
ರಾಯ್ಪುರ: ನಿಮ್ಮಲ್ಲಿ ಸನಾತನದ ಒಂದು ತುಣುಕಾದರೂ ನನ್ನನ್ನು ಬೆಂಬಲಿಸಿ, ಹಿಂದೂ ರಾಷ್ಟ್ರವನ್ನು ನಾನು ನೀಡುತ್ತೇನೆ ಎಂದು ಭಾಗೇಶ್ವರ ಧಾಮ ಮುಖ್ಯಸ್ಥ ಧೀರೇಂದ್ರ ಶಾಸ್ತ್ರ ಹೇಳಿದ್ದಾರೆ. ಈ ವಿಚಾರ ಇದೀಗ ಬಾರಿ ಚರ್ಚೆಗೆ ಗ್ರಾಸವಾಗಿದೆ.
ನಾನು ರಾಜಕಾರಣಿಯಾಗಲು ಬಯಸುವುದಿಲ್ಲ. ನಾನು ಯಾವುದೇ ಪಕ್ಷವನ್ನು ಹೊಂದುವುದಿಲ್ಲ, ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾವೂ ನಮ್ಮ ಸನಾತನವಾದಿಗಳನ್ನು ಒಗ್ಗೂಡಿಸುವ ಬಗ್ಗೆ ಮಾತ್ರ ಮಾತನಾಡಬೇಕಿದೆ. ಇದನ್ನು ಸಾಧಿಸಲು ಸನಾತನ ಧರ್ಮದ ಎಲ್ಲಾ ಜನರು ಒಗ್ಗೂಡಬೇಕಾಗಿದೆ. ಮೊದಲ ಪವಾಡವೆಂದರೆ ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ. ಎರಡನೇ ಪವಾಡವೆಂದರೆ ಬಾಗೇಶ್ವರ ಧಾಮದಲ್ಲಿ ನೋಡಬೇಕಿದೆ ಎಂದಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ. ನೀವೂ ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಘೋಷಣೆಯನ್ನು ನೀಡಿದ್ದರು. ಅದರಂತೆ ಇಂದು ನಾನು ಒಂದು ಘೋಷಣೆಯನ್ನು ನೀಡುತ್ತೇನೆ. ನೀವೂ ನನ್ನನ್ನು ಬೆಂಬಲಿಸಿ, ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ ಎಂದಿದ್ದಾರೆ.

GIPHY App Key not set. Please check settings