in

ಕೇಂದ್ರದ ಹಿಂದಿ ದಿವಸ್ ಗೆ ಕನ್ನಡಪರ ಸಂಘಟನೆಗಳ ಬಾರೀ ವಿರೋಧ, ಪ್ರತಿಭಟನೆ..!

suddione whatsapp group join

ಬೆಂಗಳೂರು: ಒತ್ತಾಯ ಪೂರ್ವಕವಾಗಿ ನಡೆಸುತ್ತಿರುವ ಹಿಂದಿ ದಿವಸ್ ಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಂದೇ ಮಾತರಂ ಸೇವಾ ಸಂಸ್ಥೆ, ಕರ್ನಾಟಕ ರಕ್ಷಣೆ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಪೊಲೀಸರು ಸಂಘಟನೆಗಳಿಗೆ ನೋಟೀಸ್ ನೀಡಿದ್ದಾರೆ. ಸಂಘಟನೆಗಳ ಮುಖಂಡರಿಗೆ ನೋಟೀಸ್ ನೀಡಿ, ಒಂದಷ್ಟು ಷರತ್ತುಗಳನ್ನು ವಿಧಿಸಿದೆ.

ಆ ಷರತ್ತುಗಳೆನೆಂದರೆ, ಯಾವುದೇ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ನಡೆಸಬಾರದು, ಸರ್ಕಾರಿ ಕಚೇರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗಬಾರದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವನ್ನುಂಟು ಮಾಡಬಾರದು ಎಂಬ ಹಲವು ಷರತ್ತುಗಳನ್ನ ವಿಧಿಸಿ ನೋಟೀಸ್ ನೀಡಿದೆ.

ಈ ಸಂಬಂಧ ಯಾವುದೇ ತೊಂದರೆಗಳಾಗಬಾರದು ಎಂಬ ನಿಟ್ಟಿನಲ್ಲಿ, ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲು, ಆಯಾ ಅಚ್ಚುಕಟ್ಟಿನ ಠಾಣೆಗೆ ನೋಟೀಸ್ ನೀಡಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕೋರ್ಟ್ ಆದೇಶ ಪಾಲಿಸಬೇಕು..ಅದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದ ಹಾಗೆ : ಹೆಚ್ ಡಿ ರೇವಣ್ಣ