ಹಿರೇಗುಂಟನೂರು ಲೈಂಗಿಕ ಪ್ರಕರಣ : ಪಿಡಿಒ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ : ಅನಂತಮೂರ್ತಿನಾಯ್ಕ ಒತ್ತಾಯ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ವಿವಾಹವಾಗಿ ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡಿದ್ದ ಸೌಮ್ಯಳನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥನಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ವಿಧಿಸಿ ಸೌಮ್ಯಗಳಿಗೆ ರಕ್ಷಣೆ ನೀಡುವಂತೆ ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆಯ ಜಿಲ್ಲಾಧ್ಕಕ್ಷ ಅನಂತಮೂರ್ತಿನಾಯ್ಕ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೌಮ್ಯಳ ಮನೆಗೆ ಬಂದು ಹೋಗುತ್ತಿದ್ದ ಮಂಜುನಾಥ ಕೊನೆಗೆ ಗಂಡನಿಂದ ಬೇರ್ಪಡಿಸಿ ತನ್ನ ಜೊತೆಯಿಟ್ಟುಕೊಂಡು ಸಂಸಾರ ಮಾಡುತ್ತಿದ್ದನಲ್ಲದೆ ಲಕ್ಷಗಟ್ಟಲೆ ಹಣ ಚಿನ್ನದ ಒಡವೆಗಳನ್ನು ಕಬಳಿಸಿಕೊಂಡು ಈಗ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ಸೌಮ್ಯಳನ್ನು ಈ ರೀತಿ ಶೋಷಣೆ ಮಾಡುತ್ತಿರುವುದು ಕಾನೂನು ದೃಷ್ಟಿಯಲ್ಲಿ ಅಪರಾಧ. ಹಾಗಾಗಿ ಮಂನಾಥನ ಮೇಲೆ ಕ್ರಮ ಕೈಗೊಳ್ಳುವಂತೆ ಅನಂತಮೂರ್ತಿನಾಯ್ಕ ಆಗ್ರಹಿಸಿದರು.

ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಕಾಂಗ್ರೆಸ್‍ನ ಸುಧಾ, ಕೋದಂಡರಾಮ, ಪವಿತ್ರ, ಫರ್ವಿನ್, ರೈತ ಸಂಘದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಡಿ.ಹೆಚ್.ನಾಗರಾಜಕಟ್ಟೆ, ಸೌಮ್ಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

suddionenews

Recent Posts

ವನದುರ್ಗೆಗೆ ಗೌತಮಿ ಮತ್ತೊಮ್ಮೆ ಭೇಟಿ : ಈ ಬಾರಿ ಗೆಳೆಯ, ಗಂಡನು ಸಾಥ್

ಮಂಗಳೂರು: ಸತ್ಯ ಖ್ಯತಿ ಗೌತಮಿ ಜಾದವ್ ಈ ಬಾರಿಯ ಬಿಗ್ ಬಾಸ್ ಗೆ ಬಂದಿದ್ದು, ಮತ್ತಷ್ಟು‌ ಖ್ಯಾತಿಯನ್ನು ಪಡೆದಿದ್ದಾರೆ. ಬರುವಾಗಲೇ…

3 minutes ago

241 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಂದಿನಿಂದ ಆರಂಭ

ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದು ಅದೆಷ್ಟೋ ಜನ ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಓದುತ್ತಾ ಇರುತ್ತಾರೆ. ಇದೀಗ ಅಂತವರಿಗಾಗಿ ಸರ್ಕಾರಿ…

28 minutes ago

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ : ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ : ಡಾ.ಶಾಲಿನಿ ರಜನೀಶ್

ಚಿತ್ರದುರ್ಗ. ಫೆ.05: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ…

3 hours ago

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

ಚಿತ್ರದುರ್ಗ.ಫೆ.05: ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ…

3 hours ago

ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ, ಸ್ವಾವಲಂಬಿಯಾಗಬೇಕು :  ಡಾ.ನಾಗಲಕ್ಷ್ಮಿಚೌಧರಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಕಾಂಗ್ರೆಸ್ ನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ : ಯತ್ನಾಳ್ ಬಗ್ಗೆ ರೇಣುಕಾಚಾರ್ಯ ಹಿಂಗ್ಯಾಕಂದ್ರು..?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ…

5 hours ago