ಸುದ್ದಿಒನ್, ಹಿರಿಯೂರು, ಮಾರ್ಚ್ 23 : ನಗರದ ಐತಿಹಾಸಿಕ ಗ್ರಾಮದೇವತೆ ಶ್ರೀ ರಾಜ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ನಾಳೆಯಿಂದ (ಮಾರ್ಚ್.24) ಆರಂಭವಾಗಲಿದೆ.
1944ರಲ್ಲಿ ಜಾತ್ರೆ ನಡೆದಿತ್ತು. ಇದೀಗ 80 ವರ್ಷಗಳ ನಂತರ ಬಹು ದೊಡ್ಡ ಜಾತ್ರೆ ನಡೆಯುತ್ತಿದೆ. ಜಾತ್ರೆ ನಡೆಸುವ ಬಗ್ಗೆ ಅಮ್ಮನವರು ಅಪ್ಪಣೆ ನೀಡಿದ ಬಳಿಕ ದೇವಸ್ಥಾನ ಸಮಿತಿಯವರು ಹಾಗೂ ಭಕ್ತರು ನಿರ್ಧರಿಸಿ, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಜಾತ್ರೆ ನಡೆಸುತ್ತಿದ್ದಾರೆ. ಮಾರ್ಚ್ 24 ಭಾನುವಾರದಿಂದ ಆರಂಭಗೊಂಡ ಜಾತ್ರಾ ಮಹೋತ್ಸವ ಮಾರ್ಚ್ 27ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಮಾರ್ಚ್ 24 ಬೆಳಿಗ್ಗೆ 10.30ಕ್ಕೆ ಚಪ್ಪರ ಶಾಸ್ತ್ರ, ಸಂಜೆ 7ಗಂಟೇಗೆ ಮದಲಂಗಿತ್ತಿ ಶಾಸ್ತ್ರ,
ಮಾ. 25ರಂದು 9ಗಂಟೆಗೆ ದೇವಿಯ ಮೂಲ ಕಳಸದೊಂದಿಗೆ ಗಂಗಾಪೂಜೆ, ನಡೆಮುಡಿ ಉತ್ಸವ, ಸಂಜೆ 6.15ಕ್ಕೆಪುಷ್ಪಾಲಂಕಾರದೊಂದಿಗೆ ಉಯ್ಯಾಲೋತ್ಸವ, ಮಾ. 26ರಂದು ಬೆಳಿಗ್ಗೆ 6ಕ್ಕೆ ದೇವಿಯ ಮೂಲ ಮೂರ್ತಿಗೆ ಮಹಾರುದ್ರಾಭಿಷೇಕ ಅರ್ಚನೆ, ಅಭಿಷೇಕ ಪೂಜೆ, ಬೆಳಿಗ್ಗೆ 7ಗಂಟೇಗೆ ಸುಮಂಗಲಯರಿಂದ ಮಾಡ್ಲಕ್ಕಿ ತುಂಬುವುದು ಹಾಗೂ ತಂಬಿಟ್ಟಿನ ಆರತಿ ಸೇವೆ ಹಾಗೂ ಕೊನೆಯ ದಿನ 27ರಂದು ಬೆಳಿಗ್ಗೆ 7ಗಂಟೆಯಿಂದ ಆರತಿ ಬಾನ ಮತ್ತು ದೇವಿಯ ಬೇವಿನ ಉಡಿಗೆ ಸೇವೆ ನಂತರ ರಾತ್ರಿ 8ಗಂಟೆ ಗೆ ಓಕುಳಿ ಮತ್ತು ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಸುದ್ದಿಒನ್ ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ವೈದ್ಯಕೀಯ ತಜ್ಞರು ಯಾವಾಗಲೂ ಹೇಳುತ್ತಾರೆ. ಸೇಬು ಮಾತ್ರ ಅಲ್ಲ.…
ಈ ರಾಶಿಯವರಿಗೆ ಬಾಡಿಗೆ ಕೊಟ್ಟಿರುವ ಕಟ್ಟಡ ನಿವಾಸಿಗಳಿಂದ ತೊಂದರೆ, ಈ ರಾಶಿಯವರ ದಾಂಪತ್ಯದಲ್ಲಿ ಸಿಡಿಲು ಬಡಿದಂತಾಗಿದೆ, ಶುಕ್ರವಾರದ ರಾಶಿ ಭವಿಷ್ಯ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ 27 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…