Connect with us

Hi, what are you looking for?

ಪ್ರಮುಖ ಸುದ್ದಿ

ಹೈಟೆಕ್ ಆಯ್ತು ಸರ್ಕಾರಿ ಶಾಲೆ; ಎಂಪಿ ನಾರಾಯಣಸ್ವಾಮಿ ಶ್ರಮಕ್ಕೆ ಸಿಕ್ಕ ಫಲ

ವಿಶೇಷ ವರದಿ : ಜಿ ಎಚ್ ಮೋಹನ್ ಕುಮಾರ್
                        ಜಿಲ್ಲಾ ಕಾರ್ಯದರ್ಶಿಗಳು
                      ‌‌‌  ಭಾರತೀಯ ಜನತಾ ಪಾರ್ಟಿ
                        ಚಿತ್ರದುರ್ಗ ಜಿಲ್ಲೆ ,ಮೊ : 99453 76376

ಚಿತ್ರದುರ್ಗ, ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಕ್ಕೆ ಪ್ರಮುಖ ಕಾರಣ ಅಲ್ಲಿ ಕಂಡು ಬರುವ ಅವ್ಯವಸ್ಥೆ ಮತ್ತು ಅಸಮರ್ಪಕ ‌ನಿರ್ವಹಣೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವುದಿಲ್ಲ, ಉತ್ತಮ ಅಧ್ಯಾಪಕರಿರುವುದಿಲ್ಲ, ಆಧುನಿಕ ಸೌಲಭ್ಯಗಳಿರುವುದಿಲ್ಲ, ಬಣ್ಣವಿರದ ಗೋಡೆ, ಸೋರುವ ಮಹಡಿ,‌ ನಿರ್ವಹಣೆಯಿಲ್ಲದ ಶೌಚಾಲಯ ಹೀಗೆ ಅನಾನುಕೂಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಜನರ ಮನಸ್ಥಿತಿ ಬದಲಿಸಲು ದಿಟ್ಟ ಹೆಜ್ಜೆಯಿಟ್ಟಿದ್ದಾರೆ ಸಂಸದ ಎ. ನಾರಾಯಣಸ್ವಾಮಿ.

ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಫಂಡ್ಸ್ ಅಡಿಯಲ್ಲಿ ಹೆಸರಾಂತ ಕಂಪೆನಿ ಬೋಷ್ ಪ್ರಾಯೋಜಕತ್ವದಲ್ಲಿ ಸರ್ಕಾರಿ ಶಾಲೆಯನ್ನು ಅಂತರಾಷ್ಟ್ರೀಯ ಗುಣಮಟ್ಟದ ಶಾಲೆಗಳಿಗೆ ಸರಿಸಮನಾಗಿ ನಿರ್ಮಿಸಿ ಮಾದರಿ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಸಂಸದರ ಮನವಿಯನ್ನು ಗೌರವಿಸಿ ಬೋಷ್ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ನಿಧಿ ಯೊಜನೆಯಡಿ 1.5 ರಿಂದ 2 ಕೋಟಿ ರೂ. ವೆಚ್ಚದಲ್ಲಿ ಜವಗೊಂಡನಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ನಿರ್ಮಿಸಿ ಕೊಟ್ಟಿದ್ದಾರೆ.

ಬೋಷ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಅತ್ಯದ್ಭುತ ನಿರ್ವಹಣೆ, ಗಾಳಿ ಬೆಳಕಿನ‌ ವ್ಯವಸ್ಥೆಯುಳ್ಳ 8 ವಿಶಾಲ ಶಾಲಾ ಕೊಠಡಿಗಳು, 1 ಉಪನ್ಯಾಸಕರ ಕೊಠಡಿ, 1 ಗ್ರಂಥಾಲಯ, 2 ಶೌಚಾಲಯದ ಜೊತೆಗೆ ಅತ್ಯಾಧುನಿಕ ಶಿಕ್ಷಣ ಪರಿಕರಗಳನ್ನೊಳಗೊಂಡ ಅತ್ಯುತ್ತಮ ಗುಣಮಟ್ಟದ ಶಾಲೆ ಇದಾಗಿದೆ. ಇಲ್ಲಿನ‌ ಗೋಡೆಗಳ ಮೇಲಿ ಭಿನ್ನ ಬರಹ, ಸಾಮಾಜಿಕ ಸಂದೇಶ, ಗಣ್ಯರ ನುಡಿ ಹಾಗೂ ಚಿತ್ರಗಳು ಅತ್ಯಾಕರ್ಷಕವಾಗಿದೆ.

