ಮಂಗಳೂರು: ಪರೀಕ್ಷೆ ಮುಗಿದು ಮತ್ತೆ ಶಾಲಾ ಕಾಲೇಜುಗಳು ಆರಂಭವಾಗಿದ್ದೆ ತಡ ಮತ್ತೆ ಈ ಹಿಜಾಬ್ ಗಲಾಟೆ ಆರಂಭವಾಗಿದೆ. ಹೈಕೋರ್ಟ್ ಸೂಚನೆಯಂತೆ ಎಲ್ಲಾ ಶಾಲಾ ಕಾಲೇಜುಗಳು ಧಾರ್ಮಿಕ ವಸ್ತ್ರ ಧರಿಸಿ ಬರುವಂತಿಲ್ಲ ಎಂಬ ಸೂಚನೆಯನ್ನು ನೀಡಿದೆ. ಆದರೂ ಕೆಲ ವಿದ್ಯಾರ್ಥಿಗಳು ಮಾತ್ರ ತಮ್ಮ ಹಠ ಬಿಡುತ್ತಿಲ್ಲ. ಆಡಳಿತ ಮಂಡಳಿ ಸೂಚನೆಯನ್ನು ಮೀರಿ ಹಿಜಾಬ್ ಧರಿಸಿ ಬರುವ ಪ್ರಯತ್ನ ನಡೆಸುತ್ತಿದ್ದಾರೆ.
ಇದೀಗ ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಹದಿನೈದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಎಂಟ್ರಿಯಾಗಿದ್ದಾರೆ. ಆದರೆ ಕಾಲೇಜು ಒಳಗೆ ಅನುಮತಿ ನೀಡದ ಕಾರಣ ಲೈಬ್ರರಿಗೆ ಹೋಗಲು ಯತ್ನಿಸಿದ್ದಾರೆ. ಅಲ್ಲಿಯೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ.
ಇಂಥ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಹಿಜಾಬ್ ತೆಗೆದು ಕಾಲೇಜು ಒಳಗೆ ಬರಲು ಎಷ್ಟೆ ಮನವೊಲಿಸುವ ಪ್ರಯತ್ನ ನಡೆಸಿದರು, ವಿದ್ಯಾರ್ಥಿನಿಯರು ಒಪ್ಪಲಿಲ್ಲ. ಕಡೆಗೆ ಕಾಲೇಜು ಆವರಣದಲ್ಲಿಯೇ ಕುಳಿತು ಪುಸ್ತಕ ಓದುತ್ತಿದ್ದದ್ದು ಕಂಡು ಬಂದಿದೆ. ಇದೆಲ್ಲವನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ ಕಡೆಗೆ ಡಿಸಿ ಮೊರೆ ಹೋಗಿದೆ.