Connect with us

Hi, what are you looking for?

ಪ್ರಮುಖ ಸುದ್ದಿ

ಲಾಭದಾಯಕ ಹೈನುಗಾರಿಕೆಯ ಹೈನು ತಳಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ….!

ಲಾಭದಾಯಕ ಹೈನುಗಾರಿಕೆಗೆ ಹೈನು ತಳಿಗಳ ಆಯ್ಕೆಯು ಮುಖ್ಯವಾಗಿದೆ. ಉತ್ತಮ ತಳಿಗಳ ಜೊತೆಗೆ ವೈಜ್ಞಾನಿಕ ನಿರ್ವಹಣೆ, ಸಮತೋಲಿತ ಆಹಾರ, ವಿವಿಧ ರೋಗಗಳಿಂದ ರಕ್ಷಣೆ ಮತ್ತು ವ್ಯವಸ್ಥಿತ ಮಾರುಕಟ್ಟೆಗಳು ರೈತರನ್ನು ಲಾಭದ ಕಡೆಗೆ ಕೊಂಡೊಯ್ಯುತ್ತವೆ.

ಹೈನುಗಾರಿಕೆಗೆ ದೇಶೀಯ ಮತ್ತು ವಿದೇಶಿ ತಳಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ದೇಶಿಯ ತಳಿಗಳು ಎಂದರೆ ನಮ್ಮಲಿನ ವಾತಾವರಣದಲ್ಲಿ ಅನಾದಿ ಕಾಲದಿಂದಲೂ ಹೊಂದಿಕೊಂಡು ಬಂದಿರುವ ಮತ್ತು ಅವುಗಳಲ್ಲಿ ಅಧಿಕ ಹಾಲು ಕೊಡುವ ತಳಿಗಳಾಗಿವೆ.

ವಿದೇಶಿ ತಳಿಗಳು ಅಧಿಕ ಹಾಲು ನೀಡುತ್ತವೆ ಆದರೆ ಇಲ್ಲಿನ ವಾತಾವರಣ ಮತ್ತು ಭೌಗೋಳಿಕ ಸ್ಥಿತಿಗೆ ಹೊಂದಿಕೊಳ್ಳಲಾಗದೆ ಪರಿತಪಿಸುತ್ತವೆ. ಇನ್ನು ಈ ತಳಿಗಳಲ್ಲಿ ಹೈನುಗಾರಿಕೆಗೆ ಬಳಸಲು ಯೋಗ್ಯವಾದ ರಾಸುಗಳನ್ನು ತಿಳಿದುಕೊಳ್ಳೋಣ…

ದೇಶಿಯ ತಳಿಗಳು : ಸಾಹಿವಾಲ್ , ರೆಡ್ ಸಿಂಧಿ, ಗಿರ್, ದೇವಣಿ ಮುಂತಾದವು.

ವಿದೇಶಿ ತಳಿಗಳು : ಜರ್ಸಿ, ಎಚ್.ಎಫ್ .

ಎಮ್ಮೆಯ ತಳಿಗಳು : ಮುರ್ರಾ , ಸುರ್ಟಿ .

ವಿದೇಶಿ ತಳಿಗಳನ್ನು ಹೈನುಗಾರಿಕೆಯಲ್ಲಿ ಬಳಸಲು ಇಚ್ಚಿಸುವವರು ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಅದೇನೆಂದರೆ ಹೈನುಗಾರಿಕೆಯಲ್ಲಿ ನೇರವಾಗಿ ವಿದೇಶಿ ತಳಿಗಳನ್ನು ಬಳಸದೆ ದೇಶಿಯ ತಳಿಗಳೊಡನೆ ಸಂಕರಣಗೊಳಿಸಿ ಮಿಶ್ರತಳಿಯನ್ನಾಗಿ ಮಾರ್ಪಡಿಸಿ ಬಳಸಿಕೊಳ್ಳಬೇಕು. ಹೀಗೆ ಎರಡು ಅಥವಾ ಹೆಚ್ಚು ತಳಿಗಳ ಸಂಕರಣದಿಂದ ಹಿಟ್ಟಿದ ತಳಿಗಳಿಗೆ ಮಿಶ್ರತಳಿ ಎಂದು ಕರೆಯಲಾಗುತ್ತದೆ. ಈ ಮಿಶ್ರತಳಿಗಳು ನಮ್ಮ ವಾತಾವರಣಕ್ಕೆ ಹೊಂದಿಕೊಂಡು, ರೋಗನಿರೋದಕ ಶಕ್ತಿಯನ್ನು ಅಧಿಕವಾಗಿ ಹೊಂದಿದ್ದು, ಅಧಿಕ ಹಾಲನ್ನು ನೀಡುತ್ತವೆ.

