಹೂಡಿ ಜಯಶೀಲರಾಗಿದ್ದ ಅನೇಕ ನಿದರ್ಶನಗಳನ್ನು ವಿವರಿಸಿದರು. ಜೊತೆಗೆ ಮೈಸೂರು ಅರಸರ ವಿದೇಶ ಯಾತ್ರೆಗೆ ಅಡ್ಡಗೋಡೆ ತಂದಿಟ್ಟ ಖೊಟ್ಟಿ ಸಂಪ್ರದಾಯವಾದಿಗಳಿಗೆ, ಶಾಸ್ತ್ರಾಧಾರದೊಂದಿಗೆ ತಿಳಿವಳಿಕೆ ನೀಡಿದುದಲ್ಲದೆ ಅರಸರ ವಿದೇಶಯಾತ್ರೆ ಸಮುದ್ರಯಾನದ ಮೂಲಕ ಸಾಂಗವಾಗಿ ನೆರವೇರುವಂತೆ ಪ್ರಯತ್ನಿಸಿದರು ಎಂದು ವಿವರಿಸಿ ಆ ಮಹಾನುಭಾವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ ಧನ್ಯಭಾವ ಪಡೆದೆನೆಂದು ಹೇಳಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಎಲ್.ಆರ್.ವೆಂಕಟೇಶ್‍ಕುಮಾರ್ ಅವರು ಮಾತನಾಡಿ ಸೋಮಯಾಜಿಗಳವರ ಜಯಂತಿ ಆಚರಣೆ ಕುರಿತು ಮಹತ್ವ ವಿವರಿಸಿದರು. ಸೋಮಯಾಜಿಗಳವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬುರವು ಮಹಾಪುರುಷರ ಜಯಂತಿಯ ಆಚರಣೆ ಮೂಲಕ ಅವರ ಆದರ್ಶಗಳು, ಬದುಕಿನ ಪರಿಯು ಯುವ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ.ಪಿ. ವಿನಯ್ ವಹಿಸಿದ್ದು, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್ ಅವರು ಸರ್ವರನ್ನು ಸ್ವಾಗತಿಸಿದರು. ಎಲ್.ಎ. ಅವಿನಾಶ್ ವಂದಿಸಿದರು. ಸರ್ವದ ಸುರೇಶ್‍ಗುಪ್ತ ಅವರು ಪ್ರಾರ್ಥನೆ ಮಾಡಿದರು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…