ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 15 : ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆಯಲ್ಲಿ ಮಾ.16 ರಿಂದ 23 ರವರೆಗೆ ಬೀರಲಿಂಗೇಶ್ವರಸ್ವಾಮಿ(ಶ್ರೀಹಳ್ಳದ ಜಂಗಮ) ದೇವಾಲಯದ ಆವರಣದಲ್ಲಿ ತೋಪು ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 32 ವರ್ಷದ ನಂತರ ನಡೆಯುತ್ತಿರುವ ಜಾತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಮೂರು ಗಂಟಗೆ ಮೀಸಲು ಗೂಡೆಯೊಂದಿಗೆ ತಾಳಿಕಟ್ಟೆಯ ರಾಜ ಬೀದಿಗಳಲ್ಲಿ ಹಳ್ಳದ ಜಂಗಮ ಕಲಾ ಸಂಘ ಹಾಗೂ ಬೀರಲಿಂಗೇಶ್ವರ ಮಹಿಳಾ ವೀರಗಾಸೆ ಕಲಾ ಸಂಘದಿಂದ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಹೊರಡಲಿದೆ.
ತೋಪು ಜಾತ್ರಾ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರು ಮೂವತ್ತು ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರತಿ ನಿತ್ಯವೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ 25 ರಿಂದ 50 ಸಾವಿರ ಭಕ್ತರು ಸೇರಲಿದ್ದು, ಅಣ್ಣ-ತಮ್ಮಂದಿರೆಲ್ಲಾ ಒಂದಾಗಿ ಸೇರಿ ಆಚರಿಸುವುದು ಈ ಜಾತ್ರೆಯ ಮಹತ್ವ ಎಂದು ಹೇಳಿದರು.
ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಂಜೆ ಐದು ಗಂಟೆಗೆ ಧ್ವಜಾರೋಹಣ.
ರೇವಣ್ಣಯ್ಯ ಒಡೆಯರ್, ಗುರಯ್ಯ ಒಡೆಯರ್, ಓಂಕಾರಯ್ಯ ಒಡೆಯರ್, ಜಯಪ್ಪ ದಳವಾಯಪ್ಪ ಸ್ವಾಮಿಗಳು ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಾತ್ರಾ ಮಹೋತ್ಸವ ಉದ್ಗಾಟಿಸುವರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ತಾಳಿಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಬಸವರಾಜಪ್ಪ, ಟಿ.ಕೆ.ಚಂದ್ರಮೌಳಿ ಗುಡಿಗೌಡರು, ಮಾಜಿ ಗುಡಿಗೌಡ ಡಿ.ಕೆ.ಕೆಂಚಪ್ಪ ಮುಖ್ಯ ಅತಿಥಿಗಳಾಗಿ ತರಿಕೆರೆ ಶಾಸಕ ಶ್ರೀನಿವಾಸ್, ಕಡೂರು ಶಾಸಕ ಆನಂದ, ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲ ಸುರೇಶ್‍ಬಾಬು, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ನೇತ್ರಾವತಿ ಗಂಗಾಧರ್ ಇನ್ನು ಅನೇಕರು ಪಾಲ್ಗೊಳ್ಳುವರು ಎಂದು ಹೇಳಿದರು. ರಮೇಶ್, ಮಾಲತೇಶ್ ಅರಸ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಸುದ್ದಿಒನ್ : ವಾಕಿಂಗ್ ಮಾಡುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಪ್ರತಿದಿನ 30 ನಿಮಿಷಗಳ ವಾಕ್ ಆರೋಗ್ಯಕ್ಕೆ ಎಷ್ಟು…
ಈ ರಾಶಿಯವರು ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡಿದ್ದಾರೆ ಕೈಹಿಡಿದರೆ ಸಾಕು, ಈ ರಾಶಿಯವರು ಮದುವೆಯಾಗಿ ತಿಂಗಳಾಯಿತು ಕಲಹಗಳು ಶುರು, ಮಂಗಳವಾರದ…
ಹುಬ್ಬಳ್ಳಿ; ಜೈನ ಸಮುದಾಯದವರು ಸರ್ಕಾರಕ್ಕೆ ಒಂದಷ್ಟು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಅದರಲ್ಲೂ ಜೈನ ನಿಗಮ ಸ್ಥಾಪನೆ ಮಾಡುವ ಬಗ್ಗೆ ಹೆಚ್ಚು ಒತ್ತು…
ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬ. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೆಲ್ಲಾ ಸಮಾಧಿ ಬಳಿ ಹೋಗಿ…
ಚಿತ್ರದುರ್ಗ. ಮಾರ್ಚ್17: ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು. ನಗರದ…
ಚಿತ್ರದುರ್ಗ.ಮಾರ್ಚ್.17:ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ…