ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 26 :
ಗಣಪತಿಯ ಧಾರ್ಮಿಕ ಸ್ಥಳವಾದ ಹೊಳಲ್ಕೆರೆಯಲ್ಲಿ ನಾಳೆಯಿಂದ ( ಗುರುವಾರ) ಎರಡು ದಿನಗಳ ಕಾಲ ಜರುಗುವ 17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಪ್ರಚಾರ ರಥ :
ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಈ ಬಾರಿ ಕನ್ನಡ ರಥವನ್ನು ನಿರ್ಮಿಸಲಾಗಿದ್ದು, ತಾಲ್ಲೂಕಿನ ಎಲ್ಲ ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿದೆ. ತಾಲ್ಲೂಕು ಕೇಂದ್ರದಿಂದ ಆರಂಭವಾದ ಈ ರಥವು ಹೋಬಳಿ ಕೇಂದ್ರ ಮತ್ತು ಪ್ರಮುಖ ಗ್ರಾಮಗಳಲ್ಲಿ ಸಂಚರಿಸಿದೆ. ಆಯಾ ಗ್ರಾಪಂ ಜನಪ್ರತಿನಿಧಿಗಳು ಈ ರಥ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪ್ರೊ. ಜಿ.ಪರಮೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಗೋಷ್ಠಿಗಳು ಜರುಗಲಿವೆ. ಬಾಳೆಹೊಸೂರಿನ ಭಾವೈಕ್ಯತ ಸಂಸ್ಥಾನದ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಪ್ರಮುಖ ಮಠಾದೀಶರು ನಾನಾ ಗೋಷ್ಠಿಗಳಲ್ಲಿರಲಿದ್ದಾರೆ.
ಸಂವಿಧಾನ ಸೌಧದಲ್ಲಿ ಸಮ್ಮೇಳನ ಜರುಗಲಿದ್ದು, ಡಾ.ಡಿ.ಎಂ.ನಂಜುಂಡಪ್ಪ ಸಭಾಂಗಣ ಎಂದು ಹೆಸರಿಸಲಾಗಿದೆ. ಸೌಧದ ಮುಂಭಾಗದಲ್ಲಿ 25 ಕ್ಕೂ ಹೆಚ್ಚು ಪುಸ್ತಕ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 8.30 ಕ್ಕೆ ಧ್ವಜಾರೋಹಣ ನೆರವೇರಲಿದೆ. ನಂತರ ಜರುಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕಹಳೆ, ವೀರಗಾಸೆ, ಛತ್ರಿ,ಚಾಮರ ಸೇರಿದಂತೆ ನಾನಾ ಕಲಾತಂಡಗಳು ಪಾಲ್ಗೊಳ್ಳಲಿವೆ.
ಊಟದ ಮೆನು :
ಬೆಳಗ್ಗೆ ಉಪ್ಪಿಟ್ಟು ,ಕೇಸರಿಬಾರ್, ಮಧ್ಹಾಹ್ನ ಗೋಧಿ ಪಾಯಸ ಮತ್ತು ಅನ್ನ ಸಾಂಬಾರ್ ಮತ್ತು ರಾತ್ರಿ ಶ್ಯಾವಿಗೆ ಪಾಯಸ ಮತ್ತು ಅನ್ನ ಸಾಂಬಾರ್ ಮೆನು ಸಿದ್ಧಗೊಂಡಿದೆ.
ರಾರಾಜಿಸುತ್ತಿರುವ ಕೆಂಪು, ಹಳದಿ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡದ ಬಾವುಟಗಳು, ಫ್ಲೆಕ್ಸ್, ಬಂಟಿಗ್ಸ್‍ಗಳನ್ನು ಅಳವಡಿಸಲಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳನ್ನು ನಾಲ್ಕು ಕಡೆಗಳಲ್ಲಿ ಅಳವಡಿಸಲಾಗಿದೆ. ಸಂವಿಧಾನ ಸೌಧದ ಮುಂಭಾಗ ಮತ್ತು ಒಳಾಂಗಣದಲ್ಲಿ ನಾನಾ ರೀತಿಯ ವಿದ್ಯುತ್ ಅಲಂಕಾರ ಕೈಗೊಳ್ಳಲಾಗಿದೆ.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಂ.ಚಂದ್ರಪ್ಪ, ಜಿಲ್ಲೆಯ ಶಾಸಕರು ಮತ್ತು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಟಿ,ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ, ಜಿಪಂ ಸಿಇಒ ಎಸ್.ಜಿ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ…
ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…
ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…
ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…
ಬೆಂಗಳೂರು; ಒಂದನೇ ತರಗತಿಗೆ ಸೇರಿಸ ಬಯಸುವ ಮಕ್ಕಳನ್ನು ಶಾಲೆಗೆ ಸೇರಿಸುವ ಗೊಂದಲ ಸಾಕಷ್ಟು ಇದೆ. ಆರು ವರ್ಷ ಆಗಿರಲೇಬೇಕು ಎಂಬ…