ನಮ್ಮ ನಾಡಿನ ನಡೆ, ನುಡಿ, ಕಲೆ, ಸಂಸ್ಕೃತಿ, ಸಾಧಕರ ಅನಾವರಣವನ್ನು ಗೋಡೆಯ ಮೇಲೆ ಚಿತ್ರಕಲೆಯ ಮೂಲಕ ಪ್ರದರ್ಶಿಸಲಾಗಿದೆ. ನಮ್ಮ ನಾಡಿನ‌ ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ವಿಜ್ಞಾನಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರ ಭಾವಚಿತ್ರಗಳಿದೆ.
ಇದು ಕ್ರಿಯಾಶೀಲವಾಗಿರುವುದರ ಜೊತೆಗೆ ಮಕ್ಕಳ ಓದಿನ ಆಸಕ್ತಿಯನ್ನು ಸಹ ಹೆಚ್ಚಿಸುವಂತಿದೆ. ಮಾನವನ ಅವಿಷ್ಕಾರ, ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಬಾಹ್ಯಾಕಾಶ ಸಾಧನೆ ಕುರಿತು ಅರಿವು ಮೂಡಿಸುವ ಚಿತ್ರಗಳು ಶಾಲೆಯ ಮುಂಭಾಗದ ಗೋಡೆಯ ಮೇಲೆ ಚಿತ್ರಿಸಲಾಗಿದೆ. ಇದು ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

ಇನ್ನು ಕೊಠಡಿಯ ಒಳಭಾಗದ ಗೋಡೆಗಳಲ್ಲಿ ಪಂಚತಂತ್ರದ ಕಥೆಗಳು, ನೀತಿ ಕತೆ, ನಮ್ಮ ನಾಡಿನ ಸಂಗೀತ ನೃತ್ಯ ಪ್ರಾಕಾರಗಳು, ಹಬ್ಬಗಳು, ವಿಭಿನ್ನ ಆಚರಣೆಗಳ ಬಗ್ಗೆ ತಿಳಿಸುವ ಚಿತ್ರಗಳಿದೆ. ಇಲ್ಲಿನ ಪ್ರತಿ ಗೋಡೆಯು ವಿದ್ಯಾರ್ಥಿಗಳಿಗೆ ಸಹ ಹೊಸ ವಿಷಯ ಕಲಿಸುತ್ತದೆ.

ಒಬ್ಬ ವ್ಯಕ್ತಿಯ ಭವಿಷ್ಯದ ಬುನಾದಿಯೇ ಆತನಿಗೆ ಸಿಗುವ ಪ್ರಾಥಮಿಕ ಶಿಕ್ಷಣವಾಗಿದೆ ಎಂಬುದನ್ನು ನಂಬಿರುವ‌ ಸಂಸದರಾದ ಎ‌.ನಾರಾಯಣಸ್ವಾಮಿಯವರು ಬೋಷ್ ಸಂಸ್ಥೆಗೆ‌ ಮನವಿ ಮಾಡಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆಗೆ ನಾವೀನ್ಯತೆಯ ರೂಪ ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಮೋದಿ ನೇತೃತ್ವದ ಅಧಿಕಾರದಲ್ಲಿ ಬಡವರು, ದೀನ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಅಗತ್ಯ ವಸ್ತುಗಳ ಬೆಲೆ ಏರಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಪೆಟ್ರೋಲಿಯಂ ಪ್ರಾಡಕ್ಟ್‌ಗಳನ್ನು ವ್ಯಾಟ್ ಅಡಿಗೆ ತಂದು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ...

error: Content is protected !!