ಮಿಶ್ರತಳಿಗಳ ವಿಶೇಷ ಲಕ್ಷಣಗಳು

1. ಕರುವಿನ ಬೆಳವಣಿಗೆ ತ್ವರಿತವಾಗಿರುತ್ತವೆ.
2. ಒಂದೂವರೆ ವರ್ಷದಲ್ಲೇ ಬೆದೆಗೆ ಬಂದು ಎರಡೂವರೆ ವರ್ಷ ವಯಸ್ಸಾಗುವುದರೊಳಗೆ ಮೊದಲ ಕರು ಹಾಕುವ ಸಾಮರ್ಥ್ಯ ಪಡೆದಿವೆ.
3. ಪ್ರತಿ ವರ್ಷಕೊಮ್ಮೆ ಕರುಹಾಕುತ್ತವೆ.
4. ಹೆಚ್ಚು ಹಾಲು ಕೊಡುವ ತಳಿಗಳಾಗಿರುತ್ತವೆ ಮತ್ತು ಗರ್ಭಧರಿಸಿದ ಏಳು ತಿಂಗಳವರೆಗೆ ಹಾಲು ಕರೆಯಬಹುದು.
5. ವರ್ಷಕ್ಕೊಮ್ಮೆ ಕರು ಹಾಕುವುದರಿಂದ ಮಿಶ್ರತಳಿ ಹಸುವೊಂದು ತನ್ನ ಜೀವಿತಾವಧಿಯಲ್ಲಿ ಹೆಚ್ಚು ಉತ್ತಮ ತಳಿಯ ಕರುಗಳನ್ನು ನೀಡುತ್ತದೆ ಮತ್ತು ಅಧಿಕ ಹಾಲು ನೀಡುತ್ತದೆ.
6. ನಮ್ಮ ದೇಶಿಯ ಹಸುಗಳನ್ನು ಬಳಸಿ ಅಭಿವೃದ್ಧಿಪಡಿಸಿರುವುದರಿಂದ ವೈಜ್ಞಾನಿಕ ನಿರ್ವಹಣೆ ಮಾಡಿದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಹಾಗೂ ನಮ್ಮ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ.
7. ಗಂಡು ಕಾರುಗಳನ್ನು ಕಸಿ ಮಾಡಿಸಿ ಕೃಷಿ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು.
ಮೇಲೆ ತಿಳಿಸಿದ ರೀತಿಯಲ್ಲಿ ಹೈನುತಳಿಗಳನ್ನು ಆಯ್ದುಕೊಂಡು ಹೈನೋದ್ಯಮವನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಉತ್ತಮ ಲಾಭವನ್ನು ಗಳಿಸಬಹುದು

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರ ವರದಿಯಲ್ಲಿ 183 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47668 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 69...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಸುದ್ದಿಒನ್,ಬಳ್ಳಾರಿ, (ಜೂ.15) : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ 339 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದವರಿಗೆ ಎಷ್ಟು ಮೊತ್ತ ಸಿಗಬಹುದು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ಕಾಡುವಂತ ಪ್ರಶ್ನೆ. ಆ ಪ್ರಶ್ನೆಗೆ ಇಂದು ಐಸಿಸಿ ಉತ್ತರಿಸಿದೆ. ಟೆಸ್ಟ್ ಚಾಂಪಿಯನ್ ಶಿಪ್...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ನವದೆಹಲಿ : ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಸಿದ್ಧತೆಗಳು ನಡೆದಿವೆ. ವರ್ಷದ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪ್ರವಾಸದ ಸಮಯ...

error: Content is protected !!