ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನು ಕೂಡಲೆ ಬಿಡುಗಡೆಗೊಳಿಸುವಂತೆ ಹೈಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
2024-25 ನೇ ಸಾಲಿನ ಶೈಕ್ಷಣಿಕ ಧನ ಸಹಾಯಕ್ಕಾಗಿ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಲು ಮಾ.30 ರವರೆಗೂ ಕಾಲಾವಕಾಶ ನೀಡಬೇಕು. ಸ್ವಂತ ನಿವೇಶನ, ಮನೆಗಳಿಲ್ಲದ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ಹಳೆ ಮನೆಯುಳ್ಳ ಕಟ್ಟಡ ಕಾರ್ಮಿಕರು ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲು ನಾಲ್ಕು ಲಕ್ಷ ರೂ.ಗಳ ಸಹಾಯಧನ ಮಂಡಳಿಯಿಂದ ಕೊಡಬೇಕು. ಕಟ್ಟಡ ಕಾರ್ಮಿಕರ ಗುರುತಿನ ಪತ್ರ ನವೀಕರಿಸಲು ನಿಗಧಿಪಡಿಸಿರುವ ಅವಧಿಯನ್ನು ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಬಿ.ಸಿ.ನಾಗರಾಜಚಾರಿ, ಜಿಕ್ರಿಯಾ, ಸಣ್ಣಮ್ಮ, ನಾಗಮ್ಮ, ಅಬ್ದುಲ್ಲಾ, ರಾಘವೇಂದ್ರ, ರಶೀದ್, ರಂಗಸ್ವಾಮಿ, ಶಿವರಾಜ್, ನವೀನ್, ಮಮ್ತಾಜ್, ಪ್ಯಾರಿಜಾನ್, ಮಂಜುನಾಥ್,
ಶೇಖ್‍ಕಲೀಂವುಲ್ಲಾ, ಗುರುಮೂರ್ತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಒನ್ ನಾಳೆ ದೆಹಲಿಯ ದೊರೆ ಯಾರಾಗುತ್ತಾರೆ ? ಎಎಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತಾ...? ಅಥವಾ ಭಾರತೀಯ…
ದಾವಣಗೆರೆ: ಫೆ.7 : ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ,…
ತುಮಕೂರು: ಈಗಷ್ಟೇ ಚಳಿಗಾಲ ಕಳೆದು ಬೇಸಿಗೆ ಶುರುವಾಗಿದೆ. ರೋಗ ರುಜಿನಗಳು ಆರಂಭವಾಗುತ್ತಿವೆ. ವೈರಲ್ ಫೀವರ್ ಜೊತೆಗೆ ಡೇಂಘಿ ಜ್ಚರ ಕೂಡ…
ಚಿತ್ರದುರ್ಗ. ಫೆ.07: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಶಾಂತಿಸಾಗರ ನೀರು ಸರಬರಾಜು ಯೋಜನೆಯ ಶಾಂತಿಸಾಗರ ಜಾಕ್‍ವೆಲ್ ವಿದ್ಯುತ್ ಸ್ಥಾವರದಲ್ಲಿ…
ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು…
ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…