ಹಿರಿಯೂರು‌ : ಹೆತ್ತ ತಾಯಿಯನ್ನೇ ಕೊಂದ ಮಗ

ಹಿರಿಯೂರು, ಮಾರ್ಚ್. 28 : ಕುಡಿತ ಅನ್ನೋದು ತಾನೂ ಏನು ಮಾಡ್ತಾ ಇದ್ದೀನಿ ಅನ್ನೋದನ್ನೇ ಮರೆಸಿ ಬಿಡುತ್ತದೆ. ಇಲ್ಲೊಬ್ಬ ಕುಡಿದು ತನ್ನ ತಾಯಿಯ ಪ್ರಾಣವನ್ನೇ ತೆಗೆದಿದ್ದಾನೆ. ಈ ಘಟನೆ ನಡೆದಿರೋದು ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ. ಕುಡಿದ ಮತ್ತಿನಲ್ಲಿದ್ದ ನೀಚ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಕುಡಿತವನ್ನ ಅಭ್ಯಾಸ ಮಾಡಿಕೊಂಡಿದ್ದ ಚಿತ್ರಲಿಂಗ ಎಂಬಾತನೇ ಇಂಥ ಕೃತ್ಯ ಮಾಡಿರುವುದು. ಈ ಚಿತ್ರಲಿಂಗನಿಗೆ ಈಗ 40 ವರ್ಷ ವಯಸ್ಸು. ಈತನಿಂದ ಕೊಲೆಯಾದ ದುರ್ದೈವ ತಾಯಿ, ಗಂಗಮ್ಮ. ಮೃತ ಮಹಿಳೆಗೆ 65 ವರ್ಷ. ಚಿತ್ರಲಿಂಗ ಯಾವಾಗಲೂ ಮನೆಗೆ ಕುಡಿದು ಬರುತ್ತಿದ್ದ. ಸುಮ್ಮ ಸುಮ್ಮನೆ ಜಗಳ ಮಾಡುತ್ತಿದ್ದ.ಇಂದು ಕೂಡ ಕುಡಿದು ಜಗಳ ಮಾಡಿದ್ದಾನೆ.

ಈ ವೇಳೆ ಮತ್ತಿನಲ್ಲಿ ತಾಯಿಯನ್ನೇ ಕೊಂದಿದ್ದಾನೆ. ಈ ಘಟನೆ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಿತ್ರಲಿಂಗನನ್ನು ಪೊಲೀಸರು ಬಂಧಿಸಿದ್ದಾರೆ.

suddionenews

Recent Posts

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು, ಈ ರಾಶಿಯವರು ಯಾವುದೇ ಕಾರಣಕ್ಕೂ ಉದ್ಯೋಗದ ಸ್ಥಳ ಬದಲಾಯಿಸಬಾರದು,…

16 minutes ago

ಈ ಪುಟಾಣಿಯ ಚಿಕಿತ್ಸೆಗೆ 16 ಕೋಟಿಯ ಅಗತ್ಯ ; ಕೈಜೋಡಿಸಿದ ಕಿಚ್ಚ ಸುದೀಪ್

ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…

10 hours ago

ಚಿತ್ರದುರ್ಗ : ಯುಗಾದಿ ಹಬ್ಬ ಆಚರಣೆ : ಚಂದ್ರನನ್ನು ಕಣ್ತುಂಬಿಕೊಂಡ ಜನತೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು.…

11 hours ago

ಚಿತ್ರದುರ್ಗ : ಯುಗಾದಿ ವೇಳೆ ಇಸ್ಪೀಟ್ ಜೂಜಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ : 575 ಜನ ಮತ್ತು 7 ಲಕ್ಷ ವಶಕ್ಕೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್…

12 hours ago

ಚಿತ್ರದುರ್ಗ : ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬ ಆಚರಣೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶೇಷವಾದ…

12 hours ago

ಚಿತ್ರದುರ್ಗ : ಮಡಿವಾಳರ ವಿದ್ಯಾರ್ಥಿನಿಲಯ ನಾಮಫಲಕ ಉದ್ಘಾಟನೆ

ವರದಿ ಮತ್ತು ಫೋಟೋ ಕೃಪೆ                      ಕೆ.ಎಂ.ಮುತ್ತುಸ್ವಾಮಿ…

13 hours